Published : Feb 07, 2026, 10:09 AM ISTUpdated : Feb 07, 2026, 10:12 AM IST
ಸಿ.ಜೆ. ರಾಯ್ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ರಾಯ್‌ಗೆ ಯಾವುದೇ ಕೌಟುಂಬಿಕ ಅಥವಾ ಆರ್ಥಿಕ ಸಮಸ್ಯೆಗಳಿರಲಿಲ್ಲ, ಆದರೆ ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಈ ಮಾನಸಿಕ ಒತ್ತಡದ ಹಿಂದಿನ ನಿಜವಾದ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಉದ್ಯಮಿ ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳಿಗೆ ಮಿಲಿಯನ್ ಡಾಲರ್ ಪ್ರಶ್ನೆಯೊಂದು ಎದುರಾಗಿದೆ. ಈ ಪ್ರಶ್ನೆಯ ಉತ್ತರಕ್ಕಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಹಾಗೆಯೇ ಪ್ರಕರಣವನ್ನು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
25
ಆದಾಯ ತೆರಿಗೆ ಇಲಾಖೆಯ ದಾಳಿ
ಉದ್ಯಮಿ ಸಿ.ಜೆ.ರಾಯ್ ಸಾವಿಗೆ ಕೇವಲ ಆದಾಯ ತೆರಿಗೆ ಇಲಾಖೆಯ ದಾಳಿ ಕಾರಣನಾ ಅಥವಾ ಬೇರೆ ಯಾವುದಾದ್ರು ಸಮಸ್ಯೆಯನ್ನು ಎದುರಿಸುತ್ತಿದ್ರಾ ಎಂಬುದರ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಸ್ಪಷ್ಟತೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಸಾವಿನ ನಿಖರ ಕಾರಣಕ್ಕಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
35
ಕೌಟುಂಬಿಕ ಜೀವನ
ಸಿ.ಜೆ.ರಾಯ್ ಅವರು ಯಾವುದೇ ಉದ್ಯಮ ಸಂಬಂಧ ಸಾಲವಿರಲಿಲ್ಲ. ಬ್ಯಾಂಕ್‌ನಿಂದ ಯಾವುದೇ ಲೋನ್ ಪಡೆದಿರಲಿಲ್ಲ. ಕೌಟುಂಬಿಕ ಜೀವನದಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ. ಸೋದರ ಸಂಬಂಧಿಗಳ ಜೊತೆಯಲ್ಲೂ ಯಾವುದೇ ಮನಸ್ತಾಪ ಇರಲಿಲ್ಲ.
ಸಿ.ಜೆ.ರಾಯ್ ಅವರು ಇತ್ತೀಚೆಗೆ ಹೊಸ ಪ್ರಾಜೆಕ್ಟ್ ಗಳನ್ನು ಘೋಷಣೆ ಮಾಡಿದ್ದರು. ಆತ್ಮ*ಹತ್ಯೆ ಸಂದರ್ಭದಲ್ಲಿ ದುಬೈ ಕೇರಳದಲ್ಲಿನ ಹೂಡಿಕೆಯಿಂದ ನಷ್ಟವಾಗಿದೆ ಅನ್ನೋ ಮಾತು ಕೇಳಿ ಬಂದಿತ್ತು. ಉದ್ಯಮದಲ್ಲಿ ನಷ್ಟವಾಗಿರೋದ್ರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಈ ಸಂಬಂಧವೂ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸಿ.ಜೆ.ರಾಯ್ ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಇದಕ್ಕಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಮಾನಸಿಕ ಒತ್ತಡ ಹೊರತುಪಡಿಸಿ ಸಿ.ಜೆ.ರಾಯ್ ಅವರಿಗೆ ಯಾವುದೇ ಆರೋಗ್ಯದ ಸಮಸ್ಯೆಗಳಿರಲಿಲ್ಲ. ಈ ಹಿಂದೆ ಚಿಕಿತ್ಸೆ ನೀಡ್ತಿದ್ದ ವೈದ್ಯರಿಂದ ಸಿ.ಜೆ.ರಾಯ್ ಅವರ ಆರೋಗ್ಯದ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಹತ್ತು ಹಲವು ಆಯಾಮಗಳಲ್ಲಿ ತನಿಖೆ ನಡೆಸ್ತಿದ್ರು ಮಾನಸಿಕ ಒತ್ತಡದ ಹಿಂದಿನ ಕಾರಣವೇನು ಅನ್ನೋದು ಪತ್ತೆಯಾಗ್ತಿಲ್ಲ.