ದೆಹಲಿ ವಿಶ್ವವಿದ್ಯಾನಿಲಯದಲ್ಲೊಂದು ವರ್ಜಿನ್ ಟ್ರೀ, ಕಾಂಡೋಂ ಕಟ್ಟಿ ಹರಕೆ!
First Published | Feb 5, 2021, 4:03 PM ISTಫೆಬ್ರವರಿ 7ರಿಂದ ವ್ಯಾಲಂಟೈನ್ ವೀಕ್ ಆರಂಭಗೊಳ್ಳಲಿದೆ. ಪ್ರೀತಿಯ ಈ ಹಬ್ಬದ ಸಂದರ್ಭದಲ್ಲಿ ಈ ಇಡೀ ವಾರ ವಿಭಿನ್ನ ದಿನಗಳನ್ನು ಆಚರಿಸಲಾಗುತ್ತದೆ. ಇದಾದ ಬಳಿಕ ಫೆಬ್ರವರಿ 14ರಂದು ವ್ಯಾಲಂಟೈನ್ಸ್ ಡೇ ಆಚರಿಸಲಾಗುತ್ತದೆ. ಇನ್ನು ಫೆಬ್ರವರಿ ಆರಂಭದಿಂದಲೇ ಪ್ರೇಮಿಗಳು ಈ ದಿನಕ್ಕಾಗಿ ಸಿದ್ಧತೆ ನಡೆಸುತ್ತಿರುತ್ತಾರೆ. ಆದರೆ ಸಿಂಗಲ್ಸ್ಗಳಿಗೆ ಮಾತ್ರ ಇದು ಬಹಳ ಕಷ್ಟದ ದಿನಗಳು. ಹೀಗಾಗೇ ದೆಹಲಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಕೆಲ ವರ್ಷದ ಹಿಂದಿನವರೆಗೆ ವರ್ಜಿನ್ ಟ್ರೀ ಪೂಜೆ ಮಾಡುವ ಪದ್ಧತಿ ಆಚರಣೆಯಲ್ಲಿತ್ತು. ಈ ಮರಕ್ಕೆ ಸಿಂಗಲ್ಸ್ ಕಾಂಡೋಂ ಕಟ್ಟುತ್ತಿದ್ದರು. ಇದರ ಹಿಂದೆ ವಿಶೇಷ ಕಾರಣವೂ ಇತ್ತು. ಆದರೆ ಕೆಲ ವರ್ಷದ ಹಿಂದೆ ಈ ಪದ್ಧತಿಗೆ ಬ್ರೇಕ್ ಹಾಕಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಈ ಪದ್ಧತಿ ಹಿಂದಿನ ಕಾರಣವೇನು? ಇದನ್ನು ನಿಲ್ಲಿಸಿದ್ದೇಕೆ? ಇಲ್ಲಿದೆ ವಿವರ