ಉದ್ವಿಘ್ನಗೊಂಡ ಬಂಗಾಳದಲ್ಲಿ ತಳಮಳ, ಸಂಸದ ಸ್ಥಾನಕ್ಕೆ ಟಿಎಂಸಿ ನಾಯಕಿ ಮಿಮಿ ಚಕ್ರಬರ್ತಿ ರಾಜೀನಾಮೆ!

First Published | Feb 15, 2024, 5:06 PM IST

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸಂಸದೆ, ನಟಿ ಮಿಮಿ ಚಕ್ರಬರ್ತಿ ರಾಜೀನಾಮೆ.  ಮಿಮಿ ಚಕ್ರವರ್ತಿ ದಿಢೀರ್ ನಿರ್ಧಾರ ಉದ್ವಿಘ್ನಗೊಂಡಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ತೃಣಮೂಲ ಕಾಂಗ್ರೆಸ್ ತೀವ್ರ ಟೀಕಿಗೆ ಗುರಿಯಾಗಿದೆ. ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಅವರ ಆಪ್ತರು ಮತ್ತು ಕಾರ್ಯಕರ್ತರು ಹಿಂದೂ ಮಹಿಳೆಯ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿದೆ.

ಒಂದೆಡೆ ಪ್ರತಿಭಟನೆಗಳಿಂದ ಟಿಎಂಸಿ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ ಸ್ಥಳೀಯ ಟಿಎಂಸಿ ನಾಯಕರ ವರ್ತನೆ ಹಾಗೂ ನಡವಳಿಕೆಯಿಂದ ಬೇಸತ್ತ ಸಂಸದೆ ಹಾಗೂ ನಟಿ ಮಿಮಿ ಚಕ್ರಬರ್ತಿ ರಾಜೀನಾಮೆ ನೀಡಿದ್ದಾರೆ.
 

Tap to resize

ಮಿಮಿ ಚಕ್ರಬರ್ತಿ ತಮ್ಮ ರಾಜೀನಾಮೆ ಪತ್ರವನ್ನು ಟಿಎಂಸಿ ಮುಖ್ಯಸ್ಥೆ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ನೀಡಿದ್ದಾರೆ. ಆದರೆ ಈ ರಾಜೀನಾಮೆಯನ್ನು ಮಮತಾ ಬ್ಯಾನರ್ಜಿ ಅಂಗೀಕರಿಸಿಲ್ಲ.

ಜಾದವಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಮಿಮಿ ಚಕ್ರಬರ್ತಿ ಇದೀಗ ಟಿಎಂಸಿ ನಾಯಕರ ವಿರುದ್ಧವೇ ಆರೋಪ ಮಾಡಿದ್ದಾರೆ. ಟಿಎಂಸಿ ನಾಯಕರ ಧೋರಣೆಯಿಂದ ಬೇಸತ್ತಿರುವುದಾಗಿ ಹೇಳಿದ್ದಾರೆ.
 

ಕುತಂತ್ರ ರಾಜಕೀಯ ನಾನು ಮಾಡಿಲ್ಲ. ಜಾದವುರದ ಅಭಿವೃದ್ಧಿ ಕನಸಗಳನ್ನಿಟ್ಟುಕೊಂಡು ನಾನು ಬಂದಿದ್ದೆ. ಆದರೆ ನನ್ನ ಪ್ರಯತ್ನಗಳಿಗೆ ಸ್ಥಳೀಯ ನಾಯಕರಿಗೆ ಯಾವುದೇ ಸಹಕಾರ ಸಿಕ್ಕಿಲ್ಲ ಎಂದು ಮಿಮಿ ಹೇಳಿದ್ದಾರೆ.

2019ರಲ್ಲಿ ಜಾದವುರದಿಂದ ಸ್ಪರ್ಧಿಸಿದ ಟಿಎಂಸಿ ನಾಯಕಿ ಮಿಮಿ ಚಕ್ರಬರ್ತಿ ಘಟಾನುಘಟಿ ನಾಯಕರನ್ನೇ ಸೋಲಿಸಿದ್ದರು. ಬಿಜೆಪಿಯ ಅನುಪಮ್ ಹಜ್ರಾ ಹಾಗೂ ಸಿಪಿಎಂನ ಭಕ್ಷ್ ರಂಜನ್ ಭಟ್ಟಾಚಾರ್ಯ ವಿರುದ್ಧ ಗೆಲುವು ಸಾಧಿಸಿದ್ದರು.

ಈ ಬಾರಿಯ ಲೋಕಸಭಾ ಚುನಾವಣೆಗೆ ಮಿಮಿ ಚಕ್ರಬರ್ತಿಗೆ ಮತ್ತೆ ಜಾದವಪುರದಿಂದ ಟಿಕೆಟ್ ನೀಡಲು ಟಿಎಂಸಿ ಮುಂದಾಗಿತ್ತು. ಇದೀಗ ದಿಢೀರ್ ರಾಜೀನಾಮೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.
 

ಸಂದೇಶ್‌ಖಾಲಿ ಪ್ರದೇಶದ ಮಹಿಳೆಯರ ಮೇಲೆ ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ನಡೆಸಿದ ಆತ್ಯಾಚಾರ ಆರೋಪ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ ಬೆನ್ನಲ್ಲೇ ಪಕ್ಷದಲ್ಲಿ ರಾಜೀನಾಮೆ ತಲೆನೋವು ಹೆಚ್ಚಾಗಿದೆ.  

Latest Videos

click me!