IPL 2021: ನಾವು ಆತನನ್ನು ಬಿಟ್ಟುಕೊಡಲ್ಲ; ವಾರ್ನರ್‌ ಹೀಗಂದಿದ್ದು ಯಾರ ಬಗ್ಗೆ..?

First Published | Nov 14, 2020, 7:10 PM IST

ಸಿಡ್ನಿ: ಸಾಕಷ್ಟು ಮನರಂಜನೆ ನೀಡಿದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗುವುದರೊಂದಿಗೆ ಟೂರ್ನಿಗೆ ಅಧಿಕೃತವಾಗಿ ತೆರೆ ಬಿದ್ದಿದೆ. ಇದೀಗ 14ನೇ ಆವೃತ್ತಿಯ ಐಪಿಎಲ್‌ಗೆ ಇನ್ನೈದೇ ತಿಂಗಳು ಬಾಕಿ ಇರುವುದರಿಂದ ಈಗಿನಿಂದಲೇ ಸಿದ್ದತೆಗಳು ಆರಂಭವಾಗಲಾರಂಭಿಸಿದೆ.
ಹೌದು, 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಒಂದು ಅಥವಾ 2 ತಂಡಗಳು ಸೇರ್ಪಡೆಯಾಗುವುದರ ಬಗ್ಗೆ ಗಾಳಿ ಸುದ್ದಿಗಳು ಹರಿದಾಡಲಾರಂಭಿಸಿವೆ. ಹೀಗಾದರೆ ಮೆಗಾ ಹರಾಜು ನಡೆಯಲಿದ್ದು, ಕೆಲ ಆಟಗಾರರು ಬೇರೆ ತಂಡದ ಪಾಲಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ತಮ್ಮ ತಂಡದ ಪ್ರಮುಖ ಆಟಗಾರನ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
 

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 8 ತಂಡಗಳ ಬದಲಾಗಿ 9 ಅಥವಾ 10 ತಂಡಗಳು ಕಾಣಿಸಿಕೊಳ್ಳುವ ಬಗ್ಗೆ ಈಗಿನಿಂದಲೇ ಗುಸು ಗುಸು ಶುರುವಾಗಿದೆ.
undefined
ಒಂದು ವೇಳೆ ಟೂರ್ನಿಗೆ ಹೊಸ ತಂಡಗಳು ಸೇರ್ಪಡೆಯಾದರೆ, ಮಿನಿ ಹರಾಜಿನ ಬದಲಾಗಿ ಮೆಗಾ ಹರಾಜು ನಡೆಯುವ ಸಾಧ್ಯತೆಯಿದೆ.
undefined

Latest Videos


ಮೆಗಾ ಹರಾಜು ನಡೆದ ಪಕ್ಷದಲ್ಲಿ ಕೆಲ ಆಟಗಾರರು ಬೇರೆ ತಂಡದ ಪಾಲಾಗುವ ಸಾಧ್ಯತೆಯಿದೆ. ಇದು ಕೆಲವು ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
undefined
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಗ್ಗರಿಸಿದ ಸನ್‌ರೈಸರ್ಸ್‌ ಹೈದರಾಬಾದ್ ನಾಯಕನ ಬಳಿ ಅಭಿಮಾನಿಯೊಬ್ಬ ತಮ್ಮ ಆತಂಕವನ್ನು ತೋಡಿಕೊಂಡಿದ್ದಾನೆ.
undefined
ಆದರೆ ಅಭಿಮಾನಿಯ ಎಲ್ಲಾ ಆತಂಕಗಳಿಗೆ ತಮ್ಮ ಸ್ಪಷ್ಟ ಉತ್ತರದ ಮೂಲಕ ಗಾಳಿ ಸುದ್ದಿಗೆ ಡೇವಿಡ್ ವಾರ್ನರ್ ತೆರೆ ಎಳೆದಿದ್ದಾರೆ.
undefined
ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ, ಮುಂದಿನ ವರ್ಷಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಕೇನ್ ವಿಲಿಯಮ್ಸನ್‌ ಬೇರೆ ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗುತ್ತಿದೆ ಈ ಸುದ್ದಿ ನಿಜಾನಾ ಎಂದು ವಾರ್ನರ್‌ ಅವರನ್ನು ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾರೆ.
undefined
ಇದಕ್ಕೆ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್, ಇಲ್ಲ ಆತನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ತಂಡಕ್ಕೆ ಬೇಕು ಎಂದು ಹೇಳುವ ಮೂಲಕ ವಾರ್ನರ್ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
undefined
ಕೇನ್‌ ವಿಲಿಯಮ್ಸನ್ ಆರೆಂಜ್ ಆರ್ಮಿ ಪಾಲಿಗೆ ಅತ್ಯಂತ ಉಪಯುಕ್ತ ಆಟಗಾರನಾಗಿ ಗುರುತಿಸಿಕೊಂಡಿದ್ದು, ತಮಗೆ ನೀಡಲಾಗುವ ಎಲ್ಲಾ ಸವಾಲುಗಳನ್ನು ಅತ್ಯಂತ ಶಾಂತವಾಗಿ ಹಾಗೆಯೇ ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.
undefined
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ವಿಲಿಯಮ್ಸನ್ 12 ಪಂದ್ಯಗಳನ್ನಾಡಿ 45.28ರ ಸರಾಸರಿಯಲ್ಲಿ 317 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು.
undefined
click me!