ಹಂಪಿ ಸಮೀಪದ ಕಡ್ಡಿರಾಂಪುರ ತಾಂಡಾದಲ್ಲಿ ನಡೆದ ಗಣೇಶೋತ್ಸವದಲ್ಲಿ ಜರ್ಮನ್ ಪ್ರಜೆ ಹನ್ರಿ ಭಾಗವಹಿಸಿದ್ದರು. ಅವರು ತಮ್ಮ ಸ್ವಂತ ಹಣದಲ್ಲಿ ಹಂಪಿಯ ಇತಿಹಾಸ ಸಾರುವ ಪುಸ್ತಕಗಳನ್ನು ಖರೀದಿಸಿ ಮಕ್ಕಳು ಹಾಗೂ ಮಹಿಳೆಯರಿಗೆ ವಿತರಿಸಿದರು.
ವಿಜಯನಗರ: ನಾಡಿನೆಲ್ಲೆಡೆ ನಡೆಯುವ ಗೌರಿ ಗಣೇಶ ಹಬ್ಬ ಅದ್ದೂರಿಯಾಗಿ ನಡೆಯುತ್ತಿದೆ. ಭಾರತದ ವಿಘ್ನವಿನಾಯಕನಿಗೆ ವಿದೇಶಿ ಪ್ರಜೆಗಳು ಕೂಡ ಮಾರು ಹೋಗಿದ್ದಾರೆ. ಹಂಪಿ ಸಮೀಪದ ಕಡ್ಡಿರಾಂಪುರ ತಾಂಡಾದಲ್ಲಿ ಸಿದ್ಧಿವಿನಾಯಕ ಗಣಪತಿ ಸಂಘದ ವತಿಯಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
26
ಸ್ವಂತ ಹಣದಲ್ಲಿ ಪುಸ್ತಕ ವಿತರಣೆ
ಇಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜರ್ಮನ್ ಪ್ರಜೆ ಹನ್ರಿ ಭಾಗವಹಿಸಿ ತಮ್ಮ ಸ್ವಂತ ಹಣದಲ್ಲಿ ಹಂಪಿ ಇತಿಹಾಸ ಸಾರೋ ಪುಸ್ತಕಗಳು ವಿತರಿಸಿದ್ದಾರೆ.
36
ಹಂಪಿಗೆ ಪ್ರವಾಸಕ್ಕಾಗಿ ಬಂದಿರುವ ಹನ್ರಿ
ಕಳೆದ ಹಲವು ವರ್ಷದಿಂದ ಹಂಪಿಗೆ ಪ್ರವಾಸಕ್ಕೆ ಬರುತ್ತಿರೋ ಜರ್ಮನ್ ಪ್ರಜೆ ಹನ್ರಿ ಯವರು ಇಲ್ಲಿಯ ಸಂಸ್ಕೃತಿ, ಪರಂಪರೆಗೆ ಮಾರು ಹೋಗಿದ್ದಾರೆ. ಈ ಬಾರಿಯ ಗಣೇಶೋತ್ಸವದಲ್ಲಿ ಭಾಗಿಯಾಗಿ ತಮ್ಮ ಸ್ವಂತ ಹಣದಲ್ಲಿ ಪುಸ್ತಕಗಳನ್ನು ಖರೀದಿಸಿ ಮಕ್ಕಳಿಗೆ ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಹಂಪಿಯ ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಹಂಪಿಗೆ ಸಂಬಂಧಿಸಿದ ಪುಸ್ತಕಗಳನ್ನು ಕೊಡಿಸಿದ್ದಾರೆ.
56
ಪುಸ್ತಕ ಸೇರಿದಂತೆ ಹಲವು ಉಡುಗೊರೆ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗೆದ್ದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪುಸ್ತಕ ಸೇರಿದಂತೆ ಹಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಇದರಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಅವರು ಹೊರತಂದಿರುವ ಡಾ ಮಲ್ಲಿಕಾ ಸ್ ಘಂಟಿ ಅವರ ಹಂಚಿ ಇತಿಹಾಸ ಅವಲೋಕನ, Reminiscing Hampi ಸೇರಿದಂತೆ ಹಲವು ಪುಸ್ತಕಗಳನ್ನು ಗಿಫ್ಟ್ ನೀಡಿದ್ದಾರೆ.
66
ವಿದೇಶಿಗರ ನೆಚ್ಚಿನ ತಾಣ ಹಂಪಿ
ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಪ್ರತಿ ವಷ ಸಾವಿರಾರು ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇಲ್ಲಿನ ವಿಶಿಷ್ಟ ಕಲ್ಲಿನ ವಾಸ್ತುಶಿಲ್ಪಕ್ಕೆ ವಿದೇಶಿಗರು ಮನಸೋಲದೆ ಇರೋದಿಲ್ಲ. ವಿಜಯ ವಿಠ್ಠಲ ದೇವಸ್ಥಾನ, ವಿರೂಪಾಕ್ಷ ದೇವಸ್ಥಾನ, ಕಮಲ್ ಮಹಲ್, ಆನೆ ಲಾಯ, ಹಿಪ್ಪಿ ಐಲ್ಯಾಂಡ್ ವಿದೇಶಿಗರ ನೆಚ್ಚಿನ ತಾಣಗಳಾಗಿದೆ.