ಶುದ್ಧವಾಯ್ತು ಗಾಳಿ, 200 ಕಿ. ಮೀ ದೂರದವರೆಗೆ ಕಾಣಿಸ್ತಿದೆ ಹಿಮಾಚಲದ ಬ್ಯೂಟಿ!
First Published | Apr 9, 2020, 5:30 PM ISTಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಹೇರಲಾಗಿದೆ. ಒಂದೆಡೆ ಈ ಲಾಕ್‌ಡೌನ್‌ನಿಂದ ಜನರು ಮನೆಉಒಳಗೆ ಕೈದಿಗಳಂತೆ ಬಂಧಿಯಾಗಿದ್ದಾರೆ. ಆದರೆ ಮತ್ತೊಂದೆಡೆ ಮಾಲಿನ್ಯ ಬಹಳ ಕಡಿಮೆಯಾಗುತ್ತಿದೆ. ಟ್ರಾಫಿಕ್ ಇಲ್ಲದೇ ವಾತಾವರಣ ಶುದ್ಧವಾಗಿದೆ. ಗಾಳಿ ಸ್ವಚ್ಛಗೊಂಡ ಪರಿಣಾಮ ಪಂಜಾಬ್‌ನ ಜಲಂಧರ್‌ನಿಂದ ಇನ್ನೂರು ಕಿ. ಮೀಟರ್ ದುದಲ್ಲಿರುವ ಹಿಮಾಚಲದ ಹಿಮದಿಂದಾವೃತವಾದ ಶಿಖರಗಳು ಗೋಚರಿಸಲಾರಂಭಿಸಿವೆ. ಜನರು ಮನೆ ಮಹಡಿಯಿಂದ ಹಿಮಾಚಲದ ಬ್ಯೂಟಿಯನ್ನು ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇಲ್ಲಿವೆ ನೊಡಿ ಕೆಲ ದೃಶ್ಯಗಳು