ರೈಲೊಂದರಲ್ಲಿ ಕಂಕುಳಲ್ಲಿ ಮಗುವನ್ನು ಕಟ್ಟಿಕೊಂಡು ಮಹಿಳೆಯೊಬ್ಬರು 'ಡಿಡಿಎಲ್‌ಜೆ' ಚಿತ್ರದ ಜನಪ್ರಿಯ ಹಾಡನ್ನು ಹಾಡಿದ್ದಾರೆ. ಚಿಪ್ಪು ಕಲ್ಲುಗಳನ್ನು ವಾದ್ಯದಂತೆ ಬಳಸಿ ಸುಶ್ರಾವ್ಯವಾಗಿ ಹಾಡಿರುವ ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇವರ ಪ್ರತಿಭೆಗೆ ಮನಸೋತಿದ್ದಾರೆ.
ಭಾರತದ ರೈಲುಗಳಲ್ಲಿ ಪ್ರಯಾಣ ಹಲವು ಅನುಭವಗಳನ್ನು ನೀಡುತ್ತದೆ. ಇತರೆ ಪ್ರಯಾಣಗಳಿಗಿಂತ ರೈಲು ಪ್ರಯಾಣ ತುಂಬಾ ವಿಶೇಷತೆಯನ್ನು ಹೊಂದಿದೆ. ನಿಮಗೆ ಪ್ರಯಾಣದ ಮಧ್ಯೆ ಆಹಾರ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟಗಾರರು ಕಾಣಿಸುತ್ತಾರೆ. ಅದೇ ರೀತಿ ಭಿಕ್ಷುಕರನ್ನು ಕಾಣಬಹುದು. ಕೆಲವರು ನೇರವಾಗಿ ಹಣ ಕೇಳಿದ್ರೆ, ಒಂದಿಷ್ಟು ಜನರು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಿ ಹಣ ಕೇಳುತ್ತಾರೆ.
25
ಸುಮಧುರವಾಗಿ ಹಾಡು ಹೇಳುವ ಜನರು
ಮುಂಬೈ ಸೇರಿದಂತೆ ಉತ್ತರ ಭಾರತದ ರೈಲು ಮಾರ್ಗದಲ್ಲಿ ಎರಡು ಕಲ್ಲಿನ ಚಿಪ್ಪುಗಳನ್ನೇ ವಾದ್ಯಗಳನ್ನಾಗಿ ಮಾಡಿಕೊಂಡು ಸುಮಧುರವಾಗಿ ಹಾಡು ಹೇಳುವವರನ್ನು ಕಾಣಬಹುದು. ಯಾವುದೇ ಕಲಿಕೆಯಿಲ್ಲದೇ ಹಾಡು ಹೇಳುವ ಈ ಜನರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಇದೇ ರೀತಿ ಹಾಡು ಹೇಳುವ ಮಹಿಳೆ ವಿಡಿಯೋ ಮುನ್ನಲೆಗೆ ಬಂದಿದೆ.
35
ಮಹಿಳೆ ವಿಡಿಯೋ
ಕಂಕುಳಲ್ಲಿ ಮಗುವನ್ನು ಕಟ್ಟಿಕೊಂಡು, ಚಿಪ್ಪು ಕಲ್ಲುಗಳನ್ನು ತಟ್ಟುತ್ತಾ ಮಹಿಳೆ, ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ 'ಡಿಡಿಎಲ್‌ಜೆ' ಸಿನಿಮಾದ "ತುಜೇ ದೇಕಾ ಸನಮ್" ಹಾಡು ಹೇಳಿದ್ದಾರೆ. ಈ ಹಾಡನ್ನು ಸಿನಿಮಾದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಹಾಡಿದ್ದಾರೆ. ಮಹಿಳೆಯ ಹಾಡು ಕೇಳಿದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Saffron Chargers (@SaffronChargers) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ ಈವರೆಗೆ 7 ಸಾವಿರಕ್ಕೂ ಅಧಿಕ ವ್ಯೂವ್, ನೂರಾರು ಲೈಕ್ಸ್ ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು, ನಿಜವಾದ ಕಲಾವಿದರು. ಇಂತಹವರಿಗೆ ಸರ್ಕಾರದ ನೆರವು ಸಿಗಬೇಕು. ದೇಶದ ಸಂಗೀತಗಾರರು ಇಂತಹ ಕಲಾವಿದರಿಗೆ ಅವಕಾಶಗಳನ್ನು ನೀಡಬೇಕು. ಕಂಕುಳಲ್ಲಿ ಮಗು ಜೊತೆ ಮಾಡ್ತಿರೋದನ್ನು ನೋಡಿದ್ರೆ ಕರುಳ್ ಚುರ್ ಅಂತಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಈ ಮಹಿಳೆ ರೈಲ್ವೆಯ ಯಾವ ಮಾರ್ಗದಲ್ಲಿ ಸಿಗುತ್ತಾರೆ? ಮಹಿಳೆ ಹೆಸರೇನು? ಎಲ್ಲಿಯವರು ಎಂದು ತಿಳಿಸಿದಿದ್ರೆ ನಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ವೇದಿಕೆಯಿಲ್ಲ, ಸ್ಪಾಟ್‌ಲೈಟ್ ಇಲ್ಲ, ಸುಂದರವಾದ ಧ್ವನಿ ಮತ್ತು ನಿಜ ಜೀವನ. ಪ್ರತಿಭೆ ಎಲ್ಲೆಡೆ ಇರುತ್ತದೆ. ಪ್ರಯಾಣದ ಸಂದರ್ಭದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಇಂತಹ ಕಲಾವಿದರ ಹಾಡುಗಳನ್ನು ಕೇಳಿಸಿಕೊಳ್ಳಬೇಕು ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಆದ್ರೆ ಮಹಿಳೆ ಎಲ್ಲಿಯವರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