ಭಾರತದ ಅತ್ಯಂತ ಸುಂದರ ಐಎಎಸ್/ಐಪಿಎಸ್ ಅಧಿಕಾರಿಗಳು

First Published | Feb 14, 2024, 4:12 PM IST

ಬುದ್ಧಿವಂತರೆಲ್ಲರೂ ಸುಂದರವಾಗೇ ಕಾಣಿಸುತ್ತಾರೆ. ಅದು ಬೇರೆಯೇ. ಆದರೆ, ತುಂಬಾ ಸುಂದರಿಯರು ಬುದ್ಧಿವಂತರಾಗಿರುವುದಿಲ್ಲ ಎಂಬ ಮಾತಿದೆ. ಆ ಮಾತನ್ನು ಸುಳ್ಳು ಮಾಡಿದ್ದಾರೆ ಭಾರತದ ಈ ಅತ್ಯಂತ ಸುಂದರ ಐಎಎಸ್ ಐಪಿಎಸ್ ಅಧಿಕಾರಿಗಳು. 

ಪೋಲೀಸ್ ಹಾಗೂ ಸರ್ಕಾರಿ ಅಧಿಕಾರಿಗಳ ಕೆಲಸ ತುಂಬಾ ಕಷ್ಟಕರವಾದದ್ದು. ಅದರಲ್ಲೂ ಅವುಗಳನ್ನು ಪಡೆಯುವುದು ಮತ್ತೂ ಕಷ್ಟಕರವಾದದ್ದು. ಇದಕ್ಕಾಗಿ ಅತಿ ಕಷ್ಟದ ಯುಪಿಎಸ್ಇ ಪರೀಕ್ಷೆ ಪಾಸ್ ಮಾಡಿಕೊಳ್ಳಬೇಕು. ಮತ್ತೆ ಸಂದರ್ಶನದಲ್ಲೂ ಸೈ ಎನಿಸಿಕೊಳ್ಳಬೇಕು. ಇಷ್ಟೊಂದು ಸವಾಲಿನ ವೃತ್ತಿಗಳನ್ನು ಮಹಿಳೆಯರು ನಿಭಾಯಿಸುವುದು ಸಾಮಾನ್ಯದ ಮಾತೇನಲ್ಲ. ಈ ಮಹಿಳೆಯರನ್ನು ನೋಡಿ- ಮೃದುವಾಗಿ ಕಾಣುವ ಇವರೊಳಗೆ ಖಡಕ್ ಅಧಿಕಾರಿ ಇದ್ದಾರೆ. ಇವರು ಭಾರತದ ಅತ್ಯಂತ ಸುಂದರ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು. 

ಪರಿ ಬಿಷ್ಣೋಯ್

ಪರಿ ಬಿಷ್ಣೋಯ್
ಅಜ್ಮೀರ್ ನಿವಾಸಿ ಪರಿ ಬಿಷ್ಣೋಯ್ ಅವರು 2019 ರಲ್ಲಿ UPSC ಪರೀಕ್ಷೆಯಲ್ಲಿ ಯಶಸ್ವಿಯಾದರು. ಅವರು ಈ ಪರೀಕ್ಷೆಯಲ್ಲಿ 30ನೇ ರ್ಯಾಂಕ್ ಗಳಿಸಿದ್ದರು. ಪ್ರಸ್ತುತ, ಪರಿ ಬಿಷ್ಣೋಯ್ ಅವರು ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು, ಅವರು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ಅನಿಲ ಸಚಿವಾಲಯದಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದರು.

Tap to resize

ಸ್ಮಿತಾ ಸಬರ್ವಾಲ್

ಸ್ಮಿತಾ ಸಬರ್ವಾಲ್
ಸ್ಮಿತಾ ಸಬರ್ವಾಲ್ ಮೊದಲಿನಿಂದಲೂ ಅಧ್ಯಯನದಲ್ಲಿ ಚುರುಕು. ಬೋರ್ಡ್ ಪರೀಕ್ಷೆಯಲ್ಲೂ ಅಗ್ರಸ್ಥಾನ ಪಡೆದಿದ್ದರು. ಸ್ಮಿತಾ UPSC ಪರೀಕ್ಷೆಯಲ್ಲಿ ಉತ್ತೀರ್ಣರಲ್ಲದೆ IAS ಟಾಪರ್ ಆದರು, ಅವರು 2000 ರಲ್ಲಿ UPSC ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಗಳಿಸಿದ್ದರು.
 

ಸೃಷ್ಟಿ ಜಯಂತ್ ದೇಶಮುಖ್

ಸೃಷ್ಟಿ ಜಯಂತ್ ದೇಶಮುಖ್
ಸೃಷ್ಟಿ ಜಯಂತ್ ದೇಶಮುಖ್ 2018ರಲ್ಲಿ UPSC ಪಾಸಾಗಿ IAS ಅಧಿಕಾರಿ ಆದರು. 28 ಮಾರ್ಚ್ 1996ರಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನಿಸಿದ ಸೃಷ್ಟಿ ಜಯಂತ್ ದೇಶಮುಖ್, ಅವರ ತಂದೆ ಇಂಜಿನಿಯರ್ ಮತ್ತು ತಾಯಿ ಸುನೀತಾ ದೇಶಮುಖ್ ಶಿಕ್ಷಕಿ. ಸೃಷ್ಟಿ ಜಯಂತ್ ತಮ್ಮ ಬ್ಯಾಚ್‌ನ ಐಎಎಸ್ ಅಧಿಕಾರಿ ಡಾ. ನಾಗಾರ್ಜುನ ಅವರನ್ನು 2019 ರಲ್ಲಿ ವಿವಾಹವಾದರು.

