ಹೌದು 27 ವರ್ಷದ ಸಯಾಲಿ ಕಾಲೆ ಎಂಬ ಮಹಿಳೆಯೇ ಈ ಖತರ್ನಾಕ್ ಯುವತಿ. ಈಕೆ ಪುಣೆಯ ಪಿಂಪರೀ ಚಿಂಚ್‌ವಾಡಾ ನಿವಾಸಿ ಈ ಯುವತಿ ಶಿಕ್ಷಿತ ಮಹಿಳೆಯಾಗಿದ್ದು, ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಉದ್ಯೋಗವೂ ಮಾಡುತ್ತಿದ್ದಳು. ಆದರೆ ಕೊರೋನಾ ಕಾಲದಲ್ಲಿ ಉದ್ಯೋಗ ಕಳೆದುಕೊಂಡ ಈಕೆ ಹಣ ಗಳಿಸಲು ಬೇರೆಯೇ ಹಾದಿ ಕಂಡುಕೊಂಡಿದ್ದಾಳೆ.
undefined
ಆರಂಭದಲ್ಲಿ ಯುವಕರೊಂದಿಗೆ ಆಪ್ತವಾಗಿ ಮಾತನಾಡಿ, ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಬಳಿಕ ಅವರನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಳು. ಐಷಾರಾಮಿ ಹೋಟೆಲ್‌ನಲ್ಲಿ ಭೇಟಿಯಾಗಲು ತೆರಳುತ್ತಿದ್ದಳು. ಆಪ್‌ನಲ್ಲಿ ಈಕೆ ಅಪ್ಲೋಡ್ ಮಾಡುತ್ತಿದ್ದ ಪೋಟೋ ನೋಡಿದರೆ ಯಾರೇ ಆದರೂ ಫಿದಾ ಆಗುವಂತಿರುತ್ತಿದ್ದವು. ಇನ್ನು ಭೇಟಿಯಾಗಲು ತೆರಳುತ್ತಿದ್ದವರು ಕೂಡಾ ಆಕೆಯ ಹೈಪ್ರೊಫೈಲ್ ಲೈಫ್‌ಸ್ಟೈಲ್ ನೋಡಿ ಕ್ಲೀನ್ಬೋಲ್ಡ್ ಆಗುತ್ತಿದ್ದರು. ಆದರೆ ಈಕೆ ಮಾತನಾಡುತ್ತಿದ್ದ ಸರಳತೆಗೆ ಯಾರೇ ಆದರೂ ಆಕೆಗೆ ಮರುಳಾಗುತ್ತಿದ್ದರು. ಆಕೆಯ ನಯ ವಿನಯ ಕಂಡು ಆಕೆಯ ಮೇಲೆ ಡೌಟ್ ಕೂಡಾ ಮಾಡಲು ಸಾಧ್ಯವಿರಲಿಲ್ಲ.
undefined
ಆದರೆ ಕಳೆದ ತಿಂಗಳು ಚೆನ್ನೈನ ಆಶೀಷ್ ಕುಮಾರ್ ಎಂಬಾತ ಪೊಲೀಸರಿಗೆ ಸಯಾಲಿ ವಿರುದ್ಧ ದೂರು ನೀಡಿದ್ದ. ತನಗೆ ಆಪ್ ಮೂಲಕ ಸಯಾಲಿ ಪರಿಚಯವಾಗಿತ್ತು. ಬಳಿಕ ಆಕೆ ತನ್ನನ್ನು ಭೇಟಿಯಾಗಲು ಪುಣೆಗೆ ಕರೆದಿದ್ದಳು. ಅಲ್ಲಿ ಆಕೆ ತನ್ನ ಕೋಲ್ಡ್ ಡ್ರಿಂಕ್ಸ್‌ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಪ್ರಜ್ಞಾಹೀನಳನ್ನಾಗಿಸಿದಳು. ನನ್ನ ಮೈಮೇಲಿದ್ದ ಚಿನ್ನಾಭರಣ ದೋಚಿ ನಾಪತ್ತೆಯಾಗಿದ್ದಾಳೆಂದು ಈ ದೂರಿನಲ್ಲಿ ತಿಳಿಸಲಾಗಿತ್ತು.
undefined
ಪೊಲೀಸರು ಈ ಸಂಬಂಧ ತನಿಖೆ ನಡೆಸಿದಾಗ ಆಕೆ ಹದಿನಾರು ಯುವಕರನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ ಹೇಗೆ ಮೊಸ ಮಾಡಿದ್ದಳೆಂಬುವುದು ತಿಳಿದು ಬಂದಿದೆ. ಅನೇಕರ ಮನೆಗೆಡ ತೆರಳಿ ಲಕ್ಷಾಂತರ ರೂಪಾಯಿ ದೋಚಿದ್ದಳು ಕೂಡಾ. ಸಯಾಲಿ ವಿರುದ್ಧ ಇನ್ನೂ ನಾಲ್ಕು ಮಂದಿ ದೂರು ದಾಕಲಿಸಿದ್ದರು. ಪೊಲೀಸರು ಈವರೆಗೆ ಈ ಮಹಿಳೆಯಿಂದ 15,25,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
undefined
ಈ ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು ಸಯಾಲಿಯನ್ನು ನಾವು ಬಂಧಿಸಿದ್ದೇವೆ. ಈಕೆ ಟಿಂಡರ್ ಹಾಗೂ ಇತರ ಡೇಟಿಂಗ್ ಆಪ್‌ಗಳ ಮೂಲಕ ಯುವಕರನ್ನು ಸಂಪರ್ಕಿಸಿ ಮೋಸ ಮಾಡಿ ಹಣ ದೋಚುತ್ತಿದ್ದಳು. ಆರಂಭದಲ್ಲಿ ಪೊಲೀಸರ ತನಿಖೆ ಹಾದಿ ತಪ್ಪಿಸುವ ಯತ್ನ ಮಾಡಿದ್ದಳು. ಆದರೆ ಕೊನೆಗೂ ಆಕೆ ಸಿಕ್ಕಿ ಬಿದ್ದಿದ್ದಾಳೆ ಎಂದಿದ್ದಾರೆ.
undefined