'ವೇಶ್ಯಾವಾಟಿಕೆ ಕೂಲ್‌ ಪ್ರೊಫೆಶನ್‌..' ಎಂದ ವಿದೂಷಿ ಸ್ವರೂಪ್‌, ಸೋಶಿಯಲ್‌ ಮೀಡಿಯಾದಲ್ಲಿ ಶುರು ಜಟಾಪಟಿ!

First Published Oct 24, 2023, 8:02 PM IST

ಸ್ಟ್ಯಾಂಡ್-ಅಪ್ ಕಾಮಿಡಿಯನ್ ವಿದುಷಿ ಸ್ವರೂಪ್ ತಮ್ಮ ಲೈವ್‌ ಫರ್ಫಾಮೆನ್ಸ್‌ ವೇಳೆ ವೇಶ್ಯಾವಾಟಿಕೆ ಕುರಿತಾಗಿ ನೀಡಿದ ಹೇಳಿಕೆಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಕೆಲವರು ಆಕೆಯ ಹೇಳಿಕೆಯನ್ನು ಸರ್ಮಥಿಸಿಕೊಂಡಿದ್ದಾರೆ.

ಸ್ಟ್ಯಾಂಡ್-ಅಪ್ ಕಾಮಿಡಿಯನ್ ವಿದುಷಿ ಸ್ವರೂಪ್ ವಿವಾದಕ್ಕೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಅವರು ವೇಶ್ಯಾವಾಟಿಕೆಯ ಕುರಿತಾಗಿ ನೀಡಿರುವ ಒಂದು ಹೇಳಿಕೆ.

ಇತ್ತೀಚೆಗೆ ತಮ್ಮ ಲೈವ್‌ ಕಾರ್ಯಕ್ರಮವೊಂದರಲ್ಲಿ  ಮಾತನಾಡುವ ವೇಳೆ ವೇಶ್ಯಾವಾಟಿಕೆಯನ್ನು ಕೂಲ್‌ ಪ್ರೊಫೆಶನ್‌ ಎಂದು ಕರೆದಿದ್ದೇ ಈಗ ವಿವಾದಕ್ಕೆ ಕಾರಣವಾಗಿದೆ.

ಆಕೆಯ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ನೆಟ್ಟಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋ ಕ್ಲಿಪ್‌ನಲ್ಲಿ ವೇಶ್ಯಾವಾಟಿಕೆಯನ್ನು ಕೂಲ್‌ ಪ್ರೊಫೆಶನ್‌ ಎಂದು ಕರೆಯುವ ಆಕೆ, ವೇಶಾವಾಟಿಕೆ ಇತರ ಎಲ್ಲಾ ಉದ್ಯೋಗಕ್ಕಿಂತ ಹೇಗೆ ಭಿನ್ನ ಎನ್ನುವುದನ್ನು ಅದರಲ್ಲಿ ಹೇಳಿದ್ದಾರೆ.

ವಿದುಶಿ ಸ್ವರೂಪ್‌ ಹೇಳಿರುವ ಮಾತಿಗೆ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಆಕ್ರೋಶ ಶುರುವಾಯಿತು. ಹೆಚ್ಚಿನವರು ಆಕೆಗೆ ಯಾವ ವಿಚಾರವನ್ನು ಹೇಗೆ ಮಾತನಾಡಬೇಕು ಎನ್ನುವ ಸೂಕ್ಷ್ಮತೆ ಇಲ್ಲ ಎಂದಿದ್ದಾರೆ.

"ಮಹಿಳೆಯರನ್ನು ಯಾವಾಗಲೂ ಗೌರವಿಸಿ. ಇದು ಮಹಿಳೆಯರನ್ನು ಪ್ರಸ್ತುತಪಡಿಸುವ ಮಾರ್ಗವಲ್ಲ. ನಾಚಿಕೆಗೇಡಿನ ಕೃತ್ಯ" ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ಅನುಭವ ಎಷ್ಟು ಇಂಪಾರ್ಟೆಂಟ್‌ ಆಗುತ್ತದೆ. ಉಳಿದ ಕೆಲಸಗಳಿಂತ ಇದು ಹೇಗೆ ಭಿನ್ನವಾಗಿದೆ ಎನ್ನುವುದನ್ನು ಹಾಸ್ಯದ ಮಿಳಿತದೊಂದಿಗೆ ಹೇಳಿದ್ದಾರೆ.

