ತಿರುಪತಿ-ತಿರುಮಲೆ ಮಾರ್ಗದಲ್ಲಿ ಪ್ರಸ್ತುತ 298 ಡೀಸೆಲ್ ಬಸ್‌ಗಳು ಮತ್ತು 64 ಎಲೆಕ್ಟ್ರಿಕ್ ಎಸಿ ಬಸ್‌ಗಳು ಸಂಚರಿಸುತ್ತಿವೆ. ಎಸಿ ಬಸ್‌ಗಳನ್ನು ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ಉಚಿತ ಪ್ರಯಾಣ ನೀಡಲಾಗುವುದು.
ದಿನನಿತ್ಯ 1160 ಬಾರಿ ಬಸ್‌ಗಳು ಸಂಚರಿಸುವ ಈ ಮಾರ್ಗದಲ್ಲಿ, ಸುಮಾರು 45,000 ಜನರು ಪ್ರಯಾಣಿಸುತ್ತಾರೆ. ಇದರಲ್ಲಿ 35% ಜನರು, ಅಂದರೆ 13,500 ಜನರು ಮಹಿಳೆಯರು. ಇವರಲ್ಲಿ ಹೆಚ್ಚಿನವರು ಆಂಧ್ರಪ್ರದೇಶದವರು.