DSP ಆದ ಅಪ್ಪನ 'ರಾಜಕುಮಾರಿ': 'ಕಂದ'ನ ಭುಜದ ಮೇಲಿನ ಸ್ಟಾರ್ ನೋಡ್ತಾನೇ ನಿಂತ್ರು ತಂದೆ!

Published : May 09, 2020, 06:20 PM IST

ತಮಗೇನು ಸಿಗಲಿಲ್ಲವೋ, ಅದೆಲ್ಲವನ್ನೂ ತನ್ನ ಮಕ್ಕಳಿಗೆ ಒದಗಿಸುವ ಪ್ರಯತ್ನ ಪ್ರತಿಯೊಬ್ಬ ತಂದೆ ತಾಯಿಯದ್