ಇತಿಹಾಸದಲ್ಲಿ ಇದೇ ಮೊದಲು! ಬಿಳಿಗಿರಿರಂಗನ ಬೆಟ್ಟ ಸಂರಕ್ಷಿತಾರಣ್ಯದಲ್ಲಿ ಹುಲಿಗಳ ಸಂಖ್ಯೆ ದಾಖಲೆಯ ಹೆಚ್ಚಳ

Published : Oct 08, 2026, 06:20 PM IST

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ 40ಕ್ಕೆ ಕುಸಿದಿದ್ದ ಹುಲಿಗಳ ಸಂಖ್ಯೆ ಇದೀಗ ಕ್ಯಾಮೆರಾ ಟ್ರ್ಯಾಪ್ ಮೂಲಕ 68ಕ್ಕೆ ಏರಿಕೆಯಾಗಿರುವುದು ಕಂಡುಬಂದಿದೆ. ಇದು ಅರಣ್ಯ ಇಲಾಖೆ, ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

PREV
15
ಹುಲಿಗಳ ಸಂಖ್ಯೆ ಗಣನೀಯ ಹೆಚ್ಚಳ

ಚಾಮರಾಜನಗರ: ಅದು ರಾಜ್ಯದ ಪ್ರಸಿದ್ದ ಹುಲಿ ಸಂರಕ್ಷಿತ ಅರಣ್ಯ. ಆರಂಭದಲ್ಲಿ ಈ ಅರಣ್ಯದಲ್ಲಿ 65 ಹುಲಿ ಸಂಖ್ಯೆ ಇತ್ತು. ಈ ಸಂಖ್ಯೆ ಏಕಾಏಕಿ ಕಳೆದ ವರ್ಷ 40ಕ್ಕೆ ಕುಸಿದು ಹೋಗಿತ್ತು. ಇದೀಗಾ ಅರಣ್ಯಾಧಿಕಾರಿಗಳು ಕ್ಯಾಮೆರಾ ಟ್ರ್ಯಾಪ್ ಮೂಲಕ ಅಧ್ಯಯನ ನಡೆಸಿದ್ದು ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಹುಲಿ ಸಂಖ್ಯೆ ಎಷ್ಟು ಹೆಚ್ಚಳವಾಗಿದೆ ಅಂತೀರಾ ಈ ಕುರಿತು ಒಂದು ಸ್ಟೋರಿ ಎಲ್ಲಿದೆ ಓದಿ.

25
ಇತಿಹಾಸದಲ್ಲಿ ಮೊದಲ ಬಾರಿಗೆ ಹುಲಿಗಳ ಸಂಖ್ಯೆ 68 ಕ್ಕೆ ಏರಿಕೆ

ಹೇಳಿ ಕೇಳಿ ಚಾಮರಾಜನಗರ ಜಿಲ್ಲೆ ಅಂದ್ರೆ ಅದು ಹುಲಿಗಳ ನಾಡು. ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಎರಡು ವನ್ಯಧಾಮಗಳಿವೆ.ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಅರಣ್ಯ ಅಂದ್ರೆ ಅದು ಬಂಡೀಪುರ, ಇಲ್ಲಿ 180 ಕ್ಕೂ ಹೆಚ್ಚು ಹುಲಿಗಳಿವೆ.

35
ಕಾಡಲ್ಲಿ 65 ಕಾಡಿನ ಹೊರಗೆ 3 ಹುಲಿಗಳು ಇರುವ ಬಗ್ಗೆ ಮಾಹಿತಿ

ಇನ್ನೂ ಚಾಮರಾಜನಗರ ಜಿಲ್ಲೆಯ ‌ಮತ್ತೊಂದು‌ ಹುಲಿ ಸಂರಕ್ಷಿತ ಪ್ರದೇಶ ಎಂದ್ರೆ ಅದು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ.ಈ ಅರಣ್ಯ ಪ್ರದೇಶದಲ್ಲಿ 2013-14 ರ ವೇಳೆಯಲ್ಲಿ ಹುಲಿಗಳ ಸಂಖ್ಯೆ 65 ಇತ್ತು.ಈ ಸಂಖ್ಯೆ ‌ವರ್ಷದಿಂದ ವರ್ಷದಿಂದ ಕಡಿಮೆಯಾಗಿತ್ತು. ಕಳೆದ ವರ್ಷದ ಹುಲಿಗಳ ಸಂಖ್ಯೆ 35 ರಿಂದ 40 ಕುಸಿದು ಹೋಗಿತ್ತು. ಆದರೆ ಈ ಬಾರಿ ಕ್ಯಾಮೆರಾ ಟ್ರ್ಯಾಪ್ ನಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

45
ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಹೆಚ್ಚಾಯ್ತು ಹುಲಿಗಳ ಸಂಖ್ಯೆ

ಇನ್ನೂ ಬಿಳಿಗಿರಿರಂಗನ ಬೆಟ್ಟ ಹುಲಿ‌ ಸಂರಕ್ಷಿತ ಅರಣ್ಯದಲ್ಲಿ ಇದೀಗಾ ಹುಲಿಗಳ ಸಂಖ್ಯೆ 68 ಕ್ಕೆ ಏರಿಕೆಯಾಗಿದೆ. ಅದು ಕೂಡ ಅರಣ್ಯ ಪ್ರದೇಶದಲ್ಲಿ 65 ಹುಲಿಗಳು ಸೆರೆಯಾಗಿದೆ. ಇನ್ನೂ ಅರಣ್ಯ ಬಿಟ್ಟು ಹೊರ ಭಾಗದಲ್ಲಿ ಮೂರು ಹುಲಿಗಳು ವಾಸ ಮಾಡ್ತಿವೆ. ಈ ಮೂರು ಹುಲಿಗಳು ಕೂಡ ಅರಣ್ಯ ಹಾಗೂ ನಾಡು ಎರಡು ಭಾಗದಲ್ಲಿ ಕೂಡ ಓಡಾಡ್ತಿವೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 25ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಅರಣ್ಯಾಧಿಕಾರಿಗಳು ಕೂಡ ತುಂಬಾ ಸಂತಸದಿಂದ ಇದ್ದಾರೆ.

55
ಚಾಮರಾಜನಗರ ಜಿಲ್ಲೆಗೆ ಹೆಮ್ಮೆ

ಒಟ್ನಲ್ಲಿ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ‌ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಸಂರಕ್ಷಣೆಯಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಇದು ನಮ್ಮ ಅರಣ್ಯಕ್ಕೆ ಹಾಗೂ ಚಾಮರಾಜನಗರ ಜಿಲ್ಲೆಗೂ ಕೂಡ ಹೆಮ್ಮೆ ತರುವ ವಿಷಯವಾಗಿದೆ. (ವರದಿ: ಪುಟ್ಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ)

Read more Photos on
click me!

Recommended Stories