ಶಿವಮೊಗ್ಗ-ಬೆಂಗಳೂರು & ಶಿವಮೊಗ್ಗ-ಚಿಕ್ಕಮಗಳೂರು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Published : Dec 27, 2025, 09:54 AM IST

ಯಾರ್ಡ್ ನಿರ್ವಹಣಾ ಕಾಮಗಾರಿಯಿಂದಾಗಿ ಶಿವಮೊಗ್ಗ-ಬೆಂಗಳೂರು ಮತ್ತು ಶಿವಮೊಗ್ಗ-ಚಿಕ್ಕಮಗಳೂರು ಮಾರ್ಗದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಜನಶತಾಬ್ದಿ ಎಕ್ಸ್‌ಪ್ರೆಸ್‌ ಸೇರಿದಂತೆ ಹಲವು ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಿಸಿದೆ.

PREV
14
ಶಿವಮೊಗ್ಗ-ಬೆಂಗಳೂರು, ಶಿವಮೊಗ್ಗ-ಚಿಕ್ಕಮಗಳೂರು

ಮುಂದಿನ ಕೆಲವು ದಿನಗಳವರೆಗೆ ಶಿವಮೊಗ್ಗ-ಬೆಂಗಳೂರು, ಶಿವಮೊಗ್ಗ-ಚಿಕ್ಕಮಗಳೂರು ನಡುವಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಭಾರತೀಯ ರೈಲ್ವೆ ಮಾಹಿತಿಯನ್ನು ನೀಡಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

24
ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಹರಿಹರ ಯಾರ್ಡ್ ನಿರ್ವಹಣಾ ಕಾಮಗಾರಿಗೆ ಸಂಬಂಧಿಸಿ ತಾತ್ಕಾಲಿಕ ಗರ್ಡ‌್ರಗಳ ಅಳವಡಿಕೆ ಮತ್ತು ತೆರವು ಕಾರ್ಯಕ್ಕಾಗಿ ಲೈನ್ ಬ್ಲಾಕ್ ಹಾಗೂ ವಿದ್ಯುತ್ ಬ್ಲಾಕ್ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ-ಬೆಂಗಳೂರು, ಶಿವಮೊಗ್ಗ-ಚಿಕ್ಕಮಗಳೂರು ನಡುವಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

34
ಯಾವ ರೈಲು?

ಶಿವಮೊಗ್ಗ ಟೌನ್‌-ತುಮಕೂರು ಎಕ್ಸ್ ಪ್ರೆಸ್ (16568) ರೈಲು ಡಿ.29ರಿಂದ ಜ.1 ಹಾಗೂ ಜ.3ರಿಂದ 7ರವರೆಗೆ ಮಾರ್ಗ ಮಧ್ಯೆ 90 ನಿಮಿಷ, ಶಿವಮೊಗ್ಗ ಟೌನ್- ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌ (12090) ರೈಲು ಡಿ.29ರಿಂದ ಜ.1 ಹಾಗೂ ಜ.3ರಿಂದ 7ರವರೆಗೆ ಮಾರ್ಗಮಧ್ಯೆ 30 ನಿಮಿಷ ನಿಯಂತ್ರಿಸಲಿದೆ.

ಇದನ್ನೂ ಓದಿ: ಮೋಡಗಳ ಮೇಲೊಂದು ಅತಿ ಸುಂದರವಾದ ರೈಲು ನಿಲ್ದಾಣ: ಆಕ್ಸಿಜನ್ ಮಾಸ್ಕ್ ಕಡ್ಡಾಯ

44
ಸಮಯದಲ್ಲಿ ಬದಲಾವಣೆ

ಚಿಕ್ಕಮಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್(56272) ರೈಲು ಜ.20ರಿಂದ 22ರವರೆಗೆ ಹಾಗೂ ಜ.24ರಿಂದ 26 ರವರೆಗೆ ಚಿಕ್ಕಮಗಳೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ ಎಂದು ಮೈಸೂರು ವಿಭಾಗದ ಪಿಆರ್‌ಒ ಮತ್ತು ವಿಭಾಗೀಯ ಹಣಕಾಸು ವ್ಯವಸ್ಥಾಪಕ ಪೃಥ್ವಿ ಎಸ್. ಹುಲ್ಲತ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್

Read more Photos on
click me!

Recommended Stories