Kannadiga: ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಯಾದಗಿರಿಯ ಬಸವರಾಜ್ ಸಂಕೀನ್ ವಿಜ್ಞಾನಿಯಾಗಿ ನೇಮಕ

Published : Nov 18, 2025, 09:57 AM IST

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಸವರಾಜ್ ಸಂಕೀನ್ ಅವರು ಯುರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ ಸ್ಪೇಸ್ ಸಿಸ್ಟಮ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ. ಏರೋನಾಟಿಕಲ್ ಎಂಜಿನಿಯರಿಂಗ್ ಪದವೀಧರ, ಬಾಹ್ಯಾಕಾಶ ನೌಕೆಗಳ ಉಡಾವಣೆ, ಉಪಗ್ರಹ ಕಾರ್ಯಾಚರಣೆಗಳ ಮಿಷನ್ ಕಂಟ್ರೋಲ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

PREV
14
ಬಸವರಾಜ್ ಸಂಕೀನ್

ಯಾದಗಿರಿ ಜಿಲ್ಲೆಯ ಬಸವರಾಜ್ ಸಂಕೀನ್ ಎಂಬವರು ಯುರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ ವಿಜ್ಞಾನಿಯಾಗಿ ನೇಮಕವಾಗಿದ್ದಾರೆ. ESA (European Space Agency) ಸ್ಪೇಸ್ ವಿಭಾಗದಲ್ಲಿ ಬಸವರಾಜ್ ಸಂಕೀನ್ ಕೆಲಸ ಮಾಡಲಿದ್ದಾರೆ. ಬಸವರಾಜ್ ಸಂಕೀನ್ (Basavaraj Sankeen) ಯಾದಗಿರಿ ಜಿಲ್ಲೆಯ ವಡಗೇರಾ (Vadagera, Yadagiri) ತಾಲೂಕಿನ ತುಮಕೂರು ಗ್ರಾಮದ ನಿವಾಸಿಯಾಗಿದ್ದಾರೆ.

24
ಏರೋನಾಟಿಕಲ್ ಎಂಜಿನಿಯರಿಂಗ್

ಮಂಗಳೂರಿನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ (Aeronautical Engineering) ಪದವಿ ಪಡೆದುಕೊಂಡಿರುವ ಬಸವರಾಜ್ ಸಂಕೀನ್, 2016 ರಲ್ಲಿ ಸ್ಪೇನ್ ನಲ್ಲಿ ಮಾಸ್ಟರ್ಸ್ ಇನ್ ಏರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ (Masters in Aerospace Science and Technology) ಉನ್ನತ ಶಿಕ್ಷಣ ಮುಗಿಸಿದ್ದಾರೆ. ಉನ್ನತ ಶಿಕ್ಷಣದ ಬಳಿಕ ಯುರೋಪಿಯನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

34
ಸ್ಪೇಸ್ ಇಂಜಿನಿಯರ್

ಇದೀಗ ESA ಸ್ಪೇಸ್ ಸಿಸ್ಟಮ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಬಸವರಾಜ್ ಸಂಕೀನ್ ಅವರು ಕಾಂಗ್ರೆಸ್ ನ ಇಂಡಿಯನ್ ಓವರ್ ಸೀಸನ್ ಸ್ಪೇನ್ ಘಟಕದ ಅಧ್ಯಕ್ಷರಾಗಿದ್ದರು. ಡಿಸೆಂಬರ್ ನಿಂದ ಬಸವರಾಜ್ ಸಂಕೀನ್ ಸ್ಪೇಸ್ ಇಂಜಿನಿಯರ್ ಆಗಿ ಹುದ್ದೆ ನಿಭಾಯಿಸಲಿದ್ದಾರೆ.

ಇದನ್ನೂ ಓದಿ: Bengaluru Metro ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು-ತುಮಕೂರು ವಿಸ್ತರಣೆಗೆ ಗ್ರೀನ್ ಸಿಗ್ನಲ್

44
ಬಾಹ್ಯಾಕಾಶ ನೌಕೆ

ಬಾಹ್ಯಾಕಾಶ ನೌಕೆಗಳ ಉಡಾವಣೆ, ಆರಂಭಿಕ ಹಂತಗಳು, ಉಪಗ್ರಹ ಕಾರ್ಯಾಚರಣೆ ಆದೇಶಿಸುವ ಮಿಷನ್ ಕಂಟ್ರೋಲ್ ನಲ್ಲಿ ಬಸವರಾಜ್ ಸಂಕೀನ್ ಕರ್ತವ್ಯ ನಿರ್ವಹಿಸಲಿದ್ದಾರೆ. ಬಸವರಾಜ್ ಸಂಕೀನ್ ಅವರ ಸಾಧನೆಗೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಗ್ರಾಮದ ಜನರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮೇಡ್‌ ಇನ್‌ ಕರ್ನಾಟಕ ಕಂಪ್ಯೂಟರ್‌ ಅಭಿವೃದ್ಧಿ, ಇಂದು ಬಿಡುಗಡೆ

Read more Photos on
click me!

Recommended Stories