Published : Apr 06, 2020, 07:50 AM ISTUpdated : Apr 06, 2020, 07:56 AM IST
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ದೇಶಾದ್ಯಂತ ಭಾರತೀಯರು ಐಕ್ಯತಾ ದೀಪಗಳನ್ನು ಬೆಳಗುವ ಮೂಲಕ ರಾಷ್ಟ್ರದೆಡೆ ತಮ್ಮ ಒಗ್ಗಟ್ಟನ್ನು ತೋರಿಸಿದರು. ದೇಶದ ಉದ್ದಗಲಕ್ಕೂ ಬೆಳಗಿದ ದೀಪ ಮತ್ತೆ ದೀಪವಾಳಿ ಹಬ್ಬದಂತಿತ್ತು. ಕೊರೋನಾ ಕಾರ್ಮೋಡದಲ್ಲಿ ಏಕತಾನತೆ ಅನುಭವಿಸುತ್ತಿದ್ದ ಭಾರತೀಯರ ಮನಕ್ಕೆ ಈ ದೀಪ ಮುದ ನೀಡಿತು. ಅನೇಕರು ತಮ್ಮ ನಗರಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.. ಅದರಲ್ಲಿ ಕೆಲವು ನಗರಗಳ ಫೋಟೋಗಳು ಇಲ್ಲಿವೆ.