ಸಿಎಂ ಆಗಮನಕ್ಕೆ ಕೆಲ ನಿಮಿಷ ಮೊದಲು ಹೆಲಿಪ್ಯಾಡ್‌ಗೆ ನುಗ್ಗಿ ಭದ್ರತೆಗಿದ್ದ ಪೊಲೀಸರನ್ನೇ ಓಡಿಸಿದ ಹೋರಿ

Published : Mar 15, 2026, 06:07 AM IST

ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಬೇಗುಸರಾಯ್ ಭೇಟಿಯ ವೇಳೆ ಭದ್ರತಾ ಲೋಪ ಉಂಟಾಗಿದೆ. ಸಿಎಂ ಹೆಲಿಕಾಪ್ಟರ್ ಇಳಿಯುವ ಕೆಲವೇ ಕ್ಷಣಗಳ ಮೊದಲು, ಹೆಲಿಪ್ಯಾಡ್‌ಗೆ ಗೂಳಿಯೊಂದು ನುಗ್ಗಿ ಪೊಲೀಸರನ್ನು ಅಟ್ಟಾಡಿಸಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. 

PREV
16
ಸಿಎಂ ನಿತೀಶ್ ಕುಮಾರ ಕಾರ್ಯಕ್ರಮದಲ್ಲಿ ಭದ್ರತಾ ಲೋಪ

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತಮ್ಮ ಸಮೃದ್ಧಿ ಯಾತ್ರೆಯ ಭಾಗವಾಗಿ ಬೇಗುಸರಾಯ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಮುಖ ಭದ್ರತಾ ಲೋಪ ಸಂಭವಿಸಿದೆ. ಇಲ್ಲಿ ಮುಖ್ಯಮಂತ್ರಿಯವರ ಹೆಲಿಕಾಪ್ಟರ್ ಇಳಿಯುವುದಕ್ಕು ಕೆಲ ಕ್ಷಣ ಮೊದಲು ಹೆಲಿಪ್ಯಾಡ್‌ಗೆ ಗೂಳಿಯೊಂದು ನುಗ್ಗಿ ಪೊಲೀಸರನ್ನೇ ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ.

26
ನಿತೀಶ್‌ಕುಮಾರ್ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಮೊದಲು ಅವಾಂತರ

ಹೌದು ಸಿಎಂ ಬೇಗುಸರಾಯ್‌ಗೆ ಆಗಮಿಸುವುದಕ್ಕೆ ಇನ್ನೇನು ಕೆಲ ನಿಮಿಷಗಳಷ್ಟೇ ಬಾಕಿ ಇದ್ದಾಗ ಗೂಳಿಯೊಂದು ಅವರು ಇಳಿಯಬೇಕಿದ್ದ ಹೆಲಿಪ್ಯಾಡ್‌ಗೆ ನುಗ್ಗಿದ್ದು, ಅಲ್ಲಿ ಭದ್ರತೆಗಿದ್ದ ಪೊಲೀಸರನ್ನೇ ಬೆನ್ನಟ್ಟಿ ಓಡಿಸಿದೆ. ಗೂಳಿಗೆ ಬೆದರಿ ಜೀವ ಉಳಿಸಿಕೊಳ್ಳಲು ಪೊಲೀಸರು ಓಡುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.

36
ಹೆಲಿಪ್ಯಾಡ್‌ಗೆ ನುಗ್ಗಿದ ಗೂಳಿ

ಹೋರಿ ಸ್ಥಸ್ಥಳದಲ್ಲಿದ್ದ ಹಲವಾರು ಪೊಲೀಸರನ್ನು ಬೆನ್ನಟ್ಟಿದ್ದರಿಂದ ಪೊಲೀಸ್ ಅಧಿಕಾರಿಯೊಬ್ಬರು ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಅಗ್ನಿಶಾಮಕ ದಳದ ವಾಹನವನ್ನು ಹತ್ತಿದರು. ಪರಿಸ್ಥಿತಿ ಸ್ವಲ್ಪ ಸಮಯದವರೆಗೆ ಆತಂಕದಿಂದ ಕೂಡಿತ್ತು. ಅಂತಿಮವಾಗಿ ಸಿಎಂ ನಿತೀಶ್ ಕುಮಾರ್ ಬರುವುದಕ್ಕೂ ಮೊದಲೇ ಹೋರಿಯನ್ನು ಹೆಲಿಪ್ಯಾಡ್‌ನಿಂದ ದೂರ ಓಡಿಸಲಾಯ್ತು.

46
ಸಮೃದ್ಧಿ ಯಾತ್ರೆಗೆ ತೆರಳಿದ ಸಿಎಂ ನಿತೀಶ್ ಕುಮಾರ್

ನಂತರ ಈ ಹೆಲಿಪ್ಯಾಡ್‌ಗೆ ಆಗಮಿಸಿ ಸಮೃದ್ಧಿ ಯಾತ್ರೆಗೆ ತೆರಳಿದ ಸಿಎಂ ನಿತೀಶ್ ಕುಮಾರ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಸರ್ಕಾರ ಬಿಹಾರದ ಜನರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ ಮತ್ತು ಕೇಂದ್ರ ಸರ್ಕಾರವೂ ಬೆಂಬಲವನ್ನು ನೀಡುತ್ತಿದೆ ಎಂದು ಹೇಳಿದರು

56
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ.

2005 ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಚೆನ್ನಾಗಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಹಿಂದಿನ ಅವಧಿಗೆ ಹೋಲಿಸಿದರೆ ಭಿನ್ನವಾಗಿದೆ ಎಂದು ಅವರು ಹೇಳಿದರು.

66
ಸಭೆಯಿಂದ ಎದ್ದು ಹೋದ ಮಹಿಳೆರ ನಡೆಗೆ ಸಿಎಂ ಅಸಮಾಧಾನ

ತಾವು ಭಾಷಣ ಮಾಡುವಾಗ, ಕೆಲವು ಮಹಿಳೆಯರು ಸಭೆಯಿಂದ ಹೊರನಡೆಯುವುದನ್ನು ಗಮನಿಸಿದ ಮುಖ್ಯಮಂತ್ರಿಗಳು, ಅವರನ್ನು ಅಲ್ಲಿಯೇ ಇರುವಂತೆ ಹೇಳಿದರು. ನೀವು ಎಲ್ಲಿಗೆ ಹೋಗುತ್ತಿದ್ದೀರಿ? ಜನರು ಹೋಗುತ್ತಲೇ ಇದ್ದರೆ, ನಾವು ಮಾತನಾಡುವುದನ್ನು ನಿಲ್ಲಿಸಬೇಕೇ? ದಯವಿಟ್ಟು ಕುಳಿತು ಶಾಂತವಾಗಿ ಆಲಿಸಿ ಎಂದು ಸಿಎಂ ಮನವಿ ಮಾಡಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories