ಈ ದೇಗುಲದಲ್ಲಿ ದಿನಕ್ಕೆ 3 ಬಾರಿ ಬದಲಾಗುತ್ತೆ ಶಿವಲಿಂಗದ ಬಣ್ಣ!

Published : Mar 11, 2021, 05:31 PM IST

ಮಧ್ಯಪ್ರದೇಶ ಗಡಿಯಲ್ಲಿ ಚಂಬಲ್ ನದಿ ಬಳಿಯ ಬೀಹಡ್‌ನ ಪ್ರಾಚೀನ ಮಂದಿರ ಅಚಲೇಶ್ವರ ಮಂದಿರ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಈ ದೇಗುಲದ ಬಗ್ಗೆ ನಾನಾ ವದಂತಿಗಳೂ ಕೇಳಿ ಬಂದಿವೆ. ಅದರಲ್ಲೂ ಈ ಮಂದಿರದಲ್ಲಿ ಸ್ಥಾಪಿಸಲಾಗಿರುವ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ. ಅಲ್ಲದೇ ಇಲ್ಲಿ ಮದುವೆಯಾಗದ ಯುವಕ, ಯುವತಿ ಏನಾದರೂ ಬೇಡಿಕೊಂಡರೆ, ಅವರ ಬೇಡಿಕೆ ಶೀಘ್ರವಾಗಿ ಈಡೇರುತ್ತದೆ ಎಂಬ ನಂಬಿಕೆಯೂ ಇದೆ.

PREV
14
ಈ ದೇಗುಲದಲ್ಲಿ ದಿನಕ್ಕೆ 3 ಬಾರಿ ಬದಲಾಗುತ್ತೆ ಶಿವಲಿಂಗದ ಬಣ್ಣ!

ಈ ಬಣ್ಣದಲ್ಲಿ ಕಾಣುತ್ತದೆ ಶಿವಲಿಂಗ: ಧಾರ್ಮಿಕ ಮಾನ್ಯತೆಗಳನ್ನು ಹೊರತುಪಡಿಸಿ ಮತ್ತೊಂದು ಅಚ್ಚರಿಗೀಡು ಮಾಡುವ ವಿಚಾರವೆಂದರೆ ಇಲ್ಲಿನ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ ಎನ್ನುವುದು. ಬೆಳಗ್ಗೆ ಕೆಂಪು, ಮಧ್ಯಾಹ್ನ ಕೇಸರಿ ಹಾಗೂ ಸಂಜೆ ಕಂದು ಬಣ್ಣವಾಗಿ ಮಾರ್ಪಾಡಾಗುತ್ತದೆ.
 
24

ಭಯದಿಂದ ಭಕ್ತರ ಸಂಖ್ಯೆಯೂ ಕಡಿಮೆ: ಭಕ್ತರ ಅನ್ವಯ ಈ ಶಿವಮಂದಿರ ಸುಮಾರು ಒಂದು ಸಾವಿರ ವರ್ಷ ಹಳೆಯದ್ದು. ಇದನ್ನು ಸ್ಥಾಪಿಸಿದ್ದು ಯಾರು ಎಂಬ ಮಾಹಿತಿಯೂ ಯಾರಿಗೂ ಇಲ್ಲ. ಇನ್ನು ಬೀಹಡ್‌ನಲ್ಲಿ ಈ ಮಂದಿರವಿರುವುದರಿಂದ ಅನೇಕ ಮಂದಿ ಭಯದಿಂದ ಇಲ್ಲಿಗೆ ಬರುತ್ತಲೇ ಇರಲಿಲ್ಲ ಎನ್ನುವುದು ಹಿರಿಯರ ಮಾತಾಗಿದೆ. ಇಲ್ಲಿ ಕಾಡು ಪ್ರಾಣಿಗಳು ಓಡಾಡುತ್ತವೆ ಎಂಬುವುದೂ ಜನರ ಭಯಕ್ಕೆ ಮತ್ತೊಂದು ಕಾರಣವಾಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ, ಕಾಡು ಪ್ರಾಣಿಗಳ ಓಡಾಟವೂ ಕಡಿಮೆಯಾಗಿದ್ದು, ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.
 
34

ನಿಗೂಢವಾಗೇ ಉಳಿದ ರಹಸ್ಯ ವಿಚಾರಗಳು: ಮಂದಿರನ್ನು ಅಚಲೇಶ್ವರ ಮಂದಿರವೆನ್ನಲಾಗುತ್ತದೆ. ಇನ್ನು ಇಲ್ಲಿನ ಶಿವಲಿಂಗದ ಬಣ್ಣ ಬದಲಾಗುತ್ತಿರುವುದು ಹೇಗೆ? ಇದಕ್ಕೆ ಕಾರಣವೇನು? ಇದಕ್ಕೆ ಉತ್ತರ ಇವತ್ತಿಗೂ ಸಿಕ್ಕಿಲ್ಲ. ಇಲ್ಲಿ ವಿಜ್ಞಾನಿಗಳ ಅನೇಕ ತಂಡಗಳೂ ಭೇಟಿ ನೀಡಿ, ಅಧ್ಯಯನ ನಡೆಸಿವೆ. ಹೀಗಿದ್ದರೂ ಬಣ್ಣ ಬದಲಾವಣೆ ಹಿಂದಿನ ರಹಸ್ಯ ನಿಗೂಢವಾಗೇ ಉಳಿದಿದೆ.

44

ಹೀಗೂ ಒಂದು ನಂಬಿಕೆ ಇದೆ: ಇಲ್ಲಿ ಭಗವಾನ್ ಶಿವನ ಕೃಪೆಯಿಂದ ಇಲ್ಲಿಗೆ ಭೇಟಿ ನೀಡುವ ಯುವತಿಯರಿಗೆ ತಾವು ಬಯಸಿದ ಯುವಕ ಸಿಗುತ್ತಾನೆ ಎಂಬ ನಂಬಿಕೆ ಇದೆ. ಇನ್ನು ಯಾರ ಮದುವೆಯಾಗಿಲ್ಲವೋ, ಅವರು ಶ್ರದ್ಧೆಯಿಂದ ಶಿವಲಿಂಗದ ಪೂಜೆ ನೆರವೇರಿಸಿದರೆ ಅವರ ಮದುವೆಯಾಗುತ್ತದೆ ಎಂಬ ನಂಬಿಕೆಯೂ ಇದೆ. 

click me!

Recommended Stories