RCB ಆಟಗಾರ ಆರನ್‌ ಫಿಂಚ್‌ ಬಗ್ಗೆ ಯಾರಿಗೂ ತಿಳಿಯದು ವಿಷಯಗಳು!

First Published Nov 17, 2020, 6:21 PM IST

ಆರನ್ ಫಿಂಚ್ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ತಂಡದ ನಾಯಕ. ವಿಕ್ಟೋರಿಯಾ ಮೂಲದ ಫಿಂಚ್‌ 2007-08 ರಿಂದ ತಂಡವನ್ನು ಪ್ರತಿನಿಧಿಸುತ್ತಿರುವ ಫಿಂಚ್‌, ರಾಷ್ಟ್ರೀಯ ಚೊಚ್ಚಲ ಪಂದ್ಯ ಆಡಿದ್ದು  2011ರಲ್ಲಿ.  ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ ಫಿಂಚ್‌. ಈ ಕ್ರಿಕೆಟಿಗನಿಗೆ ಸಂಬಂಧಿಸಿದ ಕೆಲವು ಯಾರಿಗೂ ಗೊತ್ತಿರದ ವಿಷಯಗಳು ಇಲ್ಲಿವೆ.

ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆರನ್ ಫಿಂಚ್ ಫೇಮಸ್‌ ಆಟಗಾರರಲ್ಲಿ ಒಬ್ಬರು. ಕೆಲವು ವರ್ಷಗಳಿಂದ ತಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಫಿಂಚ್‌.
undefined
ಅಸಾಧಾರಣ ಆರಂಭಿಕ ಬ್ಯಾಟ್ಸ್‌ಮನ್ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಸಂಬಂಧಿಸಿದ ಕೆಲವು ಸಂಗತಿಗಳು ಇಲ್ಲಿವೆ.
undefined
ಫಿಂಚ್‌ ಟ್ಯಾಲೆಂಟೆಡ್ಕ್ರೀಡಾಪಟು ಎನ್ನುವುದರಲ್ಲಿ ಅನುಮಾನವವಿಲ್ಲ. ಮೊದಲು ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ ಫಿಂಚ್ಪ್ರತಿಭೆ ಕೇವಲ ಕ್ರಿಕೆಟ್‌ಗೆ ಸೀಮಿತವಾಗಿರಲಿಲ್ಲ.
undefined
ಇವರು ಆಸ್ಟ್ರೇಲಿಯಾದ ರೂಲ್ಸ್‌ ಫುಟ್‌ಬಾಲ್‌ನಲ್ಲೂ ಆಡುತ್ತಿದ್ದರು. ಆದರೆ ಫುಟ್‌ಬಾಲ್‌ನಲ್ಲಿ ಯಾವುದೇ ಕ್ಲಬ್ ಅಥವಾ ತಂಡವನ್ನು ಪ್ರತಿನಿಧಿಸಲಿಲ್ಲ.
undefined
ಕೆರಿಯರ್‌ನ ಆರಂಭಿಕ ದಿನಗಳಲ್ಲಿ ಫಿಂಚ್‌ ಬ್ಯಾಡ್‌ ಬಾಯ್‌ ಎನಿಸಿಕೊಂಡಿದ್ದರು. ಹಲವು ಬಾರಿ ಮದ್ಯಪಾನ ಮತ್ತು ಧೂಮಪಾನ ಮಾಡಿರುವ ವರದಿಗಳೂ ಇವೆ. ಈ ಬಾರಿ ಐಪಿಎಲ್‌ ಸಮಯದಲ್ಲೂ ಸಹ ಧೂಮಪಾನ ಮಾಡುತ್ತಾ ಸಿಕ್ಕಿ ಬಿದ್ದಿದ್ದರು.
undefined
ರೂಮ್‌ನ ಸ್ವಚ್ಛತೆ ಕಾಪಾಡಿ ಕೊಳ್ಳದ ಕಾರಣ 2007 ರಲ್ಲಿ ನ್ಯಾಷನಲ್ ಅಕಾಡೆಮಿ ಇವರನ್ನು ಬ್ಯಾನ್‌ ಮಾಡಿತು.
undefined
ಟಾಪ್‌ ಆಟಗಾರನಾಗಿದ್ದರೂ, ಟ್ವೆಂಟಿ -20 ಫಾರ್ಮ್ಯಾಟ್‌ನಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. 2010 ರಲ್ಲಿ ರಾಜಸ್ಥಾನ್ ರಾಯಲ್ಸ್ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು ಎಂಟು ವಿಭಿನ್ನ ಫ್ರ್ಯಾಂಚೈಸ್‌ಗಾಗಿ ಆಡಿದ್ದಾರೆ.
undefined
ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರುಪರ ಆಡುತ್ತಿರುವ ಫಿಂಚ್‌ ಈ ಸೀಸನ್‌ನಲ್ಲಿ ಹೇಳಿಕೊಳ್ಳುವಂತ ಸಾಧನೆ ಮಾಡಲಿಲ್ಲ. ಅವರು 2015ರಲ್ಲಿ ಐಪಿಎಲ್ ಗೆದ್ದಮುಂಬೈ ಇಂಡಿಯನ್ಸ್ ಜೊತೆ ಆಡಿದ್ದರು.
undefined
2014 ರಲ್ಲಿ ಮೇರಿಲೆಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಐಸಿಸಿ ರೆಸ್ಟ್ ಆಫ್ ದಿ ವರ್ಲ್ಡ್ ಇಲೆವೆನ್ ವಿರುದ್ಧ ವಿಶೇಷ ಟೆಸ್ಟ್ ಪಂದ್ಯದಲ್ಲಿ ಫಿಂಚ್ ಎಂಸಿಸಿಯನ್ನು ಪ್ರತಿನಿಧಿಸಿದ್ದರು. ಇದು ಫಿಂಚ್‌ರ ಅನಧಿಕೃತ ಟೆಸ್ಟ್ ಚೊಚ್ಚಲ ಪಂದ್ಯವಾಗಿತ್ತು, ಬ್ರಿಯಾನ್ ಲಾರಾ, ರಾಹುಲ್ ರಾಹುಲ್ ದ್ರಾವಿಡ್ ಮತ್ತು ಶಿವನಾರೈನ್ ಚಂದರ್‌ಪಾಲ್ ಅವರಂತಹ ಲೆಜೆಂಡ್‌ಗಳ ಜೊತೆ ಬ್ಯಾಟಿಂಗ್ ಮಾಡಿ ಅಜೇಯ 181 ರನ್ ಗಳಿಸಿದರು.
undefined
ಆಸ್ಟ್ರೇಲಿಯಾ ಪರವಾಗಿ ಟ್ವೆಂಟಿ -20 ಇಂಟರ್‌ ನ್ಯಾಷನಲ್‌ ಅನ್ನು 2011ರಲ್ಲಿ ಡೆಬ್ಯೂ ಮಾಡಿದ್ದರು. ಟೆಸ್ಟ್ ಆಡಲು ಸುಮಾರು ಎಂಟು ವರ್ಷಗಳ ಕಾಲ ಕಾದರು. 2018ರಲ್ಲಿ ಅವರು ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್‌ ಆಡಿದರು.
undefined
ಫಿಂಚ್ ಅಗತ್ಯವಿರುವವರಿಗೆ ಸಹಾಯ ಮಾಡುವ ಗುಣಹೊಂದಿದ್ದಾರೆ. ಅವರ ಟ್ರೈನಿಂಗ್‌ ಕಿಟ್ ಅನ್ನು ಸಹ ನೀಡಿದ ಉದಾಹರಣೆ ಇದೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದ ಗಿಫ್ಟ್‌ ಆಗಿ ಪಡೆದ ಅವರ ಫೇವರೇಟ್‌ ಬ್ಯಾಟ್ ಅನ್ನು ಅವರ ಗೆಳೆಯನಿಗೆ ಕೊಟ್ಟರು.
undefined
click me!