ಕಾಕ್ರೋಚ್ ಜನತಾ ಪಾರ್ಟಿಗೆ 'ಲಕ್ಷ್ಮಣರೇಖೆ' ಎಳೆದ ಜಗದೀಶ್ಚಂದ್ರ; ಚಿಕ್ಕಮಗಳೂರಲ್ಲಿ 'ಹಿಟ್ ಜನತಾ ಪಾರ್ಟಿ' ಸ್ಥಾಪನೆ!

Published : May 22, 2026, 06:23 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ 'ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ'ಗೆ ಪ್ರತಿಯಾಗಿ ಚಿಕ್ಕಮಗಳೂರಿನಲ್ಲಿ 'ಲಕ್ಷ್ಮಣರೇಖೆ ಹಾಗೂ ಹಿಟ್ ಪಾರ್ಟಿ' ಹುಟ್ಟಿಕೊಂಡಿದೆ. ಜಗದೀಶ್ಚಂದ್ರ ಎಂಬುವವರು ಸ್ಥಾಪಿಸಿದ ಈ ಪಾರ್ಟಿ, ಜಿರಲೆಗಳ ಹಾವಳಿಯನ್ನು ನಿಯಂತ್ರಿಸುವ ಘೋಷಣೆ ಮಾಡಿದ್ದಾರೆ.

PREV
15
ಕಾಕ್ರೋಚ್ ಪಾರ್ಟಿಗೆ ಕೌಂಟರ್

ಸಾಮಾಜಿಕ ಜಾಲತಾಣಗಳಲ್ಲಿ ಯಾವುದಕ್ಕೆ ಯಾವಾಗ ಡಿಮ್ಯಾಂಡ್ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ಕೆಲವು ದಿನಗಳಿಂದ ದೇಶಾದ್ಯಂತ 'ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ' (Cockroach Party of India) ಎಂಬ ವಿಚಿತ್ರ ಹೆಸರಿನ ಟ್ರೆಂಡ್ ಸದ್ದು ಮಾಡುತ್ತಿದೆ. ಆದರೆ, ಈ ಜಿರಲೆಗಳ ಹಾವಳಿಗೆ ಬ್ರೇಕ್ ಹಾಕಲು ಈಗ ಕಾಫಿನಾಡಿನ ಮಲೆನಾಡಿಗರು ಸಜ್ಜಾಗಿದ್ದಾರೆ.

25
ಲಕ್ಷ್ಮಣರೇಖೆ ಹಾಗೂ ಹಿಟ್ ಪಾರ್ಟಿ

ನಮ್ಮ ದೇಶದಲ್ಲಿ ಈಗಾಗಲೇ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.ಕೇವಲ 5 ದಿನದಲ್ಲಿ 20 ಮಿಲಿಯನ್ ಗಿಂತ ಅಧಿಕ ಜನರು ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳು ಆಗಿದ್ದಾರೆ. ಈ ಜಿರಲೆ ಪಾರ್ಟಿಗೆ ಕೌಂಟರ್ ಕೊಡಲು ಚಿಕ್ಕಮಗಳೂರಿನಲ್ಲಿ 'ಲಕ್ಷ್ಮಣರೇಖೆ ಹಾಗೂ ಹಿಟ್ ಪಾರ್ಟಿ' (Lakshmana Rekhe & HIT Party) ಉದಯಿಸಿದೆ!

35
ಕಾಫಿನಾಡಿನಿಂದ ಕೌಂಟರ್ ಅಟ್ಯಾಕ್:

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಜಗದೀಶ್ಚಂದ್ರ ಎಂಬುವವರು ಈ ವಿಭಿನ್ನ 'ಹಿಟ್ ಪಾರ್ಟಿ'ಗೆ ಜನ್ಮ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಜಗದೀಶ್ಚಂದ್ರ ಅವರೇ ಆಯ್ಕೆಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಿರಲೆ ಪಾರ್ಟಿಯ ಆರ್ಭಟ ಹೆಚ್ಚಾದ ಬೆನ್ನಲ್ಲೇ, ಅದನ್ನು ನಿಯಂತ್ರಿಸಲು ಜಿರಲೆ ನಾಶಕ 'ಹಿಟ್' ಮತ್ತು 'ಲಕ್ಷ್ಮಣರೇಖೆ' ಹೆಸರಿನಲ್ಲಿ ಈ ಹೊಸ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.

45
ಲಕ್ಷಾಂತರ ಫಾಲೋವರ್ಸ್

ಈ ಹಿಟ್ ಪಾರ್ಟಿ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಈ ಪಾರ್ಟಿಯನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. 'ನಾವು ಜಿರಲೆಗಳಿಗೆ ಹೆದರುವುದಿಲ್ಲ, ಅವುಗಳನ್ನು ಮಟ್ಟಹಾಕಲು ನಮ್ಮ ಬಳಿ ಅಸ್ತ್ರಗಳಿವೆ' ಎಂಬ ಸ್ಲೋಗನ್‌ಗಳು ವೈರಲ್ ಆಗುತ್ತಿವೆ.

55
ಟ್ರೆಂಡಿಂಗ್ ಮೆಸೇಜ್

ಜಿರಲೆಗಳು ಎಲ್ಲಿಯೇ ಕಾಣಿಸಿಕೊಂಡರೂ ಹಿಟ್ ಸ್ಪ್ರೇ ಅಥವಾ ಲಕ್ಷ್ಮಣರೇಖೆ ಬಳಸಿ ಅವುಗಳನ್ನು ಶಮನ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹಿಟ್ ಪಾರ್ಟಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದಾರೆ.

Read more Photos on
click me!

Recommended Stories