ವಿಶಾಖಪಟ್ಟಣದಲ್ಲಿ, ನೌಕಾಪಡೆಯ ಸಿಬ್ಬಂದಿಯೊಬ್ಬ ಹಣಕಾಸಿನ ವಿವಾದ ಮತ್ತು ಬ್ಲ್ಯಾಕ್‌ಮೇಲ್ ಬೆದರಿಕೆಯಿಂದಾಗಿ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಮುಚ್ಚಿಹಾಕಲು ಶವವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ, ನಂತರ ಪೊಲೀಸರಿಗೆ ಶರಣಾಗಿದ್ದಾನೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನೌಕಾಪಡೆಯ ಸಿಬ್ಬಂದಿಯೊಬ್ಬ ತನ್ನ ಪ್ರೇಯಸಿಯನ್ನು ಹತ್ಯೆಗೈದು, ಶವವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿಟ್ಟಿರುವ ಅತ್ಯಂತ ಭೀಕರ ಘಟನೆ ನಡೆದಿದೆ. ಆರೋಪಿ ಚಿಂತಡ ರವೀಂದ್ರ (35) ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ವ್ಯಕ್ತಿ. 2021 ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಈತನಿಗೆ ಮೋನಿಕಾ (29) ಎಂಬಾಕೆಯ ಪರಿಚಯವಾಗಿತ್ತು. ಇಬ್ಬರ ನಡುವೆ ಪ್ರೇಮ ಸಂಬಂಧವಿದ್ದು, ಆಗಾಗ ಭೇಟಿಯಾಗುತ್ತಿದ್ದರು.
26
ಹತ್ಯೆಗೆ ಕಾರಣವಾದ ಹಣ ಮತ್ತು ಬ್ಲ್ಯಾಕ್‌ಮೇಲ್
ತನಿಖೆಯ ಪ್ರಕಾರ, ಮೋನಿಕಾ, ರವೀಂದ್ರನಿಂದ ಸುಮಾರು 3.5 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ ಆ ಹಣವನ್ನು ಮರಳಿ ನೀಡಲು ಅವರು ನಿರಾಕರಿಸುತ್ತಿದ್ದರು. ಅಷ್ಟೇ ಅಲ್ಲದೆ, ತಮ್ಮಿಬ್ಬರ ಅಕ್ರಮ ಸಂಬಂಧದ ವಿಚಾರವನ್ನು ರವೀಂದ್ರನ ಪತ್ನಿಗೆ ತಿಳಿಸುವುದಾಗಿ ಮೋನಿಕಾ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
36
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ
ರವೀಂದ್ರನ ಪತ್ನಿ ಹೆರಿಗೆಯ ನಂತರ ತವರು ಮನೆಗೆ ಹೋಗಿದ್ದರಿಂದ ಮನೆ ಖಾಲಿ ಇತ್ತು. ಈ ಸಮಯವನ್ನು ಬಳಸಿಕೊಂಡ ರವೀಂದ್ರ ಮೋನಿಕಾಳನ್ನು ಮನೆಗೆ ಕರೆಸಿಕೊಂಡಿದ್ದ. ಅಲ್ಲಿ ಇಬ್ಬರ ನಡುವೆ ಹಣದ ವಿಚಾರವಾಗಿ ಜಗಳ ಶುರುವಾಗಿದ್ದು, ಆಕ್ರೋಶಗೊಂಡ ರವೀಂದ್ರ ಮೋನಿಕಾಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕೊಲೆಯನ್ನು ಮುಚ್ಚಿಡಲು ರವೀಂದ್ರ ಮೋನಿಕಾಳ ಶವವನ್ನು ಹಲವು ತುಂಡುಗಳಾಗಿ ಕತ್ತರಿಸಿದ್ದ. ಕೆಲವು ಭಾಗಗಳನ್ನು ಸುಟ್ಟು ಹಾಕಿ ಅಡವಿವರಂ ಎಂಬಲ್ಲಿ ಎಸೆದಿದ್ದರೆ, ಇನ್ನೂ ಕೆಲವು ಭಾಗಗಳನ್ನು ಫ್ರಿಡ್ಜ್‌ನಲ್ಲಿ ಅಡಗಿಸಿಟ್ಟಿದ್ದ. ಉಳಿದ ಭಾಗಗಳನ್ನು ಚೀಲದಲ್ಲಿ ಕಟ್ಟಿ ಮಂಚದ ಕೆಳಗೆ ಇಟ್ಟಿದ್ದ.
56
ಗೆಳೆಯನ ಸಲಹೆ ಮತ್ತು ಶರಣಾಗತಿ
ಈ ಘೋರ ಕೃತ್ಯ ಎಸಗಿದ ನಂತರ ರವೀಂದ್ರ ತನ್ನ ಗೆಳೆಯನಿಗೆ ಫೋನ್ ಮಾಡಿ ಸಲಹೆ ಕೇಳಿದ್ದಾನೆ. ಸತ್ಯವನ್ನು ಒಪ್ಪಿಕೊಳ್ಳುವಂತೆ ಗೆಳೆಯ ಬುದ್ಧಿ ಹೇಳಿದ ನಂತರ, ರವೀಂದ್ರ ಗಾಜುವಾಕ ಪೊಲೀಸ್ ಠಾಣೆಗೆ ತೆರಳಿ ತನ್ನ ಪಾಪವನ್ನು ಒಪ್ಪಿಕೊಂಡಿದ್ದಾನೆ.
66
ಕೊಲೆ ಪ್ರಕರಣ ದಾಖಲಿಸಿದ ಪೊಲೀಸ್
ರವೀಂದ್ರ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೋನಿಕಾಳ ಶವದ ನಾಪತ್ತೆಯಾಗಿರುವ ಭಾಗಗಳನ್ನು ಹುಡುಕಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. : ಸದ್ಯ ರವೀಂದ್ರನನ್ನು ಬಂಧಿಸಲಾಗಿದ್ದು, ಆತ ಈ ಕೊಲೆಯನ್ನು ಪೂರ್ವನಿಯೋಜಿತವಾಗಿ ಮಾಡಿದ್ದನೇ ಅಥವಾ ಆ ಕ್ಷಣದ ಆವೇಶದಲ್ಲಿ ಮಾಡಿದ್ದನೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