ಚಡ್ಡಿ ಹಾಕಿ ಓಡಾಡಬೇಡಮ್ಮ ಅಂತ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ರಕ್ತಬರುವಂತೆ ಹೋಂಗಾರ್ಡ್‌ಗೆ ನಡುರಸ್ತೆಯಲ್ಲಿ ಥಳಿಸಿದ ಯುವತಿ!

Published : Jan 11, 2026, 05:27 PM IST

ಬೆಂಗಳೂರಿನ ಕೆ.ಆರ್ ಪುರಂನಲ್ಲಿ, ಚಡ್ಡಿ ಧರಿಸಿದ್ದ ಯುವತಿಗೆ ಬುದ್ಧಿವಾದ ಹೇಳಿದ ಹಿರಿಯ ಹೋಂಗಾರ್ಡ್ ಲಕ್ಷ್ಮಿನರಸಮ್ಮ ಅವರ ಮೇಲೆ ಯುವತಿ ತೀವ್ರವಾಗಿ ಹಲ್ಲೆ ಮಾಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

PREV
15
ಖಾಕಿ ಧರಿಸಿದ್ದಾಗಲೇ ಯುವತಿ ಹಲ್ಲೆ

ಬೆಂಗಳೂರಲ್ಲಿ ಬುದ್ದಿ ಹೇಳೋದೇ ತಪ್ಪಾಗಿದೆ. ಚಡ್ಡಿ ಹಾಕೊಂಡು ಬೀದಿಗೆ ಬರ್ಬೇಡಮ್ಮ ಅಂದಿದ್ದಕ್ಕೆ ಹಿರಿಯ ಹೋಂಗಾರ್ಡ್ ಒಬ್ಬರಿಗೆ ಯುವತಿ ಥಳಿಸಿದ್ದಾಳೆ. ಹೋಮ್‌ ಗಾರ್ಡ್‌ಗೆ ಥಳಿಸಿದವಳ ಹೆಸರು ಮೋಹಿನಿ. ಹೆಸರಿಗೆ ತಕ್ಕಂತೆ ಆಡ್ತಿದ್ದಾಳೆ. ಚಡ್ಡಿ ಹಾಕೊಂಡಿದ್ದ ಮೋಹಿನಿಗೆ ಬುದ್ದಿ ಹೇಳಿದ್ದೇ ತಪ್ಪಾಯ್ತಾ? ವಯಸ್ಸಾಗಿರೋದನ್ನ ನೋಡದೇ ರಾಕ್ಷಸಿಯಂತೆ ಹೋಮ್ ಗಾರ್ಡ್ ಕೂದಲು ಹಿಡಿದು ರಕ್ತಬರುವಂತೆ ಥಳಿಸಿದ್ದಾಳೆ.

25
ಬುದ್ಧಿ ಹೇಳೋಕೆ ನೀನ್ಯಾರೆಂದು ನರಸಮ್ಮಗೆ ರಕ್ತ ಬರುವಂತೆ ಹಲ್ಲೆ

ಬೆಂಗಳೂರಿನ ಕೆ.ಆರ್ ಪುರಂ ರೈಲ್ವೆ ನಿಲ್ದಾಣದ ಬಳಿ ಲಕ್ಷ್ಮಿನರಸಮ್ಮ ಡ್ಯೂಟಿ ಮಾಡ್ತಿದ್ದ ವೇಳೆ ಯುವತಿ ಚಡ್ಡಿ ಹಾಕೊಂಡು ಓಡಾಡ್ತಿದ್ದಳು.. ಈಕೆಯನ್ನ ನೋಡಿದ ಹುಡುಗರು ಚುಡಾಯಿಸ್ತಿದ್ರು. ಇದನ್ನ ಕಂಡ ಹೋಮ್‌ಗಾರ್ಡ್ ಲಕ್ಷ್ಮಿ ನರಸಮ್ಮ, ಮೋಹಿನಿ ಬಳಿ ಬಂದು ಹೀಗೆ ಚಡ್ಡಿ ಹಾಕೊಂಡು ಬೀದಿಗೆ ಬರ್ಬೇಡಮ್ಮ ಎಂದಿದ್ದಾರೆ. ಅಷ್ಟೆ, ಮೋಹಿನಿಯೇ ಮೈಮೇಲೆ ಬಂದಂತೆ ಮಾಡಿದ ಯುವತಿ, ಬುದ್ದಿ ಹೇಳೋಕೆ ನೀನ್ಯಾರು ಎಂದು ಮನಬಂದಂತೆ ಹಲ್ಲೆ ಮಾಡಿದ್ದಾಳೆ.

