IPL 2020ಗೆ ಮಯಾಂತಿ ಲ್ಯಾಂಗರ್‌ ಮಿಸ್‌ - ಕಾರಣ ಬಹಿರಂಗ!

First Published | Sep 21, 2020, 5:52 PM IST

ಕ್ರೀಡಾ ನಿರೂಪಣೆಯಲ್ಲಿ ಫೇಮಸ್‌ ಆಗಿರುವ ಮಯಾಂತಿ ಲ್ಯಾಂಗರ್ ಸದ್ಯಕ್ಕೆ ವಿಶ್ವದಲ್ಲೇ ಅತ್ಯುತ್ತಮ ಸ್ಪೋರ್ಟ್ಸ್ ಆ್ಯಂಕರ್. ಕ್ರಿಕೆಟ್, ಫುಟ್ಬಾಲ್ ವಿಶ್ವಕಪ್ ಒಲಿಂಪಿಕ್ಸ್ ಸೇರಿ ಎಲ್ಲಾ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಇವರು. ಆದರೆ ಸ್ಟಾರ್‌ ಸ್ಪೋಟ್ಸ್‌ನ ಖ್ಯಾತ ನಿರೂಪಕಿ ಮಯಾಂತಿ ಲ್ಯಾಂಗರ್‌ ಈ ಬಾರಿ ಐಪಿಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆಕೆ  ಫ್ಯಾನ್ಸ್‌ಗೆ ಬಾರಿ ಬೇಸರದ ಸಂಗತಿಯಾಗಿದೆ ಇದು. ಈ ನಿರ್ಧಾರದ ಹಿಂದಿನ ಕಾರಣ ತಿಳಿಯಲು ಕಾತುರರಾಗಿದ್ದರು. ಕೊನೆಗೂ ಮಯಾಂತಿ IPL 2020 ಮಿಸ್‌ ಮಾಡಿಕೊಂಡಿರುವುದಕ್ಕೆ ಕಾರಣ ರಿವೀಲ್‌ ಮಾಡಿದ್ದಾರೆ. 

mayanti langer stuart binny blessed with a baby boy posts pic on social media
ಇತ್ತೀಚಗೆ ಪತಿಯೊಂದಿಗೆ ಮಯಾಂತಿ ಮಾಡಿರುವ ಪೋಸ್ಟ್ ಎಲ್ಲರನ್ನೂ ಒಮ್ಮೆ ದಿಗ್ಬ್ರಮೆಗೊಳಿಸಿದೆ.
mayanti langer stuart binny blessed with a baby boy posts pic on social media
ಜನಪ್ರಿಯ ಐಪಿಎಲ್ ಟೂರ್ನಿಮೆಂಟ್‌ಗಳ ಜೊತೆ ನಿರೂಪಕಿ ಮಯಾಂತಿ ಲ್ಯಾಂಗರ್‌ ಸಹ ಫೇಮಸ್‌.
Tap to resize

IPL 2020ನಲ್ಲಿ ಮಯಾಂತಿ ಭಾಗವಹಿಸುವುದಿಲ್ಲ ಎಂದು ಸ್ಟಾರ್‌ ಸ್ಪೋರ್ಟ್‌ ಗುರುವಾರ ಕನ್ಫರ್ಮ್‌ ಮಾಡಿತ್ತು. ಆದರೆ ಕಾರಣ ಹೇಳಿರಲಿಲ್ಲ.
ಹಲವು ಊಹಾಪೋಹಗಳ ನಂತರ ಕೊನೆಗೂ ಕಾರಣ ಬಹಿರಂಗಗೊಂಡಿದೆ. ಸ್ವತಹ ಮಾಯಾಂತಿ ಟ್ವೀಟ್‌ ಮಾಡುವ ಮೂಲಕ ತಿಳಿಸಿದ್ದಾರೆ.
ಕ್ರಿಕೆಟಿಗ ಸ್ಟುವರ್ಟ್‌ ಬಿನ್ನಿ ಹಾಗೂ ಮಯಾಂತಿ ಲ್ಯಾಂಗರ್‌ ದಂಪತಿಗೆ ಗಂಡು ಮಗು ಜನನವಾಗಿರುವುದು ಆ್ಯಂಕರ್ ಐಪಿಎಲ್‌ ಮಿಸ್‌ ಮಾಡಿಕೊಳ್ಳುವುದರ ಹಿಂದಿನ ಕಾರಣವಾಗಿದೆ.
ಮಯಾಂತಿ ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದಾರೆ.
ಮಗು ಹುಟ್ಟಿ ಒಂದುವರೆ ತಿಂಗಳಾದ ನಂತರ ಫೋಟೋ ಜೊತೆ ಈ ಸಂತೋಷವನ್ನು ಶೇರ್‌ ಮಾಡಿಕೊಂಡಿದ್ದಾರೆ.
ಪತಿ ಬಿನ್ನಿ ಜೊತೆ ಮಗುವನ್ನು ಎತ್ತಿಕೊಂಡಿರುವ ಫೋಟೋ ಜೊತೆಗೆ ಐಪಿಎಲ್‌ ನೋಡಲಿದ್ದೇನೆ ಎಂದು ಟ್ಟೀಟ್‌ ಮಾಡಿದ್ದಾರೆ ಮಯಾಂತಿ ಲ್ಯಾಂಗರ್.
ವಿಶ್ವದಲ್ಲೇ ಅತ್ಯುತ್ತಮ ಸ್ಪೋರ್ಟ್ಸ್ ಆ್ಯಂಕರ್ ಆಗಿರುವ ಇವರು 4 ಬಾರಿ ಐಪಿಎಲ್‌ ಆ್ಯಂಕರ್ ಸಂದರ್ಶನಕ್ಕೆ ಹೋಗಿ, ರಿಜೆಕ್ಟ್ ಆಗಿದ್ದರು.
ಐಸಿಸಿ ವಿಶ್ವಕಪ್ 2015 ಹಾಗೂ 2019 ಸೇರಿ, ಏಷ್ಯಾಕಪ್, ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ನಿರೂಪಕಿಯಾಗಿ ಮೆಚ್ಚುಗೆ ಗಳಿಸಿದ್ದಾರೆ.
2018ರಲ್ಲಿ ಸ್ಟಾರ್ ವಾಹಿನಿ ಐಪಿಎಲ್ ಹಕ್ಕು ಖರೀದಿಸಿದ ಅವಕಾಶ ಪಡೆದ ನಂತರದಿಂದ ಮಾಯಾಂತಿ ಕಳೆದ ಎರಡು ಸೀಸನ್‌ನಲ್ಲಿ ಐಪಿಲ್‌ ಕೇಂದ್ರ ಬಿಂದುವಾಗಿದ್ದರು.
ಲ್ಯಾಂಗರ್‌ ಪ್ರತಿಭೆ ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ.
ಇವರು ಫುಟ್ಬಾಲ್ ವಿಶ್ವಕಪ್, ಒಲಿಂಪಿಕ್ಸ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲೂ ಆ್ಯಂಕರ್‌ ಆಗಿ ಸೈ ಎನಿಸಿಕೊಂಡಿದ್ದಾರೆ.
ದೇಶದ ಅತ್ಯುತ್ತಮ ಕ್ರೀಡಾ ನಿರೂಪಕರಲ್ಲಿ ಒಬ್ಬರಾದ ಮಾಯಂತಿ ಕಳೆದ ಎರಡು ಐಪಿಎಲ್ ಸೀಸನ್‌ನಲ್ಲಿ ಪ್ಯಾನೆಲ್‌ನ ಭಾಗವಾಗಿದ್ದರು.

Latest Videos

click me!