ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆಯು ಕೇಂದ್ರ ಸಚಿವಾಲಯದ 'ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿ'ಗೆ ಆಯ್ಕೆಯಾಗಿದೆ. ದೇಶದ 78 ಠಾಣೆಗಳ ಪರಿಶೀಲನೆ ನಂತರ, ಜನಸ್ನೇಹಿ ಮತ್ತು ಸಿಬ್ಬಂದಿ ಸ್ನೇಹಿ ಗುಣಗಳಿಗಾಗಿ ಇದು ದೇಶದ ಮೂರು ಅತ್ಯುತ್ತಮ ಠಾಣೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಠಾಣೆ ಆಯ್ಕೆಯಾಗಿದೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ಪಡೆದುಕೊಂಡಿದೆ.
23
ಕವಿತಾಳ ಆಯ್ಕೆ
ದೇಶದ ಅತ್ಯುತ್ತಮ ಮೂರು ಪೊಲೀಸ್ ಠಾಣೆಯಲ್ಲಿ ಕವಿತಾಳ ಆಯ್ಕೆಯಾಗಿರೋದಕ್ಕೆ ಇಲ್ಲಿಯ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆ ಜನಸ್ನೇಹಿ, ಸಿಬ್ಬಂದಿ ಸ್ನೇಹಿಯಾಗಿದೆ. ದೇಶದ 78 ಪೊಲೀಸ್ ಠಾಣೆಗಳನ್ನ ಪರಿಶೀಲನೆ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
33
ಕೇಂದ್ರ ಸಚಿವಾಲಯ ಪತ್ರ
ನವೆಂಬರ್ 28 ರಂದು ಛತ್ತೀಸ್ಗಢದ ರಾಯಪುರದಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಭಾಗಿಯಾಗಲು ಕೇಂದ್ರ ಸಚಿವಾಲಯ ಪತ್ರ ರವಾನಿಸಿದೆ. ರಾಯಚೂರು ಎಸ್‌ಪಿ ಅವರಿಗೆ ಪತ್ರ ಕಳುಹಿಸಲಾಗಿದೆ. ಅತ್ಯುತ್ತಮ ಪೊಲೀಸ್ ಠಾಣೆಗೆ ಕವಿತಾಳ ಆಯ್ಕೆಗೊಂಡಿದಕ್ಕೆ ಎಸ್‌ಪಿ ಎಂ.ಪುಟ್ಟಮಾದಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.