ಸಿಎಂ ಆಗೋಕು ಮುನ್ನವೇ ವಿಸಿಕೆ ಡಿಮಾಂಡ್‌ ಕೇಳಿ ಕಂಗಾಲಾದ ದಳಪತಿ ವಿಜಯ್‌, ಮೈತ್ರಿ ಉಳಿಯುತ್ತಾ?

Published : May 08, 2026, 09:12 PM IST

ನಟ ವಿಜಯ್ ಅವರ ಟಿವಿಕೆ ಪಕ್ಷವು ಮೈತ್ರಿಕೂಟದ ವಿಸಿಕೆ ಪಕ್ಷದಿಂದ ಕಠಿಣ ಬೇಡಿಕೆಗಳನ್ನು ಎದುರಿಸುತ್ತಿದೆ. ಉಪಮುಖ್ಯಮಂತ್ರಿ ಹುದ್ದೆ, ಶಾಸಕ ಮತ್ತು ಸಂಸದ ಸ್ಥಾನಗಳು ಸೇರಿದಂತೆ ವಿಸಿಕೆಯ ಬೇಡಿಕೆಗಳು ವಿಜಯ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ, ಇದು ಮೈತ್ರಿಯ ಭವಿಷ್ಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

PREV
15
ಬಿಸಿನೆಸ್ ಮೂಡ್‌ಗೆ ಬಂದ ವಿಸಿಕೆ, ವಿಜಿ ಕಂಗಾಲು

ತಮಿಳುನಾಡು ರಾಜಕೀಯದ ಹೊಸ ಸೆನ್ಸೇಷನ್ ವಿಜಯ್ ಅವರ ಟಿವಿಕೆ (TVK) ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಮೈತ್ರಿ ಪಕ್ಷಗಳ 'ಡಿಮಾಂಡ್' ಲಿಸ್ಟ್ ನೋಡಿ ಕಂಗಾಲಾಗಿದೆ. ನೆನ್ನೆವರೆಗೂ 'ಬ್ರೋ' ಅಂದಿದ್ದ ಮಿತ್ರಪಕ್ಷ ವಿಸಿಕೆ (VCK), ಈಗ ಪಕ್ಕಾ 'ಬಿಸಿನೆಸ್' ಮೂಡ್‌ಗೆ ಬಂದಿದೆ. ವಿಸಿಕೆ ಇಟ್ಟಿರುವ ನಾಲ್ಕು ಬೇಡಿಕೆ ನೋಡಿ ಸ್ವತಃ ಕಂಗಾಲಾಗಿದ್ದಾರೆ. ಈ ಮೈತ್ರಿ ಐದು ವರ್ಷಗಳ ಕಾಲ ಉಳಿಯುತ್ತಾ ಅನ್ನೋದರ ಬಗ್ಗೆಯೇ ಸೋಷಿಯಲ್ ಮೀಡಿಯಾದಲ್ಲಿ ಡಿಬೇಟ್ ಶುರುವಾಗಿದೆ.

25
ಡೆಪ್ಯುಟಿ ಸಿಎಂ ಪೋಸ್ಟ್ ಪಕ್ಕಾ ಬೇಕು

ವಿಜಯ್ ಸಿಎಂ ಆಗೋದು ಓಕೆ, ಆದ್ರೆ ನಮಗೆ ಪವರ್‌ನಲ್ಲಿ ಶೇರ್ ಬೇಕು ಅನ್ನೋದು ವಿಸಿಕೆ ವಾದ. ಒಂದು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನದ ಜೊತೆಗೆ 'ಡೆಪ್ಯುಟಿ ಸಿಎಂ' ಪಟ್ಟವನ್ನೂ ವಿಸಿಕೆ ಕೇಳುತ್ತಿದೆ. ಅಂದ್ರೆ ಪವರ್ ಇಬ್ಬರ ನಡುವೆ ಡಿವೈಡ್ ಆಗಬೇಕು ಅನ್ನೋದು ಪಕ್ಕಾ ಪ್ಲಾನ್.

