ಬೆಂಗಳೂರು: ತಾಳಗುಪ್ಪ-ಬೆಂಗಳೂರು ನಡುವಿನ ರೈಲುಗಳು ಕೆಲವೊಮ್ಮೆ ತಾಳಗುಪ್ಪ ತಲುಪುವುದು ತುಂಬಾ ತಡವಾಗುತ್ತಿದೆ ಎನ್ನುವ ಮಾತುಗಳು ಪ್ರಯಾಣಿಕರಿಂದ ಕೇಳಿ ಬಂದಿದ್ದವು. ಇದೀಗ ಮಲೆನಾಡಿನ ರೈಲ್ವೇ ಪ್ರಯಾಣಿಕರಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಮಲೆನಾಡು ಭಾಗದ ಪ್ರಮುಖ ರೈಲ್ವೇ ಸಂಪರ್ಕ ಕೊಂಡಿಯಾಗಿರುವ ಬೀರೂರು-ತಾಳಗುಪ್ಪ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಗರಿಷ್ಠ ಸಂಚಾರ ವೇಗವನ್ನು ಹೆಚ್ಚಿಸಲಾಗಿದೆ. ಇದು ಪ್ರಯಾಣಿಕರ ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿತಾಯ ಮಾಡುವುದರ ಜತೆಗೆ ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಸುಧಾರಿಸಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
26
ಬದಲಾವಣೆಗಳು ಎಲ್ಲಿ ಮತ್ತು ಎಷ್ಟು?
ಬೀರೂರು (RRB) ಇಂದ ಕುಂಸಿ (KMSI): ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 90 ಕಿ.ಮೀ ನಿಂದ 110 ಕಿ.ಮೀ ಗೆ ಹೆಚ್ಚಿಸಲಾಗಿದೆ.
36
ಆನಂದಪುರದಿಂದ ಸಾಗರವರೆಗೆ
ಆನಂದಪುರಂ (ANF) ಇಂದ ಸಾಗರ ಜಂಬಗಾರು (SRF): ಗರಿಷ್ಠ ವೇಗವನ್ನು ಗಂಟೆಗೆ 70 ಕಿ.ಮೀ ನಿಂದ 75 ಕಿ.ಮೀ ಗೆ ಹೆಚ್ಚಿಸಲಾಗಿದೆ.