ಐಶ್ವರ್ಯಾ ಶೆರಾನ್

ಐಶ್ವರ್ಯಾ ಶೆರಾನ್ 
ಐಶ್ವರ್ಯಾ ಶೆರಾನ್ ರಾಜಸ್ಥಾನದ ಚುರು ಜಿಲ್ಲೆಯ ನಿವಾಸಿ. ಮೊದಲ ಪ್ರಯತ್ನದಲ್ಲೇ UPSC ಪಾಸಾಗಿದ್ದರು. ಐಎಎಸ್ ಆಗುವ ಮೊದಲು ಮಾಡೆಲಿಂಗ್ ಮಾಡಿಕೊಂಡಿದ್ದ ಅವರು ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದಾರೆ. 

ತನು ಜೈನ್

ತನು ಜೈನ್
2014ರಲ್ಲಿ, ತನು ಜೈನ್ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು 2015ರಲ್ಲಿ ಅವರಿಗೆ ಸಶಸ್ತ್ರ ಪಡೆಗಳ ಪ್ರಧಾನ ಕಚೇರಿ ಸೇವೆಗಳನ್ನು ನೀಡಲಾಯಿತು. ದೆಹಲಿಯಲ್ಲಿ ಜನಿಸಿದ ಡಾ.ತನು ಬಿಡಿಎಸ್ ಓದಿದ್ದಾರೆ.

ನವಜೋತ್ ಸಿಮಿ

ನವಜೋತ್ ಸಿಮಿ
ನವಜೋತ್ ಸಿಮಿ ಪಂಜಾಬ್ ನಿವಾಸಿಯಾಗಿದ್ದು, ಐಪಿಎಸ್ ಆಗಿದ್ದಾರೆ. ಐಪಿಎಸ್ ಅಧಿಕಾರಿಯಾಗುವ ಮೊದಲು, ನವಜೋತ್ ಸಿಮಿ ವೈದ್ಯರಾಗಿದ್ದರು. ಆದರೆ ಬಾಲ್ಯದಿಂದಲೂ ಅವರು ಐಪಿಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ನವಜೋತ್ 2016ರಲ್ಲಿ ಪ್ರಥಮ ಬಾರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಮೀರಾ ಬೋರ್ವಾಂಕರ್

ಮೀರಾ ಬೋರ್ವಾಂಕರ್
ಮೀರಾ ಬೋರ್ವಾಂಕರ್ ಅವರು 1981ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಅವರು ಪಂಜಾಬಿ ಕುಟುಂಬಕ್ಕೆ ಸೇರಿದವರು.  'ಲೇಡಿ ಸೂಪರ್‌ಕಾಪ್' ಎಂದೇ ಹೆಸರಾಗಿರುವ ಆಕೆ, ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ಗ್ಯಾಂಗ್ ಸದಸ್ಯರನ್ನು ಬಂಧಿಸಿದ ನಂತರ ಬೆಳಕಿಗೆ ಬಂದರು. IPS ಮೀರಾ ಅವರು 1994ರಲ್ಲಿ ಲೈಂಗಿಕ ಹಗರಣವನ್ನು ಬಹಿರಂಗಪಡಿಸಿದರು. ಬಾಲಿವುಡ್ ಚಲನಚಿತ್ರ 'ಮರ್ದಾನಿ' ಅವರ ಜೀವನಕ್ಕೆ ಸಂಬಂಧಿಸಿದೆ.

ಟೀನಾ ದಾಬಿ

ಟೀನಾ ದಾಬಿ
ಭೋಪಾಲ್‌ನ ಟೀನಾ ದಾಬಿ 2015ರಲ್ಲಿ ಯುಪಿಎಸ್ಇ ಟಾಪರ್ ಆಗಿ ಹೊರಹೊಮ್ಮಿದರು. ಸಧ್ಯ ಆಕೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕಲೆಕ್ಟರ್ ಮತ್ತು ಮ್ಯಾಜಿಸ್ಟ್ರೇಟ್ ಆಗಿದ್ದಾರೆ.

ಮೆರಿನ್ ಜೋಸೆಫ್

ಮೆರಿನ್ ಜೋಸೆಫ್
ಮೆರಿನ್ ಜೋಸೆಫ್ ಭಾರತೀಯ ಪೊಲೀಸ್ ಸೇವೆ (I.P.S.) ಅಧಿಕಾರಿ. ಪ್ರಸ್ತುತ ಕೇರಳದ ಕೊಲ್ಲಂ ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಅಪಾಲ ಮಿಶ್ರಾ

ಅಪಾಲ ಮಿಶ್ರಾ
ಅಪಾಲ ಮಿಶ್ರಾ ಜಾರ್ಖಂಡ್‌ನ ಧನ್‌ಬಾದ್‌ನ ನಿವಾಸಿಯಾಗಿದ್ದು, ಅವರು 2021 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 9ನೇ ರ್ಯಾಂಕ್ ಪಡೆದಿದ್ದಾರೆ. ಪ್ರಸ್ತುತ ಅವರು ಘಾಜಿಯಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.

ರೇಣು ರಾಜ್

ರೇಣು ರಾಜ್
ಸರ್ಜನ್ ಆಗಿದ್ದ ಡಾ . ರೇಣು ಓದಿನ ಪಯಣ ಮುಂದುವರಿಸಲು ಯುಪಿಎಸ್‌ಸಿ ಪರೀಕ್ಷೆ ಬರೆದರು. ಮೊದಲ ಯತ್ನದಲ್ಲೇ AIR 2ನೇ ರ್ಯಾಂಕ್ ಪಡೆದರು. ಸಧ್ಯ ವಯನಾಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Latest Videos

click me!