ಹಣ, ಉಡುಗೊರೆಗಾಗಿ ಸಂಸತ್ತಿನಲ್ಲಿ ಪ್ರಶ್ನೆ ಮಾಡ್ತಿದ್ದ ಟಿಎಂಸಿ ಸಂಸದೆ? ಏನಿದು ವಿವಾದ..? ಇಲ್ಲಿದೆ ವಿವರ..

Published : Oct 20, 2023, 02:19 PM ISTUpdated : Oct 20, 2023, 02:33 PM IST

ಉದ್ಯಮಿಯೊಬ್ಬರಿಂದ "ನಗದು ಮತ್ತು ಉಡುಗೊರೆಗಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ" ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಟಿಎಂಸಿ ಸಂಸದೆ ಮೇಲೆ ಆರೋಪ ಮಾಡಿದ್ದು, ಈ ಹಿನ್ನೆಲೆ ರಾಜಕೀಯ ಬಿರುಗಾಳಿ ಎದ್ದಿದೆ.

PREV
113
ಹಣ, ಉಡುಗೊರೆಗಾಗಿ ಸಂಸತ್ತಿನಲ್ಲಿ ಪ್ರಶ್ನೆ ಮಾಡ್ತಿದ್ದ ಟಿಎಂಸಿ ಸಂಸದೆ? ಏನಿದು ವಿವಾದ..? ಇಲ್ಲಿದೆ ವಿವರ..

ಟಿಎಂಸಿ ನಾಯಕಿ ಹಾಗೂ ಸಂಸದೆ ಮಹುವಾ ಮೊಯಿತ್ರಾ ಅವರು ಇತ್ತೀಚೆಗೆ ವಿವಾದಗಳಿಂದಲೇ ಸದ್ದು ಮಾಡ್ತಿದ್ದಾರೆ. ಉದ್ಯಮಿಯೊಬ್ಬರಿಂದ "ನಗದು ಮತ್ತು ಉಡುಗೊರೆಗಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ" ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಟಿಎಂಸಿ ಸಂಸದೆ ಮೇಲೆ ಆರೋಪ ಮಾಡಿದ್ದು, ಈ ಹಿನ್ನೆಲೆ ರಾಜಕೀಯ ಬಿರುಗಾಳಿ ಎದ್ದಿದೆ.

213

ಮಹುವಾ ಮೊಯಿತ್ರಾ ಅವರನ್ನು ತಕ್ಷಣವೇ ಸದನದಿಂದ ಅಮಾನತುಗೊಳಿಸಬೇಕೆಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಒತ್ತಾಯಿಸಿದ್ದಾರೆ. ಹಾಗೂ, ಅವರ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು "ವಿಚಾರಣಾ ಸಮಿತಿ" ರಚಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು  ಮನವಿ ಮಾಡಿದ್ದರು. ಇದನ್ನು ಸ್ವಾಗತಿಸಿದ ಟಿಎಂಸಿ ಸಂಸದೆ, ತನ್ನ ವಿರುದ್ಧದ ಆರೋಪಗಳು ಮಾನಹಾನಿಕರ, ಸುಳ್ಳು, ಆಧಾರರಹಿತ ಎಂದಿದ್ದರು.

313

ರಿಯಲ್ ಎಸ್ಟೇಟ್ ಸಂಘಟಿತ ಹೀರಾನಂದಾನಿ ಗ್ರೂಪ್‌ನ ಸಿಇಒ ಮತ್ತು ಉದ್ಯಮಿ ದರ್ಶನ್ ಹೀರಾನಂದಾನಿ ಹಾಗೂ ಮಹುವಾ ಮೊಯಿತ್ರಾ ನಡುವೆ ಲಂಚದ ವ್ಯವಹಾರ ನಡೆದಿದೆ ಎಂದು ಸುಪ್ರೀಂ ಕೋರ್ಟ್ ವಕೀಲರೊಬ್ಬರ ಪತ್ರವನ್ನು ಆಧರಿಸಿದೆ ಎಂದು ನಿಶಿಕಾಂತ್ ದುಬೆ ತಿಳಿಸಿದ್ದರು. ಮಹುವಾ ಮೊಯಿತ್ರಾ ಸಂಸತ್ತಿನಲ್ಲಿ ಇತ್ತೀಚಿನವರೆಗೂ ಕೇಳಿದ 61 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳು ಅದಾನಿ ಗ್ರೂಪ್ ಮೇಲೆ ಕೇಂದ್ರೀಕೃತವಾಗಿವೆ ಎಂದು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ನಿಶಿಕಾಂತ್‌ ದುಬೆ ಹೇಳಿದ್ದಾರೆ.

413

ಸಂಪೂರ್ಣ ವಿವಾದ ಇಲ್ಲಿದೆ..

1) ಮಹುವಾ ಮೊಯಿ ಮೇಲಿನ ಆರೋಪಗಳು ಡಿಸೆಂಬರ್ 2005 ರ 'ಕ್ಯಾಶ್ ಫಾರ್ ಕ್ವೆರಿ ಸ್ಕ್ಯಾಂಡಲ್' (ಹಣಕ್ಕಾಗಿ ಪ್ರಶ್ನೆ) ಅನ್ನು ನೆನಪಿಸುತ್ತದೆ ಎಂದು ನಿಶಿಕಾಂತ್‌ ದುಬೆ ತಮ್ಮ ಪತ್ರದಲ್ಲಿ ಹೇಳಿದ್ದಾರೆ.  ದರ್ಶನ್ ಹಿರಾನಂದಾನಿಯ ವ್ಯಾಪಾರ ಹಿತಾಸಕ್ತಿಗಳನ್ನು ಗಳಿಸಲು ಮತ್ತು ರಕ್ಷಿಸಲು ಮಹುವಾ ಮೊಯಿತ್ರಾ ಕ್ರಿಮಿನಲ್‌ ಸಂಚು ರೂಪಿಸಿದ್ದಾರೆ ಎಂದೂ ಆರೋಪಿಸಿದ್ದಾರೆ. 

