ಬಾಂಗ್ಲಾದ ಉಚ್ಚಾಟಿತ ನಾಯಕಿ ಭಾರತಕ್ಕೆ ಬಂದು 100 ದಿನ: ಶೇಕ್‌ ಹಸೀನಾ ವಾಸ ಎಲ್ಲಿ

First Published | Nov 18, 2024, 3:10 PM IST

ಬಾಂಗ್ಲಾ ದಂಗೆ ವೇಳೆ ದೇಶ ಬಿಟ್ಟು ಓಡಿ ಬಂದ ಬಾಂಗ್ಲಾದ ಉಚ್ಚಾಟಿತ ನಾಯಕಿ ಶೇಖ್ ಹಸೀನಾ ಅವರು ಈಗಾಗಲೇ ಭಾರತದಲ್ಲಿ 100 ದಿನಗಳನ್ನು ಕಳೆದಿದ್ದು, ಅವರು ಈಗ ಎಲ್ಲಿ ವಾಸ ಮಾಡ್ತಿದ್ದಾರೆ ಅವರ ಆರೋಗ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

ಅತಿ ಹೆಚ್ಚು ಕಾಲ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ, 2024 ರ ಆಗಸ್ಟ್ 5 ರಂದು ಅಧಿಕಾರದಿಂದ ಪದಚ್ಯುತರಾದ ನಂತರ ಭಾರತದಲ್ಲಿ ಆಶ್ರಯ ಪಡೆದರು. ಹಸೀನಾ ಭಾರತದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ, ಬ್ರಿಟನ್ ಅಥವಾ ಇನ್ನೊಂದು ದೇಶಕ್ಕೆ ಹೋಗುವ ಉದ್ದೇಶ ಹೊಂದಿದ್ದಾರೆ ಎಂದು ಅವರ ಆಗಮನದ ಸಮಯದಲ್ಲಿ ವರದಿಯಾಗಿತ್ತು. ಆದರೆ, ಬೇರೆ ಯಾವುದೇ ದೇಶ ಅವರಿಗೆ ರಾಜಕೀಯ ಆಶ್ರಯ ನೀಡಿಲ್ಲ. ಹೀಗಾಗಿ ಅವರು ಪ್ರಸ್ತುತ ಭಾರತದ ರಕ್ಷಣೆಯಲ್ಲಿದ್ದಾರೆ.

 ಬಾಂಗ್ಲಾದಲ್ಲಿ ಅಧಿಕಾರ ಕಳೆದುಕೊಂಡ ನಂತರ ಹಸೀನಾ ಭಾರತಕ್ಕೆ ಬಂದರು. ಅವರ C-130J ಹರ್ಕ್ಯುಲಸ್ ಹಿಂಡನ್ ವಾಯುನೆಲೆಯಲ್ಲಿ ಇಳಿಯಿತು. ಅಲ್ಲಿಂದ ಬೇರೆಡೆ ತೆರಳುವ ಮೊದಲು ಸುಮಾರು ಎರಡು ದಿನಗಳ ಕಾಲ ಅಲ್ಲಿಯೇ ಅವರಿಗೆ ಆಶ್ರಯ ನೀಡಲಾಯ್ತು..

Tap to resize

ಭಾರತದ ರಾಜಧಾನಿ ದೆಹಲಿ ಶೇಖ್ ಹಸೀನಾ ಅವರಿಗೆ ಹೊಸದಲ್ಲ. 1975 ರಲ್ಲಿ ಪಾಕಿಸ್ತಾನಿ ಸೈನ್ಯವು ಶೇಕ್ ಹಸೀನಾ ಅವರ ತಂದೆ ಮುಜಿಬುರ್ ರೆಹಮಾನ್ ಅವರನ್ನು ಹತ್ಯೆ ಮಾಡಿದ ನಂತರ, ಆಗಿನ ಪ್ರಧಾನಿ ಇಂದಿರಾ ಗಾಂಧಿ  ಶೇಕ್ ಹಸೀನಾ ಅವರಿಗೆ ಭಾರತದಲ್ಲಿ ಆಶ್ರಯ ನೀಡಿದ್ದರು.

ಹಸೀನಾ ಮತ್ತು ಅವರ ಕುಟುಂಬ ಇಂದಿರಾ ಗಾಂಧಿಯವರ ರಕ್ಷಣೆಯಲ್ಲಿ ಆರು ವರ್ಷಗಳ ಕಾಲ ಭಾರತದಲ್ಲಿ ಆಶ್ರಯ ಪಡೆದರು. ಅವರನ್ನು ಪ್ರವಣ್ ಮುಖರ್ಜಿ ನೋಡಿಕೊಂಡರು.

ಪ್ರಸ್ತುತ ಆಶ್ರಯ: ಆದರೆ ಹಲವು ವರ್ಷಗಳ ಕಾಲ ಬಾಂಗ್ಲಾದೇಶವನ್ನು ಆಳಿದ ನಂತರ ಶೇಖ್ ಹಸೀನಾ ಮತ್ತೆ ಆಶ್ರಯ ಅರಸಿ ಭಾರತಕ್ಕೆ ಬಂದಿದ್ದು, ಈ ಬಾರಿ ಅವರು ದೆಹಲಿಯ ಲುಟ್ಯೆನ್ಸ್ ಬಂಗಲೆಯಲ್ಲಿ ವಾಸ ಮಾಡ್ತಿದ್ದಾರೆ ಎಂದು ವರದಿ ಆಗಿದೆ. ಈ ಬಂಗಲೆಯನ್ನು ಎಲ್ಲಾ ನಿಯಮಗಳನ್ನು ಅನುಸರಿಸಿ ಬಿಗಿ ಭದ್ರತೆಯೊಂದಿಗೆ.ಹಸೀನಾ ಅವರಿಗೆ ಸುರಕ್ಷಿತ ಮನೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ,

ಲುಟ್ಯೆನ್ಸ್ ಬಂಗಲೆ ಇರುವ ಪ್ರದೇಶವೂ ದೆಹಲಿಯ ಪ್ರತಿಷ್ಠಿತ ಪ್ರದೇಶವಾಗಿದೆ, ಸಂಸದರು ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳು ಇಲ್ಲಿ ವಾಸ ಮಾಡ್ತಾರೆ. ಇಲ್ಲಿ, ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಹಸೀನಾ ಎರಡು ತಿಂಗಳಿಗೂ ಹೆಚ್ಚು ಕಾಲ ಲುಟ್ಯೆನ್ಸ್ ಬಂಗಲೆ ವಲಯದಲ್ಲಿದ್ದಾರೆ ಎಂದು ಹಲವಾರು ವರದಿಗಳು ಹೇಳಿಕೊಳ್ಳುತ್ತವೆ. ಅವರು ಅಲ್ಲಿ ಬೆಳಗಿನ ನಡಿಗೆಗೆ ಹೋಗುವುದನ್ನು ಕೆಲವರು ನೋಡಿದ್ದಾರೆ ಎಂದು ಸಹ ಹೇಳಿಕೊಳ್ಳುತ್ತಾರೆ. ಆದರೆ ಭದ್ರತಾ ಕಾರಣದಿಂದ ಇದರ ಬಗ್ಗೆ ಖಚಿತತೆ ಇಲ್ಲ.

ಹಸೀನಾ ಅವರ ಭದ್ರತೆ

ಹಸೀನಾ ಅವರ ರಕ್ಷಣೆಗೆ ಬಿಗಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ, ಭದ್ರತಾ ಸಿಬ್ಬಂದಿ ಅವರನ್ನು ಸದಾ ಸುತ್ತುವರೆದಿರುತ್ತಾರೆ. ಅವರಿಗೆ ವಿಐಪಿ ರಕ್ಷಣೆ ನೀಡಲಾಗಿದೆ. ಬಾಂಗ್ಲಾದೇಶ ಸರ್ಕಾರವು ಇತ್ತೀಚೆಗೆ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಮರಳಿಸುವಂತೆ ಹಾಗೂ ಅವರ ವಿರುದ್ಧ ಬಂಧನ ವಾರಂಟ್ ನೀಡುವಂತೆ ಮನವಿ ಮಾಡಿದೆ.

Latest Videos

click me!