ಬಂಗಾಳ, ಕೇರಳ ಸೇರಿದಂತೆ 4 ರಾಜ್ಯಗಳಿಗೆ ಕೇಂದ್ರದಿಂದ ಖಡಕ್ ವಾರ್ನಿಂಗ್!

First Published Jan 7, 2021, 7:55 PM IST

ಕೇಂದ್ರ ಸರ್ಕಾರ ನಾಲ್ಕು ರಾಜ್ಯಗಳಿಗೆ ಖಡಕ್ ವಾರ್ನಿಂಗ್ ನೀಡಿದೆ. ಪಶ್ಚಿಮ ಬಂಗಾಳ, ಕೇರಳ ಸೇರಿದಂತ ನಾಲ್ಕು ರಾಜ್ಯಗಳು ತಕ್ಷಣದಿಂದಲೇ ಸೂಚನೆ ಪಾಲಿಸುವಂತೆ ಹೇಳಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರ ನೀಡಿದ ವಾರ್ನಿಂಗ್ ಏನು? ಇಲ್ಲಿದೆ.

BJP failed in south staಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ ಹಾಗೂ ಚತ್ತೀಸಘಡ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಇಷ್ಟೇ ಅಲ್ಲ ಎಲ್ಲಾ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುಂತೆ ಕೋರಿದೆ.tes
undefined
ಕೇಂದ್ರ ಸರ್ಕಾರ ನಾಲ್ಕು ರಾಜ್ಯಗಳಿಗೆ ಎಚ್ಚರಿಕೆ ನೀಡಲು ಪ್ರಮುಖ ಕಾರಣ ಕೊರೋನಾ ವೈರಸ್. ಈ ನಾಲ್ಕು ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳನು ಕಡಿಮೆಯಾಗಿಲ್ಲ.
undefined
ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ ಹಾಗೂ ಚತ್ತೀಸಘಡದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಕೊರೋನಾ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲು ಕೇಂದ್ರ ಹೇಳಿದೆ.
undefined
ಈ ನಾಲ್ಕು ರಾಜ್ಯಗಳಲ್ಲಿ ಒಟ್ಟು ಶೇಕಡಾ 59 ರಷ್ಟು ಸಕ್ರೀಯ ಕೊರೋನಾ ಪ್ರಕರಣಗಳಿವೆ. ಇದು ಅಪಾಯಕಾರಿ, ಇಷ್ಟೇ ಅಲ್ಲ ಹತ್ತಿರದ ರಾಜ್ಯಗಳಿಗೂ ಹರಡುವಿಕೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
undefined
ನಾಲ್ಕು ರಾಜ್ಯಗಳಲ್ಲಿ ಕೊರೋನಾ ಪರೀಕ್ಷೆ ಸಂಖ್ಯೆ ಕೂಡ ಕಡಿಮೆಯಾದೆ. ತಕ್ಷಣವೇ ರಾಜ್ಯ ಸರ್ಕಾರಗಳು ಟೆಸ್ಟ್, ಟ್ರಾಕ್ ಹಾಗೂ ಟ್ರೀಟ್ ಪಾಲಿಸಿ ಅನುಸರಿಸಬೇಕು ಎಂದಿದೆ.
undefined
ಕೊರೋನಾ ಇದೀಗ ಸಾಮಾನ್ಯವಾಗಿದೆ ಅನ್ನೋ ಕಾರಣಕ್ಕ ಮಾಸ್ಕ್ ಹಾಕದಿರುವುದು, ಸಾಮಾಜಿಕ ಅಂತ ಕಾಯ್ದೊಳ್ಳದಿರುವ ಪ್ರಕರಣಗಳು ಹೆಚ್ಚುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಕಡ್ಡಾಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
undefined
ಮಹಾರಾಷ್ಟ್ರ, ಕೇರಳ ಹಾಗೂ ಚತ್ತೀಸಘಟದಲ್ಲಿ ದಿಢೀರ್ ಕೊರೋನಾ ಪ್ರಕರಣಗಳು ಹೆಚ್ಚಾಗಿದೆ. ಇದಕ್ಕೆ ಅಜಾಗರೂಕತೆ ಕಾರಣ ಎಂದು ತಜ್ಞ ವೈದ್ಯರ ತಂಡ ಹೇಳಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದಿದೆ
undefined
ಮಹಾರಾಷ್ಟ್ರದಲ್ಲಿ ಸದ್ಯ 52,000 ಸಕ್ರೀಯ ಕೊರೋನಾ ಪ್ರಕರಣಗಳು ಇವೆ. ಇನ್ನು ಚತ್ತೀಸಘಡ ಹಾಗೂ ಪಶ್ಚಿಮ ಬಂಗಾಳದಲ್ಲಿ 9,000, ಕೇರಳದಲ್ಲಿ 5,000 ಸಕ್ರೀಯ ಪ್ರಕರಣಗಳು ಇವೆ.
undefined
click me!