ಮಾಜಿ ಕಾರ್ಪೊರೇಟರ್ ಆತ್ಮ*ಹತ್ಯೆ: ಎಷ್ಟು ಬುದ್ಧಿವಂತನೋ, ಅಷ್ಟೇ ಹಠವಾದಿ, ಏನೂ ಉಳಿದೇ ಇಲ್ಲ ಬೂದಿಯಾಗಿ ಬಿಟ್ಟಿದ್ದಾನೆ: ಮಾವ ಕಣ್ಣೀರು

Published : Jan 11, 2026, 03:59 PM ISTUpdated : Jan 11, 2026, 04:03 PM IST

ದಾವಣಗೆರೆಯ ಮಾಜಿ ಕಾರ್ಪೊರೇಟರ್ ಚಂದ್ರಶೇಖರ ಅವರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ ಅವರ ಇಬ್ಬರು ಮಕ್ಕಳು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಚಂದ್ರಶೇಖರ್ ಅವರ ಹಠಮಾರಿ ಸ್ವಭಾವವೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರ ಹೇಳಿಕೆ.

PREV
17
ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಮಾಜಿ ಕಾರ್ಪೊರೇಟರ್ ಆತ್ಮ*ಹತ್ಯೆ

ದಾವಣಗೆರೆ ನಗರವನ್ನು ಬೆಚ್ಚಿಬೀಳಿಸಿದ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಮಾಜಿ ಕಾರ್ಪೊರೇಟರ್ ಚಂದ್ರಶೇಖರ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಂದ್ರಶೇಖರ ಅವರ ಮಾವ ಕರಿಬಸಪ್ಪ ಅವರು ಈ ಕುರಿತು ಭಾವುಕ ಹೇಳಿಕೆ ನೀಡಿದ್ದಾರೆ. ಒಂದು ಕಡೆ ಚಂದ್ರಶೇಖರ್ ಸಂಕೋಳ್ ಇಬ್ಬರು ಮಕ್ಕಳು ಕೂಡ ಆತ್ಮ*ಹತ್ಯೆಗೆ ಯತ್ನಿಸಿದ್ದು ಇಬ್ಬರ ಸ್ಥಿತಿ ಕೂಡ ಚಿಂತಾಜನಕವಾಗಿದೆ.

27
“ಬುದ್ಧಿವಂತನಾಗಿದ್ದರೂ ಹಠ ಜಾಸ್ತಿ ಇತ್ತು”

ಚಂದ್ರಶೇಖರ ಬಗ್ಗೆ ಮಾತನಾಡಿದ ಕರಿಬಸಪ್ಪ ಅವರು, ಅವನು ಎಷ್ಟು ಬುದ್ಧಿವಂತನಾಗಿದ್ದನೋ, ಅಷ್ಟೇ ಹಠವಾದಿಯಾಗಿದ್ದ. ರಾಜಕೀಯ ಬಿಟ್ಟು ಯಾವುದಾದರೂ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳು ಎಂದರೂ ಅವನು ಕೇಳುತ್ತಿರಲಿಲ್ಲ. ಚಂದ್ರಶೇಖರ ಬಳಿ 40 ರಿಂದ 50 ಲಕ್ಷ ರೂಪಾಯಿ ಮೌಲ್ಯದ ಹಾರ್ಡ್‌ವೇರ್ ಅಂಗಡಿ ದಾಸ್ತಾನು ಇದ್ದು, ಯುಗಾದಿ ನಂತರ ಮತ್ತೆ ವ್ಯಾಪಾರ ಆರಂಭಿಸುವ ಯೋಜನೆಯಲ್ಲಿದ್ದರು ಅವರ ವೈಯಕ್ತಿಕ ಸಮಸ್ಯೆಗಳು ನಮಗೆ ತಿಳಿದಿರಲಿಲ್ಲ. ಈಗ ನೋಡಿದರೆ ಏನೂ ಉಳಿದಿಲ್ಲ, ಎಲ್ಲವೂ ಬೂದಿಯಾಗಿ ಹೋಗಿದೆ. ಏನೂ ಉಳಿದೇ ಇಲ್ಲ ಬೂದಿಯಾಗಿ ಬಿಟ್ಟಿದ್ದಾನೆ ಎಂದು ನೋವಿನಿಂದ ಹೇಳಿದ್ದಾರೆ.

37
ಆಸ್ತಿ, ಕುಟುಂಬ ಇದ್ದರೂ ಹಠವೇ ಕಾರಣ?

