ಐಶ್ವರ್ಯ ರೈಗೆ ಅವಹೇಳನ ಆರೋಪ, ರಾಹುಲ್ ಗಾಂಧಿ ವಿರುದ್ಧ ಖ್ಯಾತ ಗಾಯಕಿ ಸೇರಿ ಹಲವರ ಆಕ್ರೋಶ!

First Published Feb 22, 2024, 3:35 PM IST

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಪ್ರತ್ಯಾರೋಪ ಹೆಚ್ಚಾಗುತ್ತಿದೆ. ಇದೀಗ ರಾಹುಲ್ ಗಾಂಧಿ ಹೊಸ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪದೇ ಪದೇ ನಟಿ ಐಶ್ವರ್ಯ ರೈ ಬಚ್ಚನ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಖ್ಯಾತ ಗಾಯಕಿ ರಾಹುಲ್ ವಿರುದ್ಧ ಗರಂ ಆಗಿದ್ದು, ತೀವ್ರ ವಾಗ್ದಾಳಿ ನಡೆಸಿದ್ದಾರೆ.
 

ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಾಡಿದ ಬಹುತೇಕ ಭಾಷಣದಲ್ಲಿ ಬಿಜೆಪಿ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದಾರೆ. ಆದರೆ ರಾಜಕೀಯ ಹಗ್ಗಜಗ್ಗಾಟದ ನಡುವೆ ರಾಹುಲ್ ಗಾಂಧಿ ನಟಿ ಐಶ್ವರ್ಯ ರೈ ಬಚ್ಚನ್ ಎಳೆದು ತಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಹುಲ್ ಗಾಂಧಿ ಇತ್ತೀಚೆಗೆ ಹಲವು ವೇದಿಕೆಗಳಲ್ಲಿ ರಾಜಕೀಯ ದಾಳವಾಗಿ ನಟಿ ಐಶ್ವರ್ಯ ಹೆಸರನ್ನು ಬಳಸಿಕೊಂಡಿದ್ದಾರೆ. ಇತ್ತೀಚೆಗೆ ನಾಚ್‌ನೇ ವಾಲಿ(ಕುಣಿಯುವ) ಐಶ್ವರ್ಯ ರೈ ಎಂಬ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
 

ಐಶ್ವರ್ಯ ರೈ ಕುರಿತು ನಾಚ್‌ನೇ ವಾಲಿ ಎಂಬ ಅವಹೇಳನ ಕಾರಿ ಮಾತುಗಳನ್ನಾಡಿರುವ ರಾಹುಲ್ ಗಾಂಧಿ ವಿರುದ್ಧ ಖ್ಯಾತ ಗಾಯಕಿ ಸೋನಾ ಮೋಹಪತ್ರ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
 

ರಾಜಕಾರಣಿಗಳು ತಮ್ಮ ಭಾಷಣದಲ್ಲಿ ಮಹಿಳೆಯರನ್ನು ಕೀಳಾಗಿ ಉಲ್ಲೇಖಿಸುತ್ತಿರುವುದೇಕೆ? ಅತ್ಮೀಯ ರಾಹುಲ್ ಗಾಂಧಿ ನಿಮ್ಮ ತಾಯಿ, ತಂಗಿ ಕುರಿತು ಯಾರಾದರೂ ಈ ರೀತಿ ಕೀಳು ಮಾತುಗಳನ್ನಾಡಿದರೆ ಚೆನ್ನಾಗಿರುತ್ತಾ? ಎಂದು ಗಾಯಕಿ ಮೋಹಪತ್ರ ಗುಡುಗಿದ್ದಾರೆ.

ರಾಜಕಾರಣಿಗಳು ಹೆಣ್ಣುಮಕ್ಕಳ ಕುರಿತು ತೀರಾ ಕೆಳಮಟ್ಟದ ಭಾಷೆ ಪ್ರಯೋಗ ಉಚಿತವಲ್ಲ. ಐಶ್ವರ್ಯ ರೈ ಉತ್ತಮವಾಗಿ ಡ್ಯಾನ್ಸ್ ಮಾಡಬಲ್ಲರು ಎಂದು ಸೋನಾ ಮೋಹಪತ್ರ ಟ್ವೀಟ್ ಮೂಲಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಯನ್ನು ಹಲವರು ವಿರೋಧಿಸಿದ್ದಾರೆ. ಐಶ್ವರ್ಯ ರೈ ಕುರಿತು ರಾಹುಲ್ ಗಾಂಧಿ ಪದೆ ಪದೇ ನಾಚ್‌ನೇ ವಾಲಿ ಎಂದು ಉಲ್ಲೇಖಿಸುತ್ತಿರುವುದೇಕೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ.

ರಾಹುಲ್ ಗಾಂಧಿ ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ತನ್ನ ದುಡಿಮೆ, ಸಾಮರ್ಥ್ಯ ಪ್ರತಿಭೆಯಿಂದ ಐಶ್ವರ್ಯ ರೈ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಸ್ವಾಭಿಮಾನದ ಹೆಣ್ಣು ಐಶ್ವರ್ಯ ರೈ ಅನ್ನು ನಾಚ್‌ನೇ ವಾಲಿ ಎಂದು ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. 

ಇತ್ತೀಚೆಗೆ ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಒಬಿಸಿ ಪ್ರತಿನಿಧಿಗಳನ್ನು ಮೋದಿ ಆಹ್ವಾನಿಸಿಲಿಲ್ಲ. ಪ್ರಾಣಪ್ರತಿಷ್ಛೆಯಲ್ಲಿದ್ದದ್ದು, ಐಶ್ವರ್ಯ ರೈ, ಅಮಿತಾಬ್ ಬಚ್ಚನ್ ಹಾಗೂ ಮೋದಿ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಜಾತಿ ಆರೋಪ ಮಾಡಿದ್ದರು.

ಮತ್ತೆ ಐಶ್ವರ್ಯ ರೈ ಬಚ್ಚನ್ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿರೋಧಕ್ಕೆ ಕಾರಣವಾಗಿದೆ. ಹೆಣ್ಣಿಗೆ ಬಗ್ಗೆ ಅಗೌರವವಾಗಿ ಮಾತನಾಡಿ ಚುನಾವಣೆ ಸೋತ ಹಲವು ಉದಾಹರಣೆಗಳು ಕಣ್ಣುಂದಿರುವಾಗ ಇದೀಗ ರಾಹುಲ್ ಗಾಂಧಿ ನೀಡಿದ ಹೇಳಿಕೆ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಮುಳವಾಗುವ ಸಾಧ್ಯತೆ ಇದೆಯಾ ಅನ್ನೋ ಚರ್ಚೆ ಶುರುವಾಗಿದೆ.
 

click me!