ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡವು 10 ರನ್‌ಗಳ ಆಘಾತಕಾರಿ ಸೋಲು ಕಂಡಿತ್ತು.
undefined
ಈ ಆಘಾತದಿಂದ ಹೊರಬರುವ ಮುನ್ನವೇ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ ಹೈದರಾಬಾದ್ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.
undefined
SRH ತಂಡದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಸಂಪೂರ್ಣ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.
undefined
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 5ನೇ ಓವರ್‌ನಲ್ಲಿ ಬೌಲ್ ಮಾಡುವ ವೇಳೆ ಮಿಚಲ್ ಮಾರ್ಷ್ ಜಾರಿ ಬಿದ್ದಿದ್ದರು. ಈ ವೇಳೆ ಅವರ ಪಾದಕ್ಕೆ ಪೆಟ್ಟಾಗಿದ್ದು, ಕೇವಲ 4 ಬಾಲ್‌ಗಳನ್ನು ಮಾತ್ರ ಬೌಲ್ ಮಾಡಲು ಮಾತ್ರ ಅವರಿಗೆ ಸಾಧ್ಯವಾಗಿತ್ತು.
undefined
ಬಳಿಕ ಇಡೀ ಪಂದ್ಯ ಪೆವಿಲಿಯನ್‌ನಲ್ಲಿ ಕುಳಿತ್ತಿದ್ದ ಮಾರ್ಷ್, ತಂಡ ಸಂಕಷ್ಟದಲ್ಲಿದ್ದಾಗ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು.
undefined
ಆದರೆ ಕಾಲಿನ ನೋವಿನಿಂದ ಬಳಲುತ್ತಿದ್ದ ಮಾರ್ಷ್ ಆರ್‌ಸಿಬಿ ವೇಗಿ ಶಿವಂ ದುಬೆ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಕುಂಟುತ್ತಲೇ ಪೆವಿಲಿಯನ್ ಸೇರಿದ್ದರು.ಆದರೆ ಕಾಲಿನ ನೋವಿನಿಂದ ಬಳಲುತ್ತಿದ್ದ ಮಾರ್ಷ್ ಆರ್‌ಸಿಬಿ ವೇಗಿ ಶಿವಂ ದುಬೆ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಕುಂಟುತ್ತಲೇ ಪೆವಿಲಿಯನ್ ಸೇರಿದ್ದರು.
undefined
‘ಮಿಚೆಲ್ ಮಾರ್ಷ್ ಅವರ ಗಾಯ ಗಂಭೀರವಾಗಿ ಕಾಣುತ್ತಿದೆ. ಮುಂದೆ ಅವರು ಯಾವುದೇ ಪಂದ್ಯವನ್ನು ಆಡಲಿದ್ದಾರೆ ಎಂಬ ಬಗ್ಗೆ ಖಾತ್ರಿಯಿಲ್ಲ’ ಎಂದು ಹೈದ್ರಾಬಾದ್ ತಂಡದ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ತಂಡ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
undefined
ಒಂದು ವೇಳೆ ಮಾರ್ಷ್ ಸೇವೆ ತಂಡಕ್ಕೆ ಲಭ್ಯವಾಗದಿದ್ದರೆ, ಐಸಿಸಿ ಟಿ20 ನಂ.1 ಶ್ರೇಯಾಂಕಿತ ಆಲ್ರೌಂಡರ್ ಮೊಹಮ್ಮದ್ ನಬಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
undefined