513

2) 'ಪ್ರಶ್ನೆಗಳಿಗೆ ಲಂಚ' ಆರೋಪಕ್ಕೆ ಸಂಬಂಧಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಲೋಕಸಭೆ ಸ್ಪೀಕರ್ ಈ ದೂರನ್ನು ಬಿಜೆಪಿ ಸದಸ್ಯ ವಿನೋದ್ ಕುಮಾರ್ ಸೋಂಕರ್ ಅವರ ಅಧ್ಯಕ್ಷತೆಯ ಲೋಕಸಭೆಯ ನೈತಿಕ ಸಮಿತಿಗೆ ಕಳುಹಿಸಿದ್ದಾರೆ.

613

3) ಬಳಿಕ ಟಿಎಂಸಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೆಹದ್ರಾಯ್ ಅವರಿಗೆ "ಮಾನಹಾನಿಕರ" ಆರೋಪಗಳ ಕುರಿತು ಲೀಗಲ್ ನೋಟಿಸ್ ಕಳುಹಿಸಿದೆ.

713

4) ಮೊಯಿತ್ರಾ ಮತ್ತು  ಜೈ ಅನಂತ್ ದೆಹದ್ರಾಯ್ ಅವರು ಹಲವಾರು ವರ್ಷಗಳಿಂದ "ಆಪ್ತ ಸ್ನೇಹ" ವನ್ನು ಹಂಚಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

813

5) ಇತ್ತೀಚೆಗೆ ಮಹುವಾ ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಶೇರ್‌ ಮಾಡಿದ್ದರು ಮತ್ತು "ತಮ್ಮ ಪರವಾಗಿ ಪ್ರಶ್ನೆಗಳನ್ನು ಪೋಸ್ಟ್ ಮಾಡಬಹುದು" ಎಂದು ಹೀರಾನಂದನಿ ಗುರುವಾರ ಸಂಸತ್ತಿನ ನೈತಿಕ ಸಮಿತಿಯ ಮುಂದೆ ಪತ್ರವನ್ನು ಸಲ್ಲಿಸಿದಾಗ ವಿಷಯವು ಹೊಸ ತಿರುವು ಪಡೆದುಕೊಂಡಿದೆ.

913

6)  ಮೊಯಿತ್ರಾ ಅವರು "ರಾಷ್ಟ್ರಮಟ್ಟದಲ್ಲಿ ಶೀಘ್ರವಾಗಿ ಹೆಸರು ಗಳಿಸಲು" ಬಯಸಿದ್ದರು. ಮತ್ತು ಸ್ನೇಹಿತರು ಮತ್ತು ಇತರರ ಸಲಹೆ ಮೇರೆಗೆ ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡುವ ಮೂಲಕ ಸಲಹ ಪಡೆಯುತ್ತಿದ್ದಾರೆ ಎಂದು ಹೀರಾನಂದಾನಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

1013

7) ಮೊಯಿತ್ರಾ ಈ ಆರೋಪಗಳನ್ನು ನಿರಾಕರಿಸಿದ್ದು, ಮತ್ತು ಪತ್ರದ ವಿಷಯಗಳು "ತಮಾಷೆ" ಎಂದು ಹೇಳಿದ್ದಾರೆ. ಹಾಗೂ, ಪತ್ರದ ವಿಶ್ವಾಸಾರ್ಹತೆಯನ್ನು ಸಹ ಪ್ರಶ್ನಿಸಿದ್ದಾರೆ. 

1113

8) ಹಾಗೂ, ಪ್ರಧಾನಿ ಮಂತ್ರಿ ಕಚೇರಿ ಬೆದರಿಕೆ ಮೇರೆಗೆ ಹಾಗೂ ಅವರ ಎಲ್ಲಾ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿ ಸಹಿ ಮಾಡಲು 20 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದೂ ಆರೋಪಿಸಿದ್ದಾರೆ. 

1213

9) ಈ ಮಧ್ಯೆ, ಮಹುವಾ ಮೊಯಿತ್ರಾ ವಿರುದ್ಧ ಪ್ರಶ್ನೆಗಳಿಗೆ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಹೀರಾನಂದಾನಿ ಪತ್ರದ ಪ್ರತಿ ಬಂದಿದೆ ಎಂದು ಸಂಸತ್ತಿನ ನೈತಿಕ ಸಮಿತಿ ಹೇಳಿದೆ.

1313

10) ಈ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ವೇಳೆ ಟಿಎಂಸಿ ಸಂಸದೆ ಪರ ವಕೀಲರು ‘ಹಿತಾಸಕ್ತಿ ಸಂಘರ್ಷ’ದ ಹಿನ್ನೆಲೆಯಲ್ಲಿ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಮುಂದಿನ ವಿಚಾರಣೆ ಅಕ್ಟೋಬರ್ 31 ರಂದು ನಡೆಯಲಿದೆ.

Read more Photos on
click me!

Recommended Stories