35
ವಿಜಯ್ ತೆರವು ಮಾಡಿದ ಸೀಟ್ ಮೇಲೆ ಕಣ್ಣು

ವಿಜಯ್ ಎರಡು ಕಡೆ ಗೆದ್ದಿರೋದ್ರಿಂದ ಒಂದು ಸೀಟನ್ನು ಬಿಟ್ಟುಕೊಡಲೇಬೇಕು. ಆ ಖಾಲಿಯಾಗುವ ಎಂಎಲ್‌ಎ ಸೀಟ್ ನಮಗೆ ಬೇಕು ಅಂತ ವಿಸಿಕೆ ಪಟ್ಟು ಹಿಡಿದಿದೆ. ಅಂದ್ರೆ ವಿಜಯ್ ಕ್ಷೇತ್ರದಲ್ಲಿ ವಿಸಿಕೆ ಬಾವುಟ ಹಾರಿಸೋದು ಇವರ ಐಡಿಯಾ.

45
ತಿರುಮಾವಳವನ್ ಬದಲು ಮತ್ತೊಬ್ಬ ಸಂಸದ

ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಕ್ಯಾಬಿನೆಟ್ ಸೇರೋದು ಪಕ್ಕಾ ಆದ್ರೆ, ಅವರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತೆ. ಆ ಎಂಪಿ ಸೀಟನ್ನೂ ನಮಗೇ ಕೊಡಬೇಕು ಅನ್ನೋದು ವಿಸಿಕೆ ಡಿಮಾಂಡ್. ಅಂದ್ರೆ ವಿಧಾನಸಭೆ ಇರಲಿ, ಲೋಕಸಭೆಯಲ್ಲೂ ಪವರ್ ನಮಗೇ ಇರಲಿ ಅನ್ನೋ ಲಾಜಿಕ್ ಇಲ್ಲಿದೆ.

55
ಎಸ್‌ಸಿ ಕಲ್ಯಾಣಕ್ಕಾಗಿ ಹೊಸ ಕಾನೂನು

ಇದು ಕೇವಲ ಸೀಟ್ ಪಾಲಿಟಿಕ್ಸ್ ಅಲ್ಲ, ಸಿದ್ಧಾಂತವೂ ಹೌದು. ಎಸ್‌ಸಿ ಸಮುದಾಯದ ಏಳಿಗೆಗಾಗಿ ಒಂದು ವಿಶೇಷ ಶಾಸಕಾಂಗ ಕಾಯ್ದೆಯನ್ನು ತರಲೇಬೇಕು ಎಂಬ ಕಂಡೀಷನ್ ಹಾಕಿದೆ. ರಾಜಕಾರಣದಲ್ಲಿ ಯಾರೂ ಫ್ರೀಯಾಗಿ ಬೆಂಬಲ ಕೊಡಲ್ಲ. ಪ್ರತಿಯೊಂದು ವೋಟ್‌ಗೂ ಒಂದು ಪ್ರೈಸ್ ಟ್ಯಾಗ್ ಇದೆ. ವಿಜಯ್ ಈಗ ಕೇವಲ ಆಕ್ಟರ್ ಅಲ್ಲ, ಒಬ್ಬ ಪಕ್ಕಾ ಡೀಲ್ ಮೇಕರ್ ಆಗಬೇಕಾದ ಅನಿವಾರ್ಯತೆ ಇದೆ. ಮೈತ್ರಿ ಗಾಡಿ ಸ್ಮೂತ್ ಆಗಿ ಸಾಗುತ್ತಾ ಅಥವಾ ಸ್ಟಾರ್ಟಿಂಗ್‌ನಲ್ಲೇ ಬ್ರೇಕ್ ಬೀಳುತ್ತಾ ಅನ್ನೋದೇ ಮುಂದಿನ ಪ್ರಶ್ನೆಯಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories