IPL 2020: ಇಂದಿನ ಪಂದ್ಯದಲ್ಲಿ ಈ 3 ದಾಖಲೆಗಳನ್ನು ಧೋನಿ ಬ್ರೇಕ್ ಮಾಡಲಿದ್ದಾರೆ..!

First Published Sep 22, 2020, 6:28 PM IST

ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದು ದೇಸಿ ಕ್ರಿಕೆಟ್‌ ಆಗಿರಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಿರಲಿ, ಧೋನಿ ಹಲವಾರು ಅಪರೂಪದ ದಾಖಲೆಗಳ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಧೋನಿ ಇಂದು(ಸೆ.22) ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯಲು ಸಜ್ಜಾಗಿದ್ದು, ಇಂದು 4 ದಾಖಲೆಗಳನ್ನು ಧೋನಿ ಮುರಿಯುವ ಸಾಧ್ಯತೆಯಿದೆ. ಯಾವುದವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

300 ಸಿಕ್ಸರ್ ಬಾರಿಸಿದ 3ನೇ ಆಟಗಾರ ಎನಿಸಲು ಬೇಕು ಕೇವಲ 5 ಬಿಗ್ ಹಿಟ್‌
undefined
ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಮಹೇಂದ್ರ ಸಿಂಗ್ ಧೋನಿ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ 295 ಸಿಕ್ಸರ್ ಬಾರಿಸಿದ್ದಾರೆ. ಇನ್ನು ಕೇವಲ 5 ಸಿಕ್ಸರ್ ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ 300 ಸಿಕ್ಸರ್ ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಲಿದ್ದಾರೆ. ಈ ಮೊದಲು ರೋಹಿತ್ ಶರ್ಮಾ(361) ಹಾಗೂ ಸುರೇಶ್ ರೈನಾ(311) ಸಿಕ್ಸರ್‌ನಲ್ಲಿ ತ್ರಿಶತಕ ಪೂರೈಸಿದ್ದಾರೆ.
undefined
ಐಪಿಎಲ್‌ನಲ್ಲಿ 2ನೇ ಅತಿಹೆಚ್ಚು ಕ್ಯಾಚ್ ಪಡೆದ ಆಟಗಾರ ಎನಿಸಲು ಬೇಕು ಜಸ್ಟ್ 3 ಕ್ಯಾಚ್
undefined
ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ ಟೂರ್ನಿಯಲ್ಲಿ 100(ವಿಕೆಟ್ ಕೀಪರ್+ ಕ್ಷೇತ್ರರಕ್ಷಕನಾಗಿ) ಕ್ಯಾಚ್ ಹಿಡಿದಿದ್ದಾರೆ. ಇನ್ನು 3 ಕ್ಯಾಚ್ ಹಿಡಿದರೆ ಸುರೇಶ್ ರೈನಾ ಅವರನ್ನು ಹಿಂದಿಕ್ಕಿ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಕ್ಯಾಚ್ ಹಿಡಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದ್ದಾರೆ. ಈ ಪಟ್ಟಿಯಲ್ಲಿ 109 ಕ್ಯಾಚ್ ಹಿಡಿದಿರುವ ಕೋಲ್ಕತ ನೈಟ್‌ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ ಮೊದಲ ಸ್ಥಾನದಲ್ಲಿದ್ದಾರೆ.
undefined
ವಿಕೆಟ್‌ ಕೀಪರ್‌ ಆಗಿ 3 ಕ್ಯಾಚ್ ಹಿಡಿದರೆ ಧೋನಿ ಸೆಂಚುರಿ ಕ್ಯಾಚ್..!
undefined
ಇಲ್ಲಿಯವರೆಗೆ ಐಪಿಎಲ್‌ನಲ್ಲಿ ವಿಕೆಟ್ ಕೀಪರ್ ಆಗಿ ಮಹೇಂದ್ರ ಸಿಂಗ್ ಧೋನಿ 97 ಕ್ಯಾಚ್ ಪಡೆದಿದ್ದಾರೆ. ಇನ್ನು ಮೂರು ಕ್ಯಾಚ್ ಹಿಡಿದರೆ ವಿಕೆಟ್ ಕೀಪರ್ ಆಗಿ 100 ಕ್ಯಾಚ್ ಪಡೆದ ಎರಡನೇ ಕೀಪರ್ ಎನಿಸಲಿದ್ದಾರೆ. ಇಂದಿನ ಪಂದ್ಯದಲ್ಲೇ ಒಂದು ವೇಳೆ 5 ಕ್ಯಾಚ್ ಹಿಡಿದರೆ ದಿನೇಶ್ ಕಾರ್ತಿಕ್ ಅವರನ್ನು ಹಿಂದಿಕ್ಕೆ ಅಗ್ರಸ್ಥಾನಕ್ಕೇರಲಿದ್ದಾರೆ.
undefined
click me!