ಕೊರೋನಾ ಲಸಿಕೆ ವಿತರಣೆಯ ಮೊದಲ ಹಂತದಲ್ಲಿ ಕೋವಿಡ್ ಯೋಧರು ಅಂದರೆ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಸ್ವಚ್ಛತಾ ಸಿಬ್ಬಂದಿ ಮೊದಲಾದವರಿಗೆ ಆದ್ಯತೆ ನೀಡಲಾಗುವುದು. ಹೀಗೆ 3 ಕೋಟಿ ಜನರು ಯಾವುದೇ ಪೂರ್ವ ನೋಂದಣಿ ಇಲ್ಲದೆ ಲಸಿಕೆ ಪಡೆಯಲು ಅರ್ಹರು. ನಂತರದಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷ ಒಳಗಿನವರು ಮತ್ತು ಈ ವಯಸ್ಸಿಗೆ ಮೇಲ್ಪಟ್ಟಸಾಮಾನ್ಯ ವಯಸ್ಕರನ್ನು ಆದ್ಯತಾ ವಲಯವೆಂದು ಪರಿಗಣಿಸಿ ಲಸಿಕೆ ನೀಡಲಾಗುವುದು. ಇವರೆಲ್ಲಾ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆಯಲು ಕೆಳಕಂಡ ಮಾರ್ಗ ಅನುಸರಿಸಬೇಕಾಗುತ್ತದೆ.