ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಅಯೋಧ್ಯೆಯಲ್ಲಿ ಹೊಸಪರ್ವವೊಂದು ಶುರುವಾಗಿದೆ. ದೇಶದೆಲ್ಲೆಡೆಯ ಜನ ತಮ್ಮ ಪ್ರೀತಿಯ ರಾಮಲಲ್ಲಾಗೆ ವಿಶೇಷ ಉಡುಗೊರೆಗಳನ್ನು ಕಳುಹಿಸಿದ್ದಾರೆ.
Ambani family
ಅದೇ ರೀತಿ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್ ಅಂಬಾನಿ ನೀತಾ ಅಂಬಾನಿ ದಂಪತಿ ಕೂಡ ಅಯೋಧ್ಯೆಗೆ ಮರಳಿದ ರಾಮನಿಗೆ ಬಹುಕೋಟಿ ಮೊತ್ತದ ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿಯೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಹಾಗಿದ್ದಾರೆ ಈ ಶ್ರೀಮಂತ ದಂಪತಿ ನೀಡಿದ ಗಿಫ್ಟ್ ಏನು ಇಲ್ಲಿದೆ ಡಿಟೇಲ್..
Ambani family
ಇಂದು ಅಯೋಧ್ಯಾ ರಾಮ ಮಂದಿರ ಅದ್ದೂರಿ ಸಮಾರಂಭಕ್ಕೆ ಸಾಕ್ಷಿಯಾಯ್ತು. ನ ಭೂತೋ ನ ಭವಿಷ್ಯತಿ ಎಂಬಂತೆ ನಡೆದ ಈ ಸಮಾರಂಭದಲ್ಲಿ ಹಲವು ವಿವಿಐಪಿಗಳು, ಬಾಲಿವುಡ್ ತಾರೆಯರು ಸೇರಿದಂತೆ ವಿವಿಧ ಚಿತ್ರರಂಗದ ತಾರೆಯರು, ಖ್ಯಾತ ಉದ್ಯಮಿಗಳು, ಕ್ರಿಕೆಟ್ ತಾರೆಯರು, ದೇಶದ ಮೂಲೆ ಮೂಲೆಯಿಂದ ಬಂದ ಸಾಧುಗಳು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಅಲ್ಲದೇ ಅನೇಕ ಶ್ರೀಮಂತ ಉದ್ಯಮಿಗಳು ಶ್ರೀರಾಮನಿಗೆ ವಿಶೇಷ ಉಡುಗೊರೆ ನೀಡಿದ್ದರು. ಅದೇ ರೀತಿ ಈಗ ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಜೊತೆಯಾಗಿ 33 ಕೇಜಿ ತೂಗುವ ವಜ್ರಾಭರಣಗಳನ್ನು ಒಳಗೊಂಡ ಕಿರೀಟ ನೀಡಿದ್ದಾರೆ ಎಂದು ವರದಿಯಾಗಿದೆ.
Ambani family
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವರದಿಯ ಪ್ರಕಾರ, ಅಯೋಧ್ಯೆಯ ರಾಮ ಮಂದಿರಕ್ಕೆ ಅಂಬಾನಿ ದಂಪತಿ 3 ಕಿರೀಟಗಳನ್ನು ನೀಡಿದ್ದು, 33 ಕೆಜಿ ಚಿನ್ನ ಬಳಸಿ ಈ ಕಿರೀಟವನ್ನು ಮಾಡಲಾಗಿದೆ ಎಂದಿದೆ. ಆದರೆ ಈ ವಿಚಾರದ ಸತ್ಯಾಸತ್ಯತೆಗೆ ಸಂಬಂಧಿಸಿದಂತೆ ಮಾಧ್ಯಮವೊಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ್ನು ಸಂಪರ್ಕಿಸಿದಾಗ ಈ ವಿಚಾರ ಸತ್ಯಕ್ಕೆ ದೂರವಾದುದು ಎಂದು ತಿಳಿದು ಬಂದಿದೆ.
ಮುಕೇಶ್ ಅಂಬಾನಿ ನೀತಾ ಸೇರಿದಂತೆ ಅವರ ಕುಟುಂಬದ ಯಾರೂ ಕೂಡ ಇಂತಹ ಉಡುಗೊರೆಯನ್ನು ನೀಡಿಲ್ಲ ಎಂದು ರಾಮಜನ್ಮಭೂಮಿ ಖಚಿತಪಡಿಸಿದೆ. ಅಲ್ಲದೇ ದೇಗುಲಕ್ಕೆ ದೇಣಿಗೆ ನೀಡಿದವರ ಲಿಸ್ಟ್‌ನಲ್ಲಿಯೂ ಇವರ ಹೆಸರಿಲ್ಲ ಎಂದು ತಿಳಿದು ಬಂದಿದೆ.
Ambani family
ಇನ್ನು ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಅಂಬಾನಿ ಅಪಾರ್ಟ್‌ಮೆಂಟ್ ಅಂಟಿಲಿಯಾವನ್ನು ಲೈಟಿಂಗ್ಸ್ ಜೊತೆ ಕಲಾತ್ಮಕವಾಗಿ ಸಿಂಗರಿಸಲಾಗಿತ್ತು.
ಆದರೆ ಈ ಅದ್ದೂರಿ ಸಮಾರಂಭದಲ್ಲಿ ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಅವರ ಇಡೀ ಕುಟುಂಬವೇ ಭಾಗಿಯಾಗಿತ್ತು, ನೀತಾ ಅಂಬಾನಿ ಹಾಗೂ ಪತಿ ಮುಕೇಶ್ ಅಂಬಾನಿ ಜೊತೆಯಾಗಿ ಆಗಮಿಸಿದರೆ ಇತ್ತ ಇವರ ಪುತ್ರಿ ಇಶಾ ಅಂಬಾನಿ ಪತಿ ಗೌತಮ್ ಪಿರಾಮಲ್ ಜೊತೆ ಆಗಮಿಸಿದ್ದರು. ಹಾಗೆಯೇ ಆಕಾಶ್ ಅಂಬಾನಿ ಪತ್ನಿ ಶ್ಲೋಕ ಅಂಬಾನಿ ಜೊತೆ ಈ ಶುಭ ಕಾರ್ಯಕ್ರಮಕ್ಕೆ ಬಂದಿದ್ದರು. ತಮ್ಮ ಎಂದಿನ ಸಂಪ್ರದಾಯಿಕ ಶೈಲಿಯ ಸಾರಿ ಉಟ್ಟು ಪತಿ ಜೊತೆ ಆಗಮಿಸುವ ಮೂಲಕ ನೀತಾ ಅಂಬಾನಿ ಗಮನ ಸೆಳೆದರು.