ಕರ್ನಾಟಕ ಮಣ್ಣಲ್ಲಿ ಜಪಾನ್‌ 'ಮಿಯಾಜಾಕಿ' ಕಮಾಲ್: ಕೊಪ್ಪಳ ಬಳಿಕ ಬೀದರ್‌ನಲ್ಲೂ ದುಬಾರಿ ಮಾವು? ರೇಟ್ ಸಿಕ್ಕಿದ್ದೆಷ್ಟು?

Published : May 22, 2026, 04:37 PM IST

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರೊಬ್ಬರು ಜಪಾನ್ ಮೂಲದ, ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವನ್ನು ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಹಣ್ಣಿಗೆ, ಸ್ಥಳೀಯ ಮಾರುಕಟ್ಟೆ ಸಿಗದಿರುವುದು ಸವಾಲಾಗಿದೆ.

PREV
16
ಬೀದರ್‌ನಲ್ಲೂ ಮಿಯಾಜಾಕಿ

ಜಗತ್ತಿನ ಹಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ಜಪಾನ್ ಮೂಲದ ಮಿಯಾಜಾಕಿ ಹಣ್ಣು ನಿಜಕ್ಕೂ ರಾಜರಲ್ಲಿ ರಾಜ ಎಂದು ಹೇಳಬಹುದು. ಕಾರಣ ಈ ಮಿಯಾಜಾಕಿ ಹಣ್ಣಿಗೆ 1 ಕೆಜಿಗೆ 2.5 ಲಕ್ಷ ರೂ. ಎಂದು ಹೇಳುತ್ತಾರೆ. ಆದರೆ, ಭಾರತದ ರೈತರು ಈವರೆಗೆ 10 ಸಾವಿರ ರೂ. ಕೆಜಿ ಮಾರಾಟ ಮಾಡಿದ್ದನ್ನೂ ಯಾರೂ ನೋಡಿಲ್ಲ.

ಹೀಗಿರುವಾಗ, ಕೊಪ್ಪಳದಲ್ಲಿ ಮಿಯಾಜಾಕಿ ಮಾವಿನ ಹಣ್ಣು ಬೆಳೆದು ಕೇವಲ 3 ಸಾವಿರ ರೂ.ಗೆ ಒಂದು ಕೆಜಿ ಹಣ್ಣು ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದನು. ಇದೀಗ ಬೀದರ್‌ನಲ್ಲಿಯೂ ಮತ್ತೊಬ್ಬ ರೈತ ಮಿಯಾಜಾಕಿ ಮಾವು ಬೆಳೆದು ಸುದ್ದಿಗೆ ಬಂದಿದ್ದಾರೆ. ಅವರ ಕುರಿತ ವಿಶೇಷ ಮಾಹಿತಿ ಇಲ್ಲಿದೆ ನೋಡಿ.

26
ಬೀದರ್ ರೈತರ ಪ್ರಯೋಗ ಯಶಸ್ವಿ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದ ರೈತರು ಈ ಅಪರೂಪದ ಸಾಹಸಕ್ಕೆ ಕೈಹಾಕಿದ್ದಾರೆ. ಇವರು ಜಪಾನ್ ದೇಶದಿಂದಲೇ ನೇರವಾಗಿ ಈ ಮಿಯಾಜಾಕಿ ಮಾವಿನ ಗಿಡಗಳನ್ನು ತರಿಸಿ, ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ 4 ಗಿಡಗಳನ್ನು ನಾಟಿ ಮಾಡಿದ್ದರು. ಈಗ ಈ ಗಿಡಗಳಲ್ಲಿ ಹಣ್ಣುಗಳು ಸಮೃದ್ಧವಾಗಿ ಬಂದಿವೆ.

36
200 ರಿಂದ 500 ಗ್ರಾಂವರೆಗೆ ತೂಕ

ಈ ಮಾವಿನ ಹಣ್ಣುಗಳು ಸಾಮಾನ್ಯ ಮಾವಿಗಿಂತ ಹೆಚ್ಚು ಸಿಹಿಯಾಗಿದ್ದು, ಗಾಢ ಕೆಂಪು ಬಣ್ಣದಿಂದ ಕೂಡಿವೆ. ಒಂದೊಂದು ಹಣ್ಣು ಸುಮಾರು 200 ರಿಂದ 500 ಗ್ರಾಂವರೆಗೆ ತೂಕ ಬರುತ್ತದೆ. ಸದ್ಯಕ್ಕೆ ಇದನ್ನು ಮನೆಯ ಬಳಕೆಗಾಗಿ ಬೆಳೆದಿದ್ದರೂ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಸುವ ಇರಾದೆ ರೈತರದ್ದಾಗಿದೆ.

