ಮಹಿಳಾ ದಿನ ಪ್ರಯುಕ್ತ ಮಹಿಳಾ ಉದ್ಯಮಿಗಳಿಂದ ಉತ್ಪನ್ನ ಖರೀದಿಸಿದ ಪ್ರಧಾನಿ ಮೋದಿ!

First Published Mar 8, 2021, 3:29 PM IST

ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಈ ವಿಶೇಷ ದಿನ, ಪ್ರಧಾನಿ ನರೇಂದ್ರ ಮೋದಿ ಭಾರತದ ಮಹಿಳಾ ಉದ್ಯಮಿಗಳು, ಮಹಿಳಾ ಸ್ವಸಹಾಯ ಗುಂಪುಗಳಿಗೆ ಪ್ರಚೋದನೆ ನೀಡುವ ಸಲುವಾಗಿ ಹಲವು ಉತ್ಪನ್ನಗಳನ್ನು ಖರೀದಿಸಿದ್ದಾರೆ. ಈ ಮೂಲಕ ಮೋದಿ, ಮಹಿಳೆಯರು ಹಾಗೂ ಆತ್ಮನಿರ್ಭರ್ ಭಾರತ್‌ಗೆ ಪ್ರಚೋದನೆ ನೀಡುವ ಪ್ರಯತ್ನ ಮಾಡಿದ್ದಾರೆ. ಇಂದು ಮೋದಿ ಮಹಿಳೆಯರಿಂದ ಖರೀದಿಸಿದ ಉತ್ಪನ್ನಗಳ ವಿವರ ಇಲ್ಲಿದೆ.

ಭಾರತದ ಆತ್ಮನಿರ್ಭರತೆಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಭಾರತದ ಮಹಿಳೆಯರು ಹಿಂದೆಂದೂ ಕಾಣದಂತ ಕೊಡುಗೆ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದು ಭಾರತದ ಮಹಿಳೆಯ ಉದ್ಯಮಶೀಲತೆ ಉತ್ತೇಜಿಸಲು ನಾವು ಬದ್ದರಾಗಬೇಕಿದೆ ಎಂದುು ಮೋದಿ ಹೇಳಿದ್ದಾರೆ.
undefined
ಮಹಿಳಾ ಉದ್ಯಮ, ಸೃಜನಶೀಲತೆ ಮತ್ತು ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಕೆಲವು ಉತ್ಪನ್ನಗಳನ್ನು ನಾನು ಖರೀದಿಸಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ತಮಿಳುನಾಡಿನ ತೋಡಾ ಬುಡಕಟ್ಟಿನ ಕುಶಲಕರ್ಮಿಗಳು ತಯಾರಿಸಿದ ಸೊಗಸಾದ ಕೈ ಕಸೂತಿ ಶಾಲ್ ಅದ್ಭುತವಾಗಿದೆ. ಈ ಶಾಲನ್ನು ನಾನು ಖರೀದಿಸಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
undefined
ಭಾರತದ ಬುಡಕಟ್ಟು ಸಮುದಾಯಗಳ ಕಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಎಲ್ಲಾ ಸಾಮರ್ಥ್ಯ ಪಡೆದಿದೆ. ಬೋಪಾಲ್ ಬುಡಕಟ್ಟು ಜನಾಂಗದ ಕರಕುಶಲ ಗೋಂಡ್ ಪೇಪರ್ ಪೇಂಟಿಂಗ್ ವರ್ಣಚಿತ್ರವನ್ನು ಇಂದು ಖರೀದಿಸಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
undefined
ಧೈರ್ಯ, ಸಹಾನುಭೂತಿ ಮತ್ತು ಸೃಜನಶೀಲತೆಗೆ ಮತ್ತೊಂದು ಹೆಸರೇ ನಾಗಾ ಸಂಸ್ಕ್ರೃತಿ. ಈ ನಾಗಾ ಸಂಸ್ಕೃತಿಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ನಾಗಾಲ್ಯಾಂಡ್‌ನಿಂದ ನಾಗಾ ಮಹಿಳೆಯರು ಕೈಯಿಂದ ತಯಾರಿಸಿದ ಸಾಂಪ್ರದಾಯಿಕ ಶಾಲು ಖರೀದಿಸಿದೆ ಎಂದು ಮೋದಿ ಹೇಳಿದ್ದಾರೆ
undefined
ಮಹಾತ್ಮ ಗಾಂಧಿ ಮತ್ತು ಭಾರತದ ಶ್ರೀಮಂತ ಇತಿಹಾಸದೊಂದಿಗೆ ಖಾದಿ ನಿಕಟ ಸಂಬಂಧ ಹೊಂದಿದೆ. ಮಹಿಳಾ ದಿನದಂದು ಖಾದಿ ಕಾಟನ್ ಮಧುಬನಿ ಪೇಂಟೆಡ್ ಸ್ಟೋಲ್ ಖರೀದಿಸಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ ಇದು ಉತ್ತಮ ಗುಣಮಟ್ಟದ ಉತ್ಪನ್ನವಾಗಿದೆ ಮತ್ತು ಇದು ನಮ್ಮ ನಾಗರಿಕರ ಸೃಜನಶೀಲತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದಿದ್ದಾರೆ.
undefined
ಪಶ್ಚಿಮ ಬಂಗಾಳದ ಬುಡಕಟ್ಟು ಸಮುದಾಯ ಕೈಯಿಂದ ಮಾಡಿದ ಸೆಣಬಿನ ಫೈಲ್ ಫೋಲ್ಡರ್ ಬಳಸುತ್ತೇನೆ. ಈ ಫೈಲ್ ಫೋಲ್ಡರ್ ಖರೀದಿಸಲು ಎಲ್ಲರಲ್ಲಿ ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
undefined
ಹೆಚ್ಚಾಗಿ ಗಮುಸಾ ಧರಿಸುವದನ್ನು ಇಷ್ಟಪಡುತ್ತೇನೆ. ಅತ್ಯಂತ ಆರಾಮದಾಯಕ ಹಾಗೂ ಹಿತ ನೀಡುತ್ತದೆ. ಈ ಗಮಸಾವನ್ನು ಕಾಕತಿಪಪುಂಗ್ ಅಭಿವೃದ್ಧಿ ಬ್ಲಾಕ್‌ನ ಸ್ವ-ಸಹಾಯ ಗುಂಪುಗಳ ಗಮುಸಾ ಖರೀಸಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
undefined
ಕೇರಳ ಮೂಲದ ಮಹಿಳೆಯ ನಿರ್ಮಿಸಿದ ಕ್ಲಾಸಿಕ್ ಪಾಮ್ ಕ್ರಾಫ್ಟ್ ನೆಲವಿಳಕ್ಕು ಸ್ವೀಕರಿಸಲು ನಾನು ಉತ್ಸುಕನಾಗಿದ್ದೇನೆ. ನಾರಿಯರು ಸ್ಛಳೀಯ ಕರಕುಶಲ ವಸ್ತುಗಳನ್ನು ಸಂರಕ್ಷಿಸಿ ಉದ್ಯಮವಾಗಿ ಬೆಳೆಸುತ್ತಿದ್ದಾರೆ. ನಾರಿ ಶಕ್ತಿ ಇದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
undefined
click me!