14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಹರಾಜು ನಡೆದರೆ RCB ಯಾವ 5 ಆಟಗಾರರನ್ನು ಉಳಿಸಿಕೊಳ್ಳುತ್ತೆ..?

First Published | Nov 22, 2020, 1:22 PM IST

ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲೂ ಕಪ್‌ ಗೆಲ್ಲಲು ವಿಫಲವಾಗಿದೆ. ಬರೋಬ್ಬರಿ 3 ವರ್ಷಗಳ ಬಳಿಕ ಬೆಂಗಳೂರು ತಂಡ ಪ್ಲೇ ಆಫ್‌ ಪ್ರವೇಶಿಸಿತ್ತಾದರೂ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಎದುರು ಆಘಾತಕಾರಿ ಸೋಲು ಕಂಡು ಟ್ರೋಫಿ ಗೆಲ್ಲುವ ರೇಸ್‌ನಿಂದ ಹೊರಬಿದ್ದಿತು.
ಒಂದುವೇಳೆ 14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಮೆಗಾ ಹರಾಜು ನಡೆದರೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಯಾವ 3 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ ಹಾಗೂ RTM ಕಾರ್ಡ್‌ ಬಳಸಿ ಯಾವ ಇಬ್ಬರನ್ನು ತನ್ನ ತಂಡದಲ್ಲೇ ಉಳಿಸಿಕೊಳ್ಳಲಿದೆ ಎನ್ನುವುದು ವಿಶ್ಲೇಷಣೆ ಇಲ್ಲಿದೆ ನೋಡಿ.
 

1. ವಿರಾಟ್ ಕೊಹ್ಲಿ
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಬೆಂಗಳೂರು ತಂಡದ ಭಾಗವಾಗಿದ್ದು, ಮತ್ತೊಮ್ಮೆ ಆರ್‌ಸಿಬಿ ಫ್ರಾಂಚೈಸಿ ಕೊಹ್ಲಿಯನ್ನು ತಮ್ಮ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ.
Tap to resize

ಪ್ರತಿ ಆವೃತ್ತಿಯಲ್ಲೂ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಕೊಹ್ಲಿ ಬೆಂಗಳೂರಿನ ಆಟಗಾರ ಎನ್ನುವಷ್ಟರ ಮಟ್ಟಿಗೆ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
2. ಎಬಿ ಡಿವಿಲಿಯರ್ಸ್
ಮಿಸ್ಟರ್ 360, ಆರ್‌ಸಿಬಿ ಪಾಲಿನ ಆಪತ್ಭಾಂಧವ ಎಬಿ ಡಿವಿಲಿಯರ್ಸ್ ಅವರನ್ನು ಬೆಂಗಳೂರು ಫ್ರಾಂಚೈಸಿ ಯಾವುದೇ ಅಳುಕಿಲ್ಲದೇ ರೀಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ.
ವಿಸ್ಫೋಟಕ ಬ್ಯಾಟಿಂಗ್‌ ಜತೆಗೆ ಕಳೆದ ಆವೃತ್ತಿಯಲ್ಲಿ ವಿಕೆಟ್‌ ಕೀಪಿಂಗ್‌ನಲ್ಲೂ ಸೈ ಎನಿಸಿಕೊಂಡಿರುವ ಎಬಿಡಿ, ತಾವು ಐಪಿಎಲ್‌ನಲ್ಲಿ ಆಡುವುದಿದ್ದರೆ ಅದು ಆರ್‌ಸಿಬಿ ಪರ ಮಾತ್ರ ಎಂದಿರುವುದು ಅವರಿಗೆ ಬೆಂಗಳೂರು ತಂಡದ ಮೇಲಿನ ಅಭಿಮಾನವೆಷ್ಟಿದೆ ಎನ್ನುವುದು ಅರ್ಥವಾಗುತ್ತದೆ.
3. ಯುಜುವೇಂದ್ರ ಚಹಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ ಅಸ್ತ್ರ, ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಲೆಗ್‌ಸ್ಪಿನ್ನರ್‌ ಚಹಲ್‌ರನ್ನು ಆರ್‌ಸಿಬಿ ರೀಟೈನ್‌ ಮಾಡಿಕೊಳ್ಳುವ ಸಾಧ್ಯತೆಯಿದೆ.
ಕಳೆದ 2 ವರ್ಷಗಳಿಂದಲೂ ಆರ್‌ಸಿಬಿ ಪರ ಗರಿಷ್ಠ ವಿಕೆಟ್‌ ಕಬಳಿಸಿದ ಆಟಗಾರನೆನಿಸಿರುವ ಚಹಲ್, ಮತ್ತೆ ಮುಂದಿನ ಆವೃತ್ತಿಗಳಲ್ಲೂ ಆರ್‌ಸಿಬಿ ತಂಡದಲ್ಲೇ ಮುಂದುವರಿದರೂ ಅಚ್ಚರಿಪಡಬೇಕಿಲ್ಲ.
4. ದೇವದತ್ ಪಡಿಕ್ಕಲ್
ಕರ್ನಾಟಕದ ಪ್ರತಿಭೆ ದೇವದತ್ ಪಡಿಕ್ಕಲ್‌ರನ್ನು ಬೆಂಗಳೂರು ಫ್ರಾಂಚೈಸಿ RTM ಕಾರ್ಡ್‌ ಬಳಸಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ.
13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 473 ರನ್ ಬಾರಿಸುವ ಮೂಲಕ ಆರ್‌ಸಿಬಿ ಪರ ಗರಿಷ್ಠ ರನ್ ಬಾರಿಸುವುದರ ಜತೆಗೆ ಉದಯೋನ್ಮುಖ ಆಟಗಾರ ಎನ್ನುವ ಗೌರವಕ್ಕೆ ಪಡಿಕ್ಕಲ್ ಪಾತ್ರರಾಗಿದ್ದರು.
5. ವಾಷಿಂಗ್ಟನ್ ಸುಂದರ್
ತಮಿಳುನಾಡು ಮೂಲದ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಪವರ್‌ ಪ್ಲೇ ಬೌಲಿಂಗ್‌ನಲ್ಲಿ ತಾವೆಷ್ಟು ಉಪಯುಕ್ತ ಆಟಗಾರ ಎನ್ನುವುದನ್ನು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಾಬೀತು ಮಾಡಿದ್ದರು.
ಚಹಲ್ ಹಾಗೂ ಸುಂದರ್ ಜೋಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಡಿದ್ದರು. ಸುಂದರ್ 15 ಪಂದ್ಯಗಳಲ್ಲಿ 8 ವಿಕೆಟ್ ವಿಕೆಟ್‌ ಪಡೆದರೂ, ಕೇವಲ 5.87ರ ಸರಾಸರಿಯಲ್ಲಿ ರನ್‌ ಬಿಟ್ಟುಕೊಡುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಸುಂದರ್ ಪ್ರಾಬಲ್ಯ ಮೆರೆದಿದ್ದು RTM ಕಾರ್ಡ್‌ ಬಳಸಿ ಆರ್‌ಸಿಬಿ ತಮ್ಮ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ

Latest Videos

click me!