ಅವನಿಗೆ ಜಮೀನೂ ಇತ್ತು. ಎಷ್ಟೇ ಸಾಲ ಇದ್ದರೂ ಕೂಲಿ ಕೆಲಸ ಮಾಡಿಕೊಂಡು ಬದುಕಬಹುದಿತ್ತು. ತಂದೆ ಇದ್ದರು, ತಮ್ಮನೂ ಇದ್ದ. ಸಹಾಯ ಮಾಡುವವರು ಸಾಕಷ್ಟು ಇದ್ದರೂ ಅವನ ಹಠ ಮಾತ್ರ ಜಾಸ್ತಿ ಇತ್ತು ಎಂದು ಕರಿಬಸಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಒಳ್ಳೆಯದು ಮಾಡಿದರೂ ವ್ಯರ್ಥವಾದಂತಾಯಿತು

ಈ ಘಟನೆಯಾಗುವ ಎಂಟು ದಿನಗಳ ಹಿಂದಷ್ಟೇ ಚಂದ್ರಶೇಖರ ಅವರ ಮಕ್ಕಳ ಮದುವೆ ವಿಚಾರವಾಗಿ ತಂದೆಯವರು ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆದರೆ, ಅದನ್ನೆಲ್ಲ ನಾನು ನೋಡಿಕೊಳ್ಳುತ್ತೇನೆ, ನನಗೆ ಬಿಟ್ಟು ಬಿಡಿ ಎಂದು ಚಂದ್ರಶೇಖರ ಹೇಳುತ್ತಿದ್ದ ಎಂದು ಕರಿಬಸಪ್ಪ ತಿಳಿಸಿದ್ದಾರೆ. ಚಂದ್ರಶೇಖರ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ, ಅದು ಹೊಳೆಯಲ್ಲಿ ಹುಣಸೇಹಣ್ಣು ತೊಳೆದ ಹಾಗೆ ಆಯ್ತು. ಯಾರಿಗೂ ಅದು ನೆನಪಾಗಲಿಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.

47
ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲ

ಮಕ್ಕಳು ಆತ್ಮ*ಹತ್ಯೆಗೆ ಯತ್ನಿಸಿದ ಬಗ್ಗೆ ಮಾತನಾಡಿದ ಕರಿಬಸಪ್ಪ, ಅವನೂ ದಾವಣಗೆರೆ ನಗರದಲ್ಲಿ ಇದ್ದಾಗ ಮಕ್ಕಳು ಆತ್ಮ*ಹತ್ಯೆ ಯತ್ನಿಸಿದ ಮಾಹಿತಿ ಸಿಕ್ಕಿದೆ. ಮಗ ಚೇತರಿಸಿಕೊಳ್ಳುತ್ತಿದ್ದು, ಮಗಳ ಸ್ಥಿತಿ ಗಂಭೀರವಾಗಿದೆ. ಮಕ್ಕಳು ಹೀಗೆ ಮಾಡಿಕೊಂಡರಲ್ಲ ಎಂದು ಮನನೊಂದು ಮಾಡಿಕೊಂಡಿರಬಹುದು ಎಂದು ಕರಿಬಸಪ್ಪ ಹೇಳಿದ್ದಾರೆ.

57
ಉದ್ಧಟತನ ಮಾಡಿ ಹೀಗೆ ಮಾಡಿಕೊಂಡುಬಿಟ್ಟ: ಮಾಜಿ ಸಚಿವ ರವೀಂದ್ರನಾಥ ಕಣ್ಣೀರು

ಇನ್ನು ಚಂದ್ರಶೇಖರ ಸಂಕೋಳ್ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ ಸಂಬಂಧಿಯಾಗಿದ್ದು, ಘಟನಾ ಸ್ಥಳಕ್ಕೆ ಭೇಟಿಕೊಟ್ಟರು. ಗುರುತೇ ಸಿಗದಷ್ಟು ಸುಟ್ಟು ಕರಕಲಾಗಿರುವ ಮೃತದೇಹ ಕಂಡು ಕಣ್ಣೀರಾದರು. ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಕಣ್ಣೀರಿಟ್ಟ ಎಸ್.ಎ.ರವೀಂದ್ರನಾಥ, ಎಷ್ಟು ಜನಮನ್ನಣೆ ಗಳಿಸಿದ್ರೆ ಏನ್ ಮಾಡೋದು ಹೀಗೆ ಮಾಡಿಕೊಂಡುಬಿಟ್ಟ. ಕೆಲಸ ಚೆನ್ನಾಗಿ ಮಾಡ್ತಿದ್ದ ಆದ್ರೆ ಕಂಟ್ರೋಲ್‌‌ನಲ್ಲಿ ಇರಲಿಲ್ಲ ಅವನಿಗೆ. ನನಗೂ ಈಗ ಬೆಳಗ್ಗೆ ಗೊತ್ತಾಯಿತು. ಏನಾಗಿದೆಯೋ ಗೊತ್ತಿಲ್ಲ, ಮನೆಯಲ್ಲಿ ಜಗಳವಾಡುತ್ತಿದ್ದ ಅಂತಾ ಹೇಳುತ್ತಿದ್ರು. ಎಷ್ಟೇ ಜನಪರ ಕೆಲಸ ಮಾಡಿದರೂ ಉಪಯೋಗ ಆಗಲಿಲ್ಲ ಅಲ್ಲ. ಕರೆದು ಬುದ್ದಿವಾದ ಹೇಳಬೇಕಂದ್ರೆ ಕರೆದರೂ ಅವನು ಮಾತನಾಡುತ್ತಿರಲಿಲ್ಲ. ಉದ್ಧಟತನ ಮಾಡಿ ಹೀಗೆ ಮಾಡಿಕೊಂಡುಬಿಟ್ಟ. ಚಂದ್ರಶೇಖರ ಯಾರ ಮಾತೂ ಕೇಳುತ್ತಿರಲಿಲ್ಲ. ಹೀಗೆ ನಡೆಯಬಾರದಿತ್ತು ನಡೆದಿದೆ ಎಂದರು.