46
ಸುದ್ದಿಗೆ ಬಂದ ರೈತ

ಅಂತಹ ಅದ್ಭುತ ಮತ್ತು ದುಬಾರಿ 'ಮಿಯಾಜಾಕಿ' (Miyazaki Mango) ಮಾವಿನ ಹಣ್ಣು ಈಗ ಕರ್ನಾಟಕದ ಮಣ್ಣಿನಲ್ಲಿಯೂ ಬೆಳೆಯುತ್ತಿದೆ. ಕೊಪ್ಪಳದ ಬಳಿಕ ಇದೀಗ ಗಡಿ ಜಿಲ್ಲೆ ಬೀದರ್‌ನ ರೈತರು ಈ ಅತಿ ದುಬಾರಿ ಮಾವು ಬೆಳೆದು ಸುದ್ದಿಯಾಗಿದ್ದಾರೆ. ಇದೀಗ ಪ್ರಾಯೋಗಿಕ ಬೆಳೆ ಯಶಸ್ವಿ ಆಗಿದ್ದು, ಹೆಚ್ಚಿನ ಗಿಡ ಬೆಳೆಯಲು ಉತ್ಸುಕರಾಗಿದ್ದಾರೆ.

56
ಕೊಪ್ಪಳದ ರೈತನ ದೊಡ್ಡ ಸಾಹಸ

ಬೀದರ್‌ಗಿಂತ ಮೊದಲು ಕೊಪ್ಪಳ ಜಿಲ್ಲೆಯ ನಾಗಪ್ಪ ಬಗನಾಳ ಎಂಬ ರೈತರು ಈ ಮಿಯಾಜಾಕಿ ಮಾವನ್ನು ಬೆಳೆದು ಸದ್ದು ಮಾಡಿದ್ದರು. ಕಲ್ ತಾವರಗೇರಾ ಗ್ರಾಮದ ನಾಗಪ್ಪ ಅವರು 2 ಎಕರೆ ಪ್ರದೇಶದಲ್ಲಿ ಬರೋಬ್ಬರಿ 180 ಗಿಡಗಳನ್ನು ಬೆಳೆಸಿದ್ದಾರೆ. ಮೂರು ವರ್ಷಗಳ ಹಿಂದೆ ದೆಹಲಿಯಿಂದ ರೈಲು ಮೂಲಕ ಸಸಿಗಳನ್ನು ತರಿಸಿದ್ದ ಅವರು, ಪ್ರತಿ ಸಸಿಗೆ 1,300 ರೂಪಾಯಿ ವೆಚ್ಚ ಮಾಡಿದ್ದರು.

66
ಬೆಲೆ ಸಿಗದೇ ಕಂಗಾಲು

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಯಾಜಾಕಿ ಮಾವಿನ ಹಣ್ಣಿಗೆ ಕೆಜಿಗೆ 2.50 ಲಕ್ಷ ರೂಪಾಯಿ ಬೆಲೆ ಇದೆ. ಇದನ್ನು ಜಪಾನ್‌ನಲ್ಲಿ 'ಸೂರ್ಯನ ಮೊಟ್ಟೆ' (Egg of the Sun) ಎಂದು ಕರೆಯಲಾಗುತ್ತದೆ. ಆದರೆ, ನಮ್ಮ ಸ್ಥಳೀಯ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಅಳಲು. ಕೊಪ್ಪಳದ ಮಾವು ಮೇಳದಲ್ಲಿ ಈ ಹಣ್ಣು ಕೆಜಿಗೆ ಕೇವಲ 3 ಸಾವಿರ ರೂಪಾಯಿಗೆ ಮಾರಾಟವಾಗಿದೆ. ವಿಶ್ವದ ಅತ್ಯಂತ ದುಬಾರಿ ಹಣ್ಣನ್ನು ಬೆಳೆದರೂ, ಅದಕ್ಕೆ ತಕ್ಕ ಮಾರುಕಟ್ಟೆ ಇಲ್ಲದಿರುವುದು ರೈತರಿಗೆ ದೊಡ್ಡ ಸವಾಲಾಗಿದೆ.

Read more Photos on
click me!

Recommended Stories