ದೆಹಲಿ ಬೆಂಗಳೂರು ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಿಸಿದ ಘಟನೆ ನಡೆದಿದೆ. ಲ್ಯಾಂಡಿಂಗ್ ವೇಳೆ ಟೇಲ್ ಸ್ಟೈಕ್ ಘಟನೆಯಿಂದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು.
ದೆಹಲಿಯಿಂದ ಪ್ರಯಾಣಿಕರ ಹೊತ್ತು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಏರ್ ಇಂಡಿಯ ವಿಮಾನ ಲ್ಯಾಂಡಿಂಗ್ ಸಮಸ್ಯೆ ಎದುರಿಸಿದ್ದು ಮಾತ್ರವಲ್ಲ, ಲ್ಯಾಂಡಿಂಗ್ ವೇಳೆ ಟೇಲ್ ಸ್ಟ್ರೈಕ್‌ನಿಂದ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ನಡೆದಿದೆ. ಮೊದಲ ಲ್ಯಾಂಡಿಂಗ್ ಪ್ರಯತ್ನದ ವೇಳೆ ವಿಮಾನದ ಹಿಂಭಾಗ ರನ್‌ವೇ ತಾಗಿ ನಿಯಂತ್ರಣ ಕಳೆದುಕೊಂಡ ಘಟನೆ ನಡೆದಿದೆ.
25
ಭಾರಿ ಗಾಳಿಯಿಂದ ನಿಯಂತ್ರಣಕ್ಕೆ ಸಿಗದ ವಿಮಾನ
ಏರ್ ಇಂಡಿಯಾ AI2651 ವಿಮಾನ ಬೆಂಗಳೂರಲ್ಲಿ ಲ್ಯಾಂಡಿಂಗ್ ವೇಳೆ ಭಾರಿ ಗಾಳಿ ಹಾಗೂ ಹವಾಮಾನ ವೈಪರಿತ್ಯದಿಂದ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಭಾರಿ ಗಾಳಿಯಿಂದ ವಿಮಾನ ನಿಯಂತ್ರಣಕ್ಕೆ ಸಿಗದೆ ವಿಮಾನದ ಹಿಂಬಾಗ ರನ್‌ವೇಗೆ ತಾಗಿದೆ. ಇದು ಪ್ರಯಾಣಿಕರ ಆತಂಕ ಹೆಚ್ಚಿಸಿತ್ತು.
35
ಎರಡನೇ ಪ್ರಯತ್ನದಲ್ಲಿ ಲ್ಯಾಂಡಿಂಗ್
ಮೊದಲ ಪ್ರಯತ್ನದಲ್ಲಿ ಏರ್ ಇಂಡಿಯಾ ವಿಮಾನ ಆತಂಕ ಎದುರಿಸಿತ್ತು. ಹವಾಮಾನದಲ್ಲಿನ ಬದಲಾವಣೆಯಿಂದ ಲ್ಯಾಂಡಿಂಗ್ ಸಮಸ್ಯೆಯಾಗಿತ್ತು. ಎರಡನೇ ಬಾರಿಗೆ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಮಾಡಲಾಗಿದೆ. ತಕ್ಷಣವೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸುರಕ್ಷಿತವಾಗಿ ವಿಮಾನದಿಂದ ಇಳಿದಿದ್ದಾರೆ.
ಲ್ಯಾಂಡಿಂಗ್ ವೇಳೆ ಸಮಸ್ಯೆ ಎದುರಿಸಿದ ಕಾರಣ ಏರ್ ಇಂಡಿಯಾ AI2651 ವಿಮಾನವನ್ನು ಸೇವೆಯಿಂದ ಹಿಂಪಡೆಯಲಾಗಿದೆ. ತಾಂತ್ರಿಕ ಸಿಬ್ಬಂದಿಗಳ ತಂಡ ಸಂಪೂರ್ಣ ತನಿಖೆ ಮಾಡಲಾಗಿದೆ. ಇದೇ ವೇಳೆ ಏರ್ ಇಂಡಿಯಾ ಅಧಿಕಾರಿಗಳ ತಂಡ ತನಿಖೆಗೆ ಆದೇಶಿಸಿದೆ.
55
ಬೆಂಗಳೂರಿನಿಂದ ದೆಹಲಿ ರಿಟರ್ನ್ ಫ್ಲೈಟ್ ರದ್ದು
ತನಿಖೆ ಕಾರಣದಿಂದ ಬೆಂಗಳೂರಿನಿಂದ ಮರಳಿ ದೆಹಲಿಗೆ ತೆರಳಬೇಕಿದ್ದ ಏರ್ ಇಂಡಿಯಾ AI2651 ವಿಮಾನ ರದ್ದು ಮಾಡಲಾಗಿದೆ. ಪ್ರಯಾಣಿಕರಿಗೆ ಪರ್ಯಾ ವ್ಯವಸ್ಥೆ ಮಾಡಲಾಗಿದ ಎಂದು ಏರ್ ಇಂಡಿಯಾ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