ಭಾರತದಲ್ಲಿ ಉದ್ಘಾಟನೆಗೊಂಡ ವಿಶ್ವದ ಅತಿದೊಡ್ಡ ಕೋವಿಡ್-19 ಚಿಕಿತ್ಸಾ ಕೇಂದ್ರ

Published : Jul 05, 2020, 02:30 PM IST

ಮಾಹಾಮಾರಿ ಕೊರೋನಾ ವೈರಸ್ ವಿರುದ್ಧ ಭಾರತ ಸಮರ್ಥವಾಗಿ ಹೋರಾಡುತ್ತಿದೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಈ ಹೋರಾಟದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಇದೀಗ ವಿಶ್ವದ ಅತಿದೊಡ್ಡ ಕೋವಿಡ್-19 ಚಿಕಿತ್ಸಾ ಕೇಂದ್ರ  ಭಾರತದಲ್ಲಿ ಇಂದು (ಭಾನುವಾರ) ಉದ್ಘಾಟನೆಗೊಂಡಿದೆ. ಎಲ್ಲಿ?ಏನು? ಅದರ ಫೋಟೋಗಳು ಈ ಕೆಳಗಿನಂತಿವೆ ನೋಡಿ.

PREV
19
ಭಾರತದಲ್ಲಿ ಉದ್ಘಾಟನೆಗೊಂಡ ವಿಶ್ವದ ಅತಿದೊಡ್ಡ ಕೋವಿಡ್-19 ಚಿಕಿತ್ಸಾ ಕೇಂದ್ರ

ವಿಶ್ವದ ಅತಿದೊಡ್ಡ ಕೊವಿಡ್ 19 ಚಿಕಿತ್ಸಾ ಕೇಂದ್ರ ಎನಿಸಿಕೊಂಡಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಕೊವಿಡ್ ಕೇರ್ ಆಸ್ಪತ್ರೆ(SPCCCH)ಯನ್ನು ಇಂದು ದೆಹಲಿಯಲ್ಲಿ ಉದ್ಘಾಟನೆ ಮಾಡಲಾಗಿದೆ.

29

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಭಾನುವಾರದಂದು ಲೋಕಾರ್ಪಣೆ ಮಾಡಿದರು.

39

 10 ಸಾವಿರ ಬೆಡ್ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯು ದೆಹಲಿಯ ಕಂಟೋನ್ಮೆಂಟ್ ಪ್ರದೇಶ ಹರ್ಯಾಣ ಗಡಿಭಾಗದ ಚಟ್ಟರ್ ಪುರ್ ಸಮೀಪವಿದೆ.

49

ಕೇಂದ್ರ ಗೃಹ ಸಚಿವಾಲಯ, ಡಿಆರ್ ಡಿಒ ಸಹಕಾರದೊಂದಿಗೆ ಈ ಬೃಹತ್ ಆಸ್ಪತ್ರೆ ನಿರ್ಮಾಣಗೊಂಡಿದೆ.

59

ಈ ಆಸ್ಪತ್ರೆ 1700 ಅಡಿ ಉದ್ದ, 700 ಅಡಿ ಅಗಲ ವಿಸ್ತೀರ್ಣವಿದೆ. 200 ಕೊಠಡಿಗಳಲ್ಲಿ 50 ಹಾಸಿಗೆ, 75ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳಿವೆ.

69

ಸದ್ಯಕ್ಕೆ ಐಟಿಬಿಪಿ ನಿರ್ವಹಣೆ ಹೊಣೆ ಹೊತ್ತುಕೊಂಡಿದ್ದು, 2000 ಬೆಡ್ಮ್ 170 ತಜ್ಞ ವೈದ್ಯರು, 700 ನರ್ಸ್, ತುರ್ತು ಸೇವಾ ಸಿಬ್ಬಂದಿಗಳನ್ನು ಬಳಸಲಾಗುತ್ತಿದೆ.

79

10,000 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯಲ್ಲಿ 1,000 ವಿಶೇಷ ತೀವ್ರ ನಿಗಾ ಘಟಕದ ಬೆಡ್​ಗಳು ಹಾಗೂ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದೆ.

89

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಸಹಾಯದೊಂದಿಗೆ ನೂತನ 'ಸರ್ದಾರ್ ವಲ್ಲಭಭಾಯಿ ಪಟೇಲ್ ಕೋವಿಡ್​ ಆಸ್ಪತ್ರೆ'​ ಸ್ಥಾಪಿಸಲಾಗಿದೆ.

99

ದೀನ್ ದಯಾಳ್ ಆಸ್ಪತ್ರೆ, ಮದನ್ ಮೋಹನ್ ಮಾಳವೀಯ ಆಸ್ಪತ್ರೆ ಜೊತೆಗೆ SPCCCH ಸಂಪರ್ಕ ಹೊಂದಲಾಗಿದೆ. ಇದಲ್ಲದೆ ಲೋಕ್ ನಾಯಕ್ ಜೈ ಪ್ರಕಾಶ್ ನಾರಾಯನ್ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಡಾ SPCCHಗೆ ರೋಗಿಗಳನ್ನು ಕಳಿಸಬಹುದಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories