ಮುಸ್ಲಿಂ ಬಾಹುಳ್ಯ ಯುಎಇಯ ಅಬುಧಾಬಿಯಲ್ಲಿ ಅಂದಾಜು 700 ಕೋಟಿ ರೂಪಾಯಿ ವೆಚ್ಚದಲ್ಲಿ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (BAPS) ನಿರ್ಮಾಣ ಮಾಡಿರುವ ಮಂದಿರ ಬುಧವಾರ ಲೋಕಾರ್ಪಣೆಗೊಳ್ಳಲಿದೆ.
213
ಬೃಹತ್ ಪ್ರಮಾಣದಲ್ಲಿ ನಿರ್ಮಾಣವಾಗಿರುವ ಮಂದಿರ 108 ಓಈಟ್ ಎತ್ತರವಾಗಿದ್ದು, ಅಬುಧಾಬಿಯ ಕೊಂಚ ಹೊರ ಆವರಣದಲ್ಲಿರುವ ರಾಜಧಾನಿ ಅಬು ಮುರಿಯಾಖಾ ಪ್ರದೇಶದನ್ಲಲಿ ನಿರ್ಮಾಣವಾಗಿದೆ.
313
ಯುನೈಟೆಡ್ ಅರಬ್ ಒಕ್ಕೂಟದ ಮೊದಲ ಕಲ್ಲಿನ ದೇವಸ್ಥಾನ ಇದಾಗಿದದಯ, ಪೂರ್ಣ ಏಷ್ಯಾದ ಅತೀದೊಡ್ಡ ಹಾಗೂ ಭಾರತದ ಹೊರಗಿನ ಅತಿದೊಡ್ಡ ದೇವಸ್ಥಾನ ಎನ್ನುವ ಕೀರ್ತಿಗೆ ಭಾಜನವಾಗಿದೆ.
413
ಬಾಪ್ಸ್ ಸ್ವಾಮಿನಾರಾಯಣ ಸಂಸ್ಥೆಯ ಪ್ರಸ್ತುತ ಆಧ್ಯಾತ್ಮಿಕ ಗುರು ಮಹಂತ್ ಸ್ವಾಮಿ ಮಹಾರಾಜ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 14 ರಂದು ಬಹುನಿರೀಕ್ಷಿತ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
513
ಫೆಬ್ರವರಿ 18 ರಿಂದ ಭಕ್ತಾದಿಗಳು ಈ ಮಂದಿರದ ಬೇಟಿಗೆ ನೋಂದಾಯಿಸಿಕೊಳ್ಳಲು ಆರಂಭ ಮಾಡಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
613
ಸಂಕೀರ್ಣವಾದ ಕೆತ್ತಿದ ಕಲಾಕೃತಿಗಳ ವಾಸ್ತುಶಿಲ್ಪದ ಅದ್ಭುತ ಮತ್ತು ಆಕರ್ಷಕ ಕಥೆಗಳ ಸಮೃದ್ಧವಾಗಿದೆ, ಇದು ಪ್ರಶಾಂತತೆಯ ಆಧ್ಯಾತ್ಮಿಕ ಧಾಮ ಎಂದು ಹೊಗಳಿಸಿಕೊಂಡಿದೆ.
713
ರಾಷ್ಟ್ರದ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಒದಗಿಸಿದ 27 ಎಕರೆ ಭೂಮಿಯಲ್ಲಿ ನೆಲೆನಿಂತ ಈ ದೇವಾಲಯವು ಎರಡು ಅದ್ಭುತವಾದ ಗುಮ್ಮಟಗಳು ಮತ್ತು ಪ್ರತಿ ಎಮಿರೇಟ್ಸ್‌ನ ಪ್ರತಿನಿಧಿ ಎನ್ನುವಂತೆ ಏಳು ಗೋಪುರಗಳನ್ನು ಹೊಂದಿರುವ ಸುಂದರವಾದ ರಚನೆಯಾಗಿದೆ.
813
ದುಬೈ-ಅಬುಧಾಬಿ ಹೆದ್ದಾರಿಯಿಂದ ಅಬು ಮುರೇಖಾದಲ್ಲಿರುವ ಸಾಂಸ್ಕೃತಿಕ ಗ್ರಾಮಕ್ಕೆ ರಸ್ತೆ ಮಾರ್ಗದಲ್ಲಿ ಹೋಗುವಾಗ ದೂರದಿಂದಲೂ ಗೋಪುರಗಳನ್ನು ವೀಕ್ಷಿಸಬಹುದು.
913
ಅನೇಕ ಸ್ವಯಂಸೇವಕರು ದೇವಸ್ಥಾನದ ಕಾರ್ಯವಿಧಾನಕ್ಕೆ ಸಹಾಯ ಮಾಡುತ್ತಿದ್ದಾರೆ, ಆದರೆ 100 ಕ್ಕೂ ಹೆಚ್ಚು ಉದ್ಯೋಗಿಗಳು ಪ್ರಸ್ತುತ ಭವ್ಯವಾದ ದೇವಾಲಯದ ನಿರ್ಮಾಣಕ್ಕೆ ಅಂತಿಮ ಸ್ಪರ್ಶವನ್ನು ನೀಡುತ್ತಿದ್ದಾರೆ.
1013
ಭಾರತೀಯ ಕುಶಲಕರ್ಮಿಗಳಿಂದ ರಚಿಸಲ್ಪಟ್ಟ ಗುಲಾಬಿ ಮರಳುಗಲ್ಲಿನ ಕಟ್ಟಡವು ಹಿಂದೂ ಧರ್ಮವನ್ನು ಮಾತ್ರವಲ್ಲದೆ ಎಲ್ಲಾ ಧರ್ಮಗಳು ಮತ್ತು ನಾಗರಿಕತೆಗಳ ಪ್ರಾತಿನಿಧ್ಯವನ್ನು ಪ್ರದರ್ಶಿಸುತ್ತದೆ.
1113
1997 ರಲ್ಲಿ ಶಾರ್ಜಾ ಮರುಭೂಮಿಯ ನಡುವೆ ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಿಸಲು ತೀರ್ಮಾನ ಮಾಡಿದ್ದ ಸಂಸ್ಥಾದ ದಿವಂಗತ ಆಧ್ಯಾತ್ಮಿಕ ನಾಯಕರಾದ ಅವರ ಪವಿತ್ರ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಸ್ಮಾರಕವಾಗಿ ಇದನ್ನು ಕಟ್ಟಲಾಗಿದೆ.
1213
ಪವಿತ್ರ ಭಾರತೀಯ ನದಿಗಳಾದ ಸರಸ್ವತಿ, ಯಮುನಾ ಮತ್ತು ಗಂಗಾ ಮೂಲವನ್ನು ಸಂಕೇತಿಸುವ ಸುಂದರವಾದ ವಾಟರ್‌ಫಾಲ್ ಜೆಕ್ ಗಣರಾಜ್ಯದಿಂದ ಆಮದು ಮಾಡಿಕೊಂಡ ಆರು ಮರಗಳಿಂದ ನಿರ್ಮಾಣ ಮಾಡಿದ್ದಾಗಿದೆ.
1313
ಈ ದೇವಾಲಯವು ಅರೇಬಿಯಾ, ಈಜಿಪ್ಟ್, ಮೆಸೊಪಟ್ಯಾಮಿಯಾ, ಅಜ್ಟೆಕ್ ಮತ್ತು ಭಾರತದ ನಾಗರಿಕತೆಗಳಿಂದ ಪಡೆದ ಪ್ರಮುಖ ಕಥೆಗಳ ಕೆತ್ತನೆಯ ನಿರೂಪಣೆಗಳನ್ನು ಒಳಗೊಂಡಿದೆ.