ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2016ರ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಬೆಂಗಳೂರು ಫ್ರಾಂಚೈಸಿ ಈ ಬಾರಿ ಎಂದಿಗಿಂತ ಬಲಿಷ್ಠವಾಗಿ ಸಜ್ಜಾಗಿದೆ. ಮೊದಲ ಪಂದ್ಯದಲ್ಲೇ ಬಲಾಢ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡ ಎದುರಾಗಿರುವುದರಿಂದ ಆರ್‌ಸಿಬಿ ಕೂಡಾ ಅಷ್ಟೇ ಬಲಿಷ್ಠವಾಗಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್,ಕಾಂ ಆರ್‌ಸಿಬಿಯ ಮೊದಲ ಪಂದ್ಯಕ್ಕೆ ಸಂಭಾವ್ಯ ಬೆಂಗಳೂರು ತಂಡವನ್ನು ಪ್ರಕಟಿಸಿದೆ.