67
ಸಾವಿನ ಸುತ್ತ ಅನುಮಾನ ಹಲವು

ಇನ್ನು ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ ಅವರ ಶವ ಪತ್ತೆಯಾಗಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಾಥಮಿಕ ಮಾಹಿತಿಯಂತೆ, ತಮ್ಮ ಮಕ್ಕಳು ಆತ್ಮ*ಹತ್ಯೆಗೆ ಯತ್ನಿಸಿದ ಸುದ್ದಿ ತಿಳಿದು ಮನನೊಂದೇ ಚಂದ್ರಶೇಖರ ಆತ್ಮ*ಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ತಂದೆ ಸಮಯಕ್ಕೆ ಸರಿಯಾಗಿ ಮನೆಗೆ ಬರ್ತಿಲ್ಲ ಎಂಬ ಕಾರಣಕ್ಕೆ ಮನನೊಂದ ಮಗ ಮತ್ತು ಮಗಳು ಆತ್ಮ*ಹತ್ಯೆಗೆ ಯತ್ನಿಸಿದ್ದರು. ಮಕ್ಕಳಿಬ್ಬರೂ ತಾಯಿಗೆ ವಿಷಯ ತಿಳಿಸಿ, ಮೂವರು ಸೇರಿ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಹೇಳಿದ್ದಾರಂತೆ. ಆದರೆ ತಾಯಿ ಬುದ್ಧಿವಾದ ಹೇಳಿದರೂ, ಮಕ್ಕಳು ದುಡುಕಿ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಮನೆಯ ಮೇಲ್ಮಹಡಿಗೆ ಹೋಗುವಷ್ಟರಲ್ಲಿ ಮಕ್ಕಳು ಫ್ಯಾನ್‌ಗೆ ನೇಣು ಬಿಗಿದು ಆತ್ಮ*ಹತ್ಯೆಗೆ ಯತ್ನಿಸಿದ್ದು, ಕುಟುಂಬಸ್ಥರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

77
ಸಾವಿಗೂ ಮುನ್ನ ಫೋನ್ ಮಾಡಿದ್ದ ಮಕ್ಕಳು

ಇನ್ನೊಂದೆಡೆ, ಘಟನೆಯ ದಿನ ರಾತ್ರಿ ಮಕ್ಕಳು ಚಂದ್ರಶೇಖರರಿಗೆ ಫೋನ್ ಮಾಡಿ ನಿಮ್ಮ ಜೊತೆ ಮಾತನಾಡಬೇಕು ಎಂದು ಕೇಳಿದ್ದಾರಂತೆ. ಆಗ ಚಂದ್ರಶೇಖರ, “ನಾನು ಬರುತ್ತೇನೆ, ಇರಿ” ಎಂದು ಮಕ್ಕಳಿಗೆ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಅದಾದ ಬಳಿಕ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಅವರು, ಮೇಲ್ನೋಟಕ್ಕೆ ಇದು ಆತ್ಮ*ಹತ್ಯೆಯ ಪ್ರಕರಣವಾಗಿ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ. ಸೊಕೊ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಎಫ್‌ಎಸ್‌ಎಲ್ ತಂಡವೂ ಪರಿಶೀಲನೆ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಚಂದ್ರಶೇಖರ ಅವರು ಕಾರಿನ ಹಿಂಬದಿ ಸೀಟ್‌ನಲ್ಲಿಯೇ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

Read more Photos on
click me!

Recommended Stories