ದಾವಣಗೆರೆ: ದಾವಣಗೆರೆಯ ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆಂಚಲ್ ಕುಮಾರಿ ಇಂದು ತಮ್ಮ 26ನೇ ವಯಸ್ಸಿಗೆ ಜೈನ ಸನ್ಯಾಸಿ ದೀಕ್ಷೆ ಸ್ವೀಕರಿಸುತ್ತಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.
ಇತ್ತೀಚೆಗೆ ಯುವ ಸಮುದಾಯ ಆಧ್ಯಾತ್ಮದ ಕಡೆಗೆ ಒಲವು ತೋರಿಸುತ್ತಾ ಬಂದಿದ್ದಾರೆ. ಇದೀಗ ದಾವಣಗೆರೆ ಮೂಲದ 26 ವರ್ಷದ ಆಂಚಲ್ ಕುಮಾರಿ ಇಂದು ಜೈನ ಸನ್ಯಾಸ ದೀಕ್ಷೆ ಪಡೆಯುತ್ತಿದ್ದಾರೆ.
25
ಸಿವಿಲ್ ಇಂಜಿನಿಯರಿಂಗ್ ನಲ್ಲಿ ಟಾಪರ್ ಸ್ಟೂಡೆಂಟ್
ದಾವಣಗೆರೆಯ BIET ಕಾಲೇಜ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಟಾಪರ್ ಸ್ಟೂಡೆಂಟ್ ಆಗಿದ್ದ ಆಂಚಲ್‌ಕುಮಾರಿ, ಇತ್ತೀಚೆಗೆ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದರು. ಸಂಸಾರದ ಸುಖಕ್ಕಿಂತ ಸನ್ಯಾಸತ್ವದ ಸುಖ ಚೆನ್ನಾಗಿದೆಯೆಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
35
ಚಿನ್ನದ ವ್ಯಾಪಾರಿ ಮುಕೇಶ್ ಹಾಗೂ ಸುನಿತಾ ಪುತ್ರಿ
ಆಂಚಲ್ ದಾವಣಗೆರೆ ಚೌಕಿಪೇಟೆಯ ಚಿನ್ನದ ವ್ಯಾಪಾರಿ ಮುಕೇಶ್ ಹಾಗೂ ಸುನಿತಾ ಅವರ ಪುತ್ರಿಯಾಗಿದ್ದಾರೆ. ಮುಕೇಶ್ ಅವರಿಗೆ ಒಟ್ಟು ಮೂವರು ಪುತ್ರಿಯರಿದ್ದು, ಮೊದಲ ಇಬ್ಬರಿಗೆ ಮದುವೆಯಾಗಿದೆ. ಇದೀಗ ಆಂಚಲ್, ತಂದೆ-ತಾಯಿ, ಆಸ್ತಿ ಪಾಸ್ತಿ ತೊರೆದು ಇಂದು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ಆಂಚಲ್ ಕುಮಾರಿ ಇಂದು ಗುಜರಾತ್‌ನ ಸೂರತ್‌ನಲ್ಲಿ ಕುಲಚಂದ್ರ ಸುರೇಶ್ವರ್ಜಿ ಗುರುಗಳಿಂದ ದೀಕ್ಷೆ ಅವರಿಂದ ಸನ್ಯಾಸತ್ವ ದೀಕ್ಷೆ ಸ್ವೀಕರಿಸುತ್ತಿದ್ದಾರೆ.
55
ಸನ್ಯಾಸಿಗಳ ನಗುವಿಗೆ ಮಾರು ಹೋದ ಆಂಚಲ್
ಆಂಚಲ್ ಕುಮಾರಿ ಇತ್ತೀಚೆಗೆ ಆಧ್ಯಾತ್ಮದತ್ತ ಒಲವು ಹೊಂದಿದ್ದರು. ಸನ್ಯಾಸಿಗಳ ನಗುವನ್ನು ನೋಡಿ ಸನ್ಯಾಸತ್ವದ ಸುಖ ಚೆನ್ನಾಗಿದೆ ಎಂದು ತೀರ್ಮಾನಿಸಿ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ.