Chamarajanagar: ಮಕ್ಕಳ ಕಣ್ಮನ ಸೆಳೆಯುವ ಗೊಂಬೆ ಜಗತ್ತು: ರಾಮಾಯಣ, ಮಹಾಭಾರತ, ಜಂಬೂಸವಾರಿ ಎಲ್ಲವೂ ಒಂದೇ ಮನೆಯಲ್ಲಿ

Published : Oct 14, 2026, 03:49 PM IST

ಹಳೇ ಮೈಸೂರು ಭಾಗದಲ್ಲಿ ನವರಾತ್ರಿ ದಸರಾ ಗೊಂಬೆ ಕೂರಿಸುವ ಸಂಪ್ರದಾಯ ವಿಜಯನಗರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಚಾಮರಾಜನಗರದ ಕುಟುಂಬವೊಂದು 20 ವರ್ಷಗಳಿಂದ ಈ ಪರಂಪರೆಯನ್ನು ಉಳಿಸಿಕೊಂಡು, ಪುರಾಣ ಮತ್ತು ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುತ್ತಿದೆ.

PREV
19
ದಸರಾ ಗೊಂಬೆಗಳ ಹಿಂದಿನ ಆ ರೋಚಕ ಪುರಾಣದ ರಹಸ್ಯವೇನು?

ಗೊಂಬೆ ಕೂರಿಸುವುದು ದಸರಾ ಹಬ್ಬದ ಪ್ರಮುಖ ಆಚರಣೆಗಳಲ್ಲೊಂದು. ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ದಸರಾ ಗೊಂಬೆ ಕೂರಿಸುವ ಆಚರಣೆ ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿದೆ.

29
ನೋಡುಗರ ಕಣ್ಮನ ದಸರಾ ಗೊಂಬೆ ಕೂರಿಸುವ ಸಂಪ್ರದಾಯ

ಚಾಮರಾಜನಗರ ಜಿಲ್ಲೆಯ ಕುಟುಂಬವೊಂದು ಕಳೆದ ಇಪ್ಪತ್ತು ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ದಸರಾ ಗೊಂಬೆ ಕೂರಿಸುವ ಆಚರಣೆ ಮಾಡಿಕೊಂಡು ಬರುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದ್ದು ಅತ್ಯಾಕರ್ಷಕವಾಗಿರುವ ಈ ದಸರಾ ಗೊಂಬೆ ಪ್ರದರ್ಶನ ಹೇಗಿರುತ್ತದೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.

39
ದೇವತೆಗಳು ಗೊಂಬೆಯಾದ ಪುರಾಣ

ಮಹಿಷಾಸುರನನ್ನು ದುರ್ಗಾದೇವಿ ಸಂಹರಿಸಲು ದೇವಾನು ದೇವೆತೆಗಳು ತಮ್ಮ ಶಕ್ತಿಯನ್ನು ನೀಡಿ ಶಕ್ತಿಹೀನರಾಗಿ ಪ್ರತಿಮೆಗಳಾದರು ಎಂಬ ಪುರಾಣವಿದೆ. ದೇವಾನುದೇವತೆಗಳ ಈ ತ್ಯಾಗವನ್ನು ಸ್ಮರಿಸಲು ಗೊಂಬೆ ಕೂರಿಸುವ ಪದ್ದತಿಯನ್ನು ವಿಜಯನಗರ ಸಾಮ್ರಾಜ್ಯದ ಕಾಲದಿಂದಲು ಆಚರಿಸಿಕೊಂಡು ಬರಲಾಗುತ್ತಿದೆ.

49
ಇಪ್ಪತ್ತು ವರ್ಷಗಳಿಂದ ಜೀವಂತವಾಗಿರುವ ದಸರಾ ಗೊಂಬೆ ಸಂಪ್ರದಾಯ

ದಸರಾ ಹಬ್ಬದ ಸಂದರ್ಭದಲ್ಲಿ ಹಳೇ ಮೈಸೂರು ಭಾಗದ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಪದ್ದತಿ ರೂಢಿಯಲ್ಲಿತ್ತು. ಕೆಲವು ಮನೆಗಳಲ್ಲಿ ಈಗಲೂ ದಸರಾ ಗೊಂಬೆ ಕೂರಿಸುವ ಅಚರಣೆಯನ್ನು ಅನೂಚಾನವಾಗಿ ನಡೆಸುಕೊಂಡು ಬರಲಾಗುತ್ತಿದೆ. ಕೆಲವರು ತಲೆಮಾರಿನಿಂದ ಗೊಂಬೆ ಕೂರಿಸುವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

59
ಹಳೆ ಮೈಸೂರಿನ ಸಂಪ್ರದಾಯವನ್ನು ಜೀವಂತವಾಗಿಟ್ಟ ಕುಟುಂಬ

ಈಗಿನ ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯಿಸುವ ದೃಷ್ಠಿಯಿಂದ ಮೈಸೂರು ಅರಮನೆ ಹಾಗು ದಸರಾಗೆ ಸಂಭಂದಪಟ್ಟಂತಹ ಗೊಂಬೆಗಳು, ರಾಜ ಮನೆತನದ ಆಳ್ವಿಕೆ, ಅರಮನೆ, ಅಂಬಾರಿ, ನವ ದುರ್ಗೆಯರು ಹಿಂದಿನ ಕಾಲದಲ್ಲಿ ಕಾಡಿನ ಜನರ ಸ್ಥಿತಿ ಗತಿ ಗೊಂಬೆಗಳನ್ನು ಕೂರಿಸಲಾಗಿದ್ದು, ಪೂಜೆ ಸಲ್ಲಿಸಿ ಗೊಂಬೆಗಳಿಗೆ ಆರತಿ ಮಾಡಲಾಯಿತು. ಇತ್ತೀಚಿನ ಪೀಳಿಗೆಯವರು ಸಹ ಈ ಪರಂಪರೆಯನ್ನು ಅನುಸರಿಸುತ್ತಿದ್ದು ಈ ಆಚರಣೆಯನ್ನು ಜೀವಂತವಾಗಿಟ್ಟಿದ್ದಾರೆ.

69
ಪುರಾಣ-ಇತಿಹಾಸ-ಸಂಸ್ಕೃತಿ ಎಲ್ಲವೂ ಗೊಂಬೆಗಳಲ್ಲಿ

ಈ ದಸರಾ ಗೊಂಬೆ ಪ್ರದರ್ಶನದಲ್ಲಿ ಪುರಾಣ ಹಾಗು ಐತಿಹಾಸಿಕ ಘಟನೆಗಳು, ಸಂಸ್ಕೃತಿ, ಕಲೆ ಅನಾವರಣಗೊಳಿಸುವ ಚಿತ್ರಣಗಳು, ಶ್ರೀನಿವಾಸ ಕಲ್ಯಾಣ, ಕೃಷ್ಣಾವತಾರ, ರಾಮಾಯಣ, ಮಹಾಭಾರತ, ಜಂಬೂಸವಾರಿ ಮೊದಲಾದ ಸಂಗತಿಗಳು ಬಿಂಬಿತವಾಗಿವೆ.

79
ನೂರಾರು ಹಳೆಕಾಲದ ಗೊಂಬೆಗಳು ಒಂದೇ ಕಡೆ

ಒಂಭತ್ತು ದಿನಗಳ ಕಾಲ ನಿತ್ಯವೂ ನವದುರ್ಗೆಯಯರನ್ನು ಆರಾಧಿಸಿ ಪೂಜೆ ಸಲ್ಲಿಸುವುದು ಸಹ ಗೂಂಬೆ ಕೂರಿಸುವ ಸಂಸ್ಕೃತಿಯ ಒಂದು ಭಾಗವಾಗಿದೆ. ಇಲ್ಲಿರುವ ಗೊಂಬೆಗಳು ಹಳೆ ಕಾಲದ ಪರಂಪರೆ ಬಿಂಬಿಸುವ ನೂರಾರು ಗೊಂಬೆಗಳು ಒಂದೆ ಕಡೆ ಇರುವುದರಿಂದ ಮಕ್ಕಳಿಗೆ ನೋಡುವುದಕ್ಕೆ ತುಂಬಾ ಖುಷಿಯಾಗ್ತಿದೆ.

89
ನಾನಾ ಬಗೆಯ ಗೊಂಬೆಗಳು

ಪಟ್ಟದ ಬೊಂಬೆಗಳು ಸೇರಿದಂತೆ ನಾನಾ ಬಗೆಯ ಗೊಂಬೆಗಳು, ಹಿಂದೆ ಬಳಸುತ್ತಿದ್ದ ಹಿತ್ತಾಳೆ, ತಾಮ್ರ, ಪಿಂಗಾಣಿ ವಸ್ತುಗಳು ಗಮನ ಸೆಳೆಯುತ್ತವೆ. ಗೊಂಬೆ ಪ್ರದರ್ಶನದ ವೀಕ್ಷಣೆಗೆ ಬೇರೆ ಬೇರೆ ಊರುಗಳಿಂದ, ಅಕ್ಕಪಕ್ಕದ ಬಡಾವಣೆಗಳಿಂದ ಜನರು ಬರುವುದು ಸಾಮಾನ್ಯವಾಗಿದೆ.

99
ಗೊಂಬೆ ಪ್ರದರ್ಶನ ವೀಕ್ಷಣೆಗೆ ಜನರ ಆಗಮನ

ಒಟ್ಟಾರೆ ದಸರಾ ಗೊಂಬೆ ಕೂರಿಸುವ ಸಾಂಸ್ಕೃತಿಕ ಪರಂಪರೆ ಹಳೇ ಮೈಸೂರು ಭಾಗದಲ್ಲಿ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಗೊಂಬೆ ಪ್ರದರ್ಶನ ವೀಕ್ಷಣೆಗೆ ಬೇರೆ ಬೇರೆ ಕಡೆಯಿಂದ ಜನ ಬರುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Read more Photos on
click me!

Recommended Stories