ಹವ್ಯಾಸವೇ ಪ್ರೇರಣೆಯಾದಾಗ: ಸರ್ಕಾರಿ ಶಾಲೆ ಸ್ವರೂಪವನ್ನೇ ಬದಲಾಯಿಸಿದ ಐವರು ಫ್ರೆಂಡ್ಸ್!

First Published Jul 8, 2020, 6:58 PM IST

ಐವರು ಸ್ನೇಹಿತರ ಪೇಂಟಿಂಗ್ ಹವ್ಯಾಸದಿಂದ ಪಾಳು ಬಿದ್ದ ಕಟ್ಟಡದಂತಾಗಿದ್ದ ಸರ್ಕಾರಿ ಶಾಲೆಯೊಂದರ ಸ್ವರೂಪವನ್ನೇ ಬದಲಾಯಿಸಿದೆ. ಲಾಕ್‌ಡೌನ್ ನಡುವೆ ತಮ್ಮ ಪರಿಶ್ರಮದಿಂದ ಈ ಐವರು ಸ್ನೇಹಿತರು ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆ ರೇಂಜಿಗೆ ಬದಲಾಯಿಸಿದ್ದಾರೆ. ಇದನ್ನು ಕಂಡ ಜಿಲ್ಲಾಡಳಿತ ಶಿಕ್ಷಣ ಇಲಾಖೆಯಿಂದ ಅವರಿಗೆ ಪ್ರೋತ್ಸಾಹಿಸಿದ್ದು, ಖುಷಿಯಾದ ಇವರು ಮತ್ತಷ್ಟು ಶಾಲೆಗಳ ಸ್ವರೂಪ ಬದಲಾಯಿಸಲು ಮುಂದಾಗಿದ್ದಾರೆ. ಸದ್ಯ ಈ ಐವರು ಸೇರಿ ವಲಸೆ ಕಾರ್ಮಿಕರ ಸಹಾಯದಿಂದ ಗಯಾದ ಮೂರು ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸಿದ್ದಾರೆ. ಸದ್ಯ ಇದನ್ನು ಕಂಡವರೆಲ್ಲಾ ಈ ಮಕ್ಕಳ ಶ್ರಮ ಹಾಗೂ ಸಾಧನೆಗೆ ಸಲಾಂ ಎಂದಿದ್ದಾರೆ. ಅಲ್ಲದೇ ಅತ್ತ ಶಿಕ್ಷಣ ಇಲಾಖೆ ಕೂಡಾ ಕೊರೋನಾತಂಕ ಕಡಿಮೆಯಾಗಿ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವಾಗ ಈ ಐವರು ಮಕ್ಕಳ ಸಹಾಯವನ್ನು ಪಡೆದು ವಿದ್ಯಾರ್ಥಿಗಳಿಗೂ ಈ ಕಲೆ ಕಲಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದೆ.

ಈವರೆಗೂ ಈ ಮೂವರು ಸೇರಿ ಜಿಲ್ಲೆಯ ಮೂರು ಶಾಲೆಗಳನ್ನು ಹೀಗೆ ಸುಂದರವಾಗಿಸಿದ್ದಾರೆ.
undefined
ರೋಶನಿ ಟಾಂಕ್, ಶ್ರೇಯಾ ಜೈನ್, ರಾಧಾ ಕುಮಾರಿ, ಖುಷ್ಬೂ ಕುಮಾರಿ ಹಾಗೂ ವಿವೇಕ್ ಟಾಂಕ್ ಈ ಐವರು ಗೆಳೆಯರೇ ತಮ್ಮ ಹವ್ಯಾಸವನ್ನು ಉತ್ಸಾಹವನ್ನಾಗಿಸಿದ್ದಾರೆ. ಇವರೆಲ್ಲಾ ಸೇರಿ ಶಾಲೆಯ ಗೋಡೆಗಳನ್ನು ವಿಭಿನ್ನ ಬಣ್ಣ ಹಾಗೂ ಆಕೃತಿಗಳಿಂದ ಸಿಂಗರಿಸಿದ್ದಾರೆ.
undefined
ಈವರೆಗೂ ಈ ಐವರು ಸೇರಿ ಮೂರು ಶಾಲೆಗಳ ಸ್ವರೂಪ ಬದಲಾಯಿಸಿದ್ದು, ಈ ಅಭಿಯಾನವನ್ನು ಮುಂದುವರೆಸಲಿದ್ದಾರೆ. ಇವರಿಗೆ ಚಿತ್ರಕಲೆಯಲ್ಲಿ ಭಾರೀ ಆಸಕ್ತಿ ಇದ್ದು, ತಮ್ಮ ಹವ್ಯಾಸದಿಂದ ಶಾಲೆ ರೂಪವನ್ನೇ ಬದಲಾಯಿಸಿದ್ದಾರೆ.
undefined
ಇನ್ನು ಈ ಕೆಲಸ ಮಾಡಲು ಆರಂಭದಲ್ಲಿ ಬಹಳ ಸಮಸ್ಯೆಗಳು ಎದುರಾದವು. ಕಡಿಮೆ ವಯಸ್ಸು ಹಾಗೂ ಕಡಿಮೆ ಅನುಭವ ಇರುವುದರಿಂದ ಈ ತೊಡಕುಗಳು ಎದುರಾದವು ಎಂಬುವುದು ರೋಶನಿ ಮಾತು. ಹಗಿದ್ದರೂ ಸತತ ಪರಿಶ್ರಮದಿಂದ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
undefined
ಶಿಕ್ಷಣ ಇಲಾಖೆಯಿಂದ ತಮಗೆ ಈ ಕೆಲಸ ಮಾಡಲು ಆದೇಶ ಸಿಕ್ಕಿದ್ದು, ಈ ಆದೇಶದನ್ವಯ ತಮ್ಮ ಹವ್ಯಾಸವನ್ನು ಉಪಯೋಗಿಸಿಕೊಂಡಿದ್ದಾರೆ. ಪೇಂಟಿಂಗ್ ಹವ್ಯಾಸದಿಂದಲೇ ಅವರು ಈ ಕೆಲಸ ಪೂರ್ಣಗೊಳಿಸಿದ್ದಾರೆ.
undefined
ಇನ್ನು ಶಿಕ್ಷಣ ಇಲಾಖೆ ಈ ಮಕ್ಕಳಿಗೆ ಪ್ರೋತ್ಸಾಹ ಧನವನ್ನೂ ನೀಡಿದೆ. ಆದರೆ ಹಣ ಸಂಪಾದನೆ ನಮ್ಮ ಉದ್ದೇಶವಲ್ಲ ಎಂಬುವುದು ಈ ಐವರ ಮಾತಾಗಿದೆ. ತಮ್ಮ ಕಾರ್ಯದ ಮೂಲಕ ಜನರಲ್ಲಿ ಸರ್ಕಾರಿ ಶಾಲೆ ಬಗ್ಗೆ ಇರುವ ಅಸಡ್ಡೆ ದೂರವಾಗಿಸುವುದೇ ನಮ್ಮ ಉದ್ದೇಶ. ಅಲ್ಲದೇ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವಾಗ ಬದಲಾವಣೆ ಕಂಡು ಬರಲಿ ಎಂದು ಹೀಗೆ ಮಾಡಿದ್ದೇವೆ ಎಂದಿದ್ದಾರೆ.
undefined
click me!