35
ಯುವತಿಯನ್ನ ವಶಕ್ಕೆ ಪಡೆದ ಪೊಲೀಸ್

ಸ್ಥಳದಲ್ಲಿದ್ದವರು ಬಿಡಿಸಲು ಬಂದೂ, ಕ್ಯಾರೇ ಎನ್ನದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾಳೆ. ಯುವತಿ ಮೋಹನಿ ವಿರುದ್ಧ ಮಹಿಳಾ ಸಂಘಟನೆ ನೀಡಿದ ದೂರಿನ ಮೇರೆಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಯುವತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿ ಮೋಹಿನಿ ಹಿನ್ನೆಲೆ ಏನು? ಆಕೆ ಮಾನಸಿಕ ಅಸ್ವಸ್ಥೆ ಆಗಿದ್ದಾಳಾ? ಅನ್ನೋ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ. ಸುವರ್ಣ ನ್ಯೂಸ್ ಜೊತೆ ಮಾತಾಡಿದ ಲಕ್ಷ್ಮಿನರಸಮ್ಮ, ಹಲ್ಲೆ ಮಾಡಿದ ಯುವತಿ ಮೋಹಿನಿಗೆ ತಕ್ಕ ಶಿಕ್ಷೆ ಆಗ್ಲೆಬೇಕು ಅಂತ ಆಗ್ರಹಿಸಿದು.

45
ನೋವು ತೋಡಿಕೊಂಡ ನರಸಮ್ಮ

ಕೆಆರ್ ಪುರಂ ಪ್ರದೇಶದಲ್ಲಿ ನಡೆದ ಹೋಂ ಗಾರ್ಡ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೋಂ ಗಾರ್ಡ್ ಲಕ್ಷ್ಮಿ ನರಸಮ್ಮ ಅವರು ತಮ್ಮ ನೋವು ಮತ್ತು ಅನುಭವವನ್ನು ಬಹಿರಂಗಪಡಿಸಿದ್ದಾರೆ. ನಾನು ಕಳೆದ 12 ವರ್ಷಗಳಿಂದ ಹೋಂ ಗಾರ್ಡ್ ಆಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ಆರು ತಿಂಗಳಿಂದ ಕೆಆರ್ ಪುರಂ ಬಳಿ ಟ್ರಾಫಿಕ್ ಡ್ಯೂಟಿಗೆ ನಿಯೋಜನೆಗೊಂಡಿದ್ದೇನೆ. ಈ ಹಿಂದೆ ಕೂಡ ಆ ಯುವತಿ ಅರೆಬರೆ ಬಟ್ಟೆ ಧರಿಸಿ, ನಿತ್ಯ ಮದ್ಯಪಾನ ಮಾಡಿಕೊಂಡು ರಸ್ತೆಯಲ್ಲಿ ಅಲೆದಾಡುತ್ತಿರುವುದನ್ನು ನೋಡಿದ್ದೇನೆ. ಆದರೂ ಯಾವತ್ತೂ ನಾನು ಆಕೆಗೆ ಬುದ್ದಿವಾದ ಹೇಳಿಲ್ಲ. ನನ್ನ ಕೆಲಸವನ್ನು ಮಾತ್ರ ಪ್ರಾಮಾಣಿಕವಾಗಿ ಮಾಡುತ್ತಿದ್ದೆ.

55
ಇಂತಹ ಘಟನೆಗಳು ಮರುಕಳಿಸಬಾರದು: ನರಸಮ್ಮ

ಕೆಲವು ಯುವಕರು ಆಕೆಯನ್ನು ಅಲ್ಲಿಂದ ಕಳುಹಿಸಬೇಕು ಎಂದು ನನಗೆ ಹೇಳಿದರು. ಅವರ ಮಾತು ಕೇಳಿ ನಾನು ಕೇವಲ ಬುದ್ದಿವಾದ ಹೇಳಿದೆ. ಆದರೆ ಅದಕ್ಕೆ ಕೋಪಗೊಂಡ ಆಕೆ ನನ್ನನ್ನು ಹಿಡಿದು ಮುಖಕ್ಕೆ ಹೊಡೆದಳು, ಮೈಮೇಲೆ ಪರಚಿದಳು ಮತ್ತು ತಲೆಗೆ ಬಲವಾಗಿ ಹೊಡೆದು ಗಾಯಗೊಳಿಸಿದಳು. ನಾನು ಖಾಕಿ ಯೂನಿಫಾರ್ಮ್ ಧರಿಸಿದ್ದಾಗಲೇ ಆಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ. ನನ್ನ ಮೇಲೆ ಹಲ್ಲೆ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ಕರ್ತವ್ಯ ನಿರ್ವಹಿಸುವ ಹೋಂ ಗಾರ್ಡ್‌ಗಳಿಗೆ ರಕ್ಷಣೆ ದೊರಕಬೇಕು ಎಂದಿದ್ದಾರೆ.

Read more Photos on
click me!

Recommended Stories