"ದುರದೃಷ್ಟವಶಾತ್, ಕೆಲವು ಸ್ವಯಂ-ಘೋಷಿತ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳು ಕೆಲವರು ತಮಾಷೆಯಾಗಿ ಕಾಣುವ ಕಾಮೆಂಟ್‌ಗಳನ್ನು ಮಾಡುತ್ತಾರೆ, ಅದು ಧರ್ಮಕ್ಕೆ ಸಂಬಂಧಿಸಿರಬಹುದು ಅಥವಾ ಇತರ ಸೂಕ್ಷ್ಮ ವಿಷಯಗಳಾಗಿರಬಹುದು. ಅವರು ಸಾಮಾನ್ಯವಾಗಿ ತಮಾಷೆಯೆಂದು ಭಾವಿಸುತ್ತಾರೆ ಮತ್ತು ಪ್ರೇಕ್ಷಕರು ನಗುತ್ತಾರೆ. ಆದರೆ, ಇದು ಕೂಲ್ ವಿಚಾರವಲ್ಲ' ಎಂದು ಇನ್ನೊಬ್ಬರು ಬರೆದಿದ್ದಾರೆ.

ಕವಿ ಹಾಗೂ ಮಾಜಿ ರಾಜಕಾರಣಿ ಕುಮಾರ್‌ ವಿಶ್ವಾಸ್‌ ಕೂಡ ವಿದುಶಿ ಸ್ವರೂಪ್‌ ಅವರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಈಕೆ ಹೇಳಿರುವ ಮಾತುಗಳು ಅಸಂಬದ್ಧ ಮಾತ್ರವಲ್ಲ, ಅಮಾನವೀಯ ಮತ್ತು ಕ್ರೂರವೂ ಆಗಿದೆ. ಈ ಸಂವೇದನಾಶೀಲವಲ್ಲದ ಹಾಸ್ಯವು ಅಸಭ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ನಿರಂತರವಾಗಿ ಗೇಲಿ ಮಾಡುವ ಇಂದಿನ ಸ್ಟ್ಯಾಂಡ್-ಅಪ್ ಪ್ರಸ್ತುತಿಗಳ ಒಂದು ನೋಟವಾಗಿದೆ ಎಂದು ಕುಮಾರ್ ವಿಶ್ವಾಸ್‌ ಬರೆದಿದ್ದಾರೆ.

ಯಾವುದೇ ಪುರುಷ ಕಾಮೆಡಿಯನ್‌ ಇಂಥ ಚೀಪ್‌ ಕೆಲಸವನ್ನು ಮಾಡಿಲ್ಲ ಎನ್ನುವುದು ಅದೃಷ್ಟ. ಹಾಗೇನಾದರೂ ಆಗಿದ್ದರೆ, ಎಲ್ಲಾ ಆಯೋಗಗಳು ಆತನ ಮೇಲೆ ಮುಗಿ ಬೀಳುತ್ತಿದ್ದವು. ಇದನ್ನು ಕೇಳಿ ನಗುವವರಿಗೆ ನಾಚಿಕೆಯಾಗಬೇಕು ಎಂದು ಕುಮಾರ್‌ ವಿಶ್ವಾಸ್‌ ಟೀಕಿಸಿದ್ದಾರೆ.


ಇನ್ನೂ ಕೆಲವರು ವಿದುಶಿ ಸ್ವರೂಪ್‌ ಅವರ ಮಾತಿಗೆ ಸೋಶಿಯಲ್‌ ಮೀಡಿಯಾದಲ್ಲಿಯೇ ಬೆಂಬಲ ಸೂಚಿಸಿ ಮಾತನಾಡಿದ್ದಾರೆ. ಆಕೆಯ ಹೇಳಿರೋದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.


ಸಮಾಜಕ್ಕೆ ಕನ್ನಡಿ ತೋರಿಸುವುದು ಹಾಸ್ಯದ ಉದ್ದೇಶ. ಅದನ್ನು ನೀವು ಚೆನ್ನಾಗಿ ಮಾಡಿದ್ದೀರಿ ಎಂದು ವಿದುಶಿ ಸ್ವರೂಪ್‌ ಅವರ ಮಾತುಗಳನ್ನು ಬೆಂಬಲಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ವಿದುಶಿ ಸ್ವರೂಪ್‌ ಇನ್ಸ್‌ಟಾಗ್ರಾಮ್‌ನಲ್ಲಿ ಈ ಕುರಿತಾಗಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಕುಮಾರ್‌ ವಿಶ್ವಾಸ್‌ ಅವರ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ವಿದುಶಿ ಸ್ವರೂಪ್‌, ನನ್ನ ವಿಡಿಯೋದ ಆಯ್ದ ಭಾಗವನ್ನು ಮಾತ್ರವೇ ಇಲ್ಲಿ ಹಾಕಲಾಗಿದೆ. ಇಡೀ ವಿಡಿಯೋದಲ್ಲಿ ಇಂಥ ಅಂಶಗಳಿಲ್ಲ. ನಿರ್ಧಾರಕ್ಕೆ ಬರುವ ಮುನ್ನ ವಿಡಿಯೋವನ್ನು ಪೂರ್ತಿ ನೋಡಿ ಎಂದು ಹೇಳಿದ್ದಾರೆ.

Latest Videos

click me!