ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಮನಗೆದ್ದ ದೇವದತ್ ಪಡಿಕ್ಕಲ್ ಬ್ಯಾಟಿಂಗ್..!

Suvarna News   | Asianet News
Published : Sep 22, 2020, 02:16 PM ISTUpdated : Sep 22, 2020, 02:20 PM IST

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ತಾವಾಡಿದ ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ದೇವದತ್ ಬ್ಯಾಟಿಂಗೆ ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಶಹಬ್ಬಾಸ್ ಎಂದಿದ್ದಾರೆ.  ದೇವದತ್ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್ ಸಮಯೋಚಿತ ಬ್ಯಾಟಿಂಗ್ ಹಾಗೂ ಚಹಲ್, ಸ್ಟೇನ್ ಚಾಣಾಕ್ಷ ಬೌಲಿಂಗ್ ನೆರವಿನಿಂದ ಆರ್‌ಸಿಬಿ 13ನೇ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.  

PREV
19
ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಮನಗೆದ್ದ ದೇವದತ್ ಪಡಿಕ್ಕಲ್ ಬ್ಯಾಟಿಂಗ್..!

ಕರ್ನಾಟಕದ ಯುವ ಎಡಗೈ ಬ್ಯಾಟ್ಸ್‌ಮನ್‌ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿಯಾಗಿಯೇ ಶುಭಾರಂಭ ಮಾಡಿದ್ದಾರೆ. ಕೇವಲ 42 ಎಸೆತಗಳಲ್ಲಿ 8 ಆಕರ್ಷಕ ಬೌಂಡರಿಗಳ ನೆರವಿನಿಂದ 56 ರನ್ ಬಾರಿಸಿದರು.

29

20 ವರ್ಷದ ಪಡಿಕ್ಕಲ್ ಆಸೀಸ್ ನಾಯಕ ಫಿಂಚ್ ಜತೆಗೂಡಿ ಕೇವಲ 11 ಓವರ್‌ಗಳಲ್ಲಿ 90 ರನ್‌ಗಳ ಜತೆಯಾಟವಾಡಿ, ವಿರಾಟ್ ಪಡೆಗೆ ಉತ್ತಮ ಆರಂಭ ಒದಗಿಸಿಕೊಟ್ಟರು.

39

ಪಡಿಕ್ಕಲ್ ಬ್ಯಾಟಿಂಗ್ ಮುಂದೆ ಆಸೀಸ್ ಸ್ಪೋಟಕ ಬ್ಯಾಟ್ಸ್‌ಮನ್ ಆ್ಯರೋನ್ ಫಿಂಚ್ ಆಟ ಸಪ್ಪೆ ಎನಿಸುವಷ್ಟರ ಮಟ್ಟಿಗೆ ಕರ್ನಾಟಕದ ಆಟಗಾರ ಪ್ರಾಬಲ್ಯ ಮೆರೆದರು.

49

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದೇವದತ್ ಪಡಿಕ್ಕಲ್(56), ಎಬಿ ಡಿವಿಲಿಯರ್ಸ್(51) ಮಿಂಚಿನ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿತ್ತು.

59

ಇದಕ್ಕುತ್ತರವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇವಲ 153 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 10 ರನ್‌ಗಳ ಅಂತರದ ಸೋಲು ಕಂಡಿತು.

69

ದೇವದತ್ ಪಡಿಕ್ಕಲ್ ಅವರ ಅಬ್ಬರದ ಬ್ಯಾಟಿಂಗ್ ಕಂಡು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

79

ದೇವದತ್ ಪಡಿಕ್ಕಲ್ ಆಟವನ್ನು ನಾನು ಎಂಜಾಯ್ ಮಾಡಿದೆ. ಎಡಗೈ ಬ್ಯಾಟ್ಸ್‌ಮನ್ ಆಟ ಖುಷಿ ಕೊಟ್ಟಿತು ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.

89

ಇಲ್ಲಿಯವರೆಗೆ ನಡೆದ ಮೂರು ಪಂದ್ಯಾವಳಿಗಳ ಬಗ್ಗೆಯೂ ದಾದಾ ಟ್ವೀಟ್ ಮಾಡಿದ್ದು, ಯುಎಇ ಪಂದ್ಯ ಆಯೋಜನೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

99

ಇಲ್ಲಿಯವರೆಗೆ ಮೂರು ಪಂದ್ಯಗಳು ಯಶಸ್ವಿಯಾಗಿ ನಡೆದಿವೆ. ಮುಂದೆಯೂ ಪುರುಷರ ಹಾಗೂ ಮಹಿಳೆಯರ ಐಪಿಎಲ್ ಪಂದ್ಯಾವಳಿಗಳು ಅಚ್ಚುಕಟ್ಟಾಗಿ ನಡೆಯುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ.

click me!

Recommended Stories