Mantralaya mutt: ಕೇವಲ 22 ದಿನಗಳಲ್ಲಿ ರಾಯರ ಹುಂಡಿಗೆ ಹರಿದುಬಂತು ಕೋಟಿ ಕೋಟಿ ಕಾಣಿಕೆ! ಚಿನ್ನ ಬೆಳ್ಳಿ ಎಷ್ಟು?

Published : Oct 02, 2026, 10:59 AM IST

ಕಳೆದ ಬಾರಿಯಂತೆ ಈ ಬಾರಿಯೂ ಸೆಪ್ಟೆಂಬರ್ ತಿಂಗಳ ಶ್ರೀ ರಾಘವೇಂಡ್ರ ಮಠದ ಹುಂಡಿ ಎಣಿಕೆ ಕಾರ್ಯ ಬಿಗಿ ಭದ್ರತೆಯಲ್ಲಿ ನಡೆಯಿತು. ಕೇವಲ 22 ದಿನಗಳಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಹರಿದುಬಂದಿದೆ. ಚಿನ್ನ ಬೆಳ್ಳಿ ಎಷ್ಟು? ತಿಳಿಯಿರಿ.

PREV
15
ಮಂತ್ರಾಲಯ ಮಠಕ್ಕೆ ದಾಖಲೆ ಪ್ರಮಾಣದ ಭಕ್ತರ ಕಾಣಿಕೆ!

ರಾಯಚೂರು (ಅ.2): ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮೀಗಳ ಮಠಕ್ಕೆ ಈ ಬಾರಿಯೂ ದಾಖಲೆ ಪ್ರಮಾಣದ ಭಕ್ತರ ಕಾಣಿಕೆ ಹರಿದುಬಂದಿದೆ.

25
ಸೆಪ್ಟೆಂಬರ್ ತಿಂಗಳು ರಾಯರ ಹುಂಡಿಗೆ ಬಂದ ಕಾಣಿಕೆ ಎಷ್ಟು?

ಈ ಬಗ್ಗೆ ಮಾಹಿತಿ ನೀಡಿರುವ ಮಂತ್ರಾಲಯದ ಮಠದ ಆಡಳಿತ ಮಂಡಳಿ ಅಧಿಕಾರಿಗಳು, ಸೆಪ್ಟಂಬರ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ 22 ದಿನಗಳಲ್ಲಿ ರಾಯರ ಹುಂಡಿಗೆ 3 ಕೋಟಿ 4 ಲಕ್ಷ 37 ಸಾವಿರದ 906 ರೂ. ಜಮಾ ಆಗಿದೆ. ಇದರೊಂದಿಗೆ ಚಿನ್ನ, ಬೆಳ್ಳಿ ಇತರೆ ಕಾಣಿಕೆಗಳನ್ನು ಭಕ್ತರು ಅರ್ಪಿಸಿದ್ದಾರೆ.

35
ಮಂತ್ರಾಲಯ ಮಠ ಹುಂಡಿ ಎಣಿಕೆ: ಚಿನ್ನ ಬೆಳ್ಳಿ ಎಷ್ಟು?

ಮೂರು ಕೋಟಿ, ನಾಲ್ಕು ಲಕ್ಷ ರೂಪಾಯಿ ನಗದು ದೇಣಿಗೆಯಲ್ಲದೆ ಭಕ್ತರು ಗುರುರಾಯರಿಗೆ ಚಿನ್ನ ಬೆಳ್ಳಿ ಅಭರಣಗಳನ್ನು ಸಹ ಅರ್ಪಿಸಿದ್ದಾರೆ. ಈ ಬಾರಿ 48 ಗ್ರಾಂ ಚಿನ್ನ, 285 ಗ್ರಾಂ ಬೆಳ್ಳಿ ಸೇರಿ ಇತರೆ ಆಭರಣಗಳನ್ನು ಭಕ್ತರು ಕಾಣಿಕೆಯಾಗಿ ಅರ್ಪಿಸಿದ್ದಾರೆ.

45
ಕಳೆದ ಬಾರಿಯೂ ದಾಖಲೆ ಪ್ರಮಾಣದ ಕಾಣಿಕೆ

ಇತ್ತೀಚೆಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆಗಸ್ಟ್- ಸೆಪ್ಟೆಂಬರ್ ತಿಂಗಳ ಹುಂಡಿಯ ಎಣಿಕೆ ಕಾರ್ಯ ನಡೆಯಿತು. ಗುರು ರಾಘವೇಂದ್ರ ಸ್ವಾಮಿಗಳ 355ನೇ ಮಧ್ಯಾರಾಧನಾ ಮಹೋತ್ಸವ ವಿಶೇಷವಾಗಿ ದೇಶಾದ್ಯಂತ ಸಹಸ್ರಾರು ಭಕ್ತರು ಬಂದು ರಾಯರ ದರ್ಶನ ಪ

55
ಆಗಸ್ಟ್ ಸೆಪ್ಟೆಂಬರ್ ತಿಂಗಳ ಕಾಣಿಕೆ ಎಷ್ಟು?

ಡೆದರು. ದಾಖಲೆ ಪ್ರಮಾಣದಲ್ಲಿ ಹಣ, ಚಿನ್ನ, ಬೆಳ್ಳಿ ಕಾಣಿಕೆ ಅರ್ಪಿಸಿದ್ದರು. ಅಂದು ಕೇವಲ 16 ದಿನದಲ್ಲಿ ₹3 ಕೋಟಿ 30 ಲಕ್ಷ, 69 ಸಾವಿರದ 139 ರೂ ಕಾಣಿಕೆ ಸಂಗ್ರಹವಾಗಿತ್ತು. ಇದೀಗ ಸೆಪ್ಟೆಂಬರ್ ತಿಂಗಳಲ್ಲೂ ರಾಯರ ಮಠಕ್ಕೆ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಹರಿದುಬಂದಿದೆ.

Read more Photos on
click me!

Recommended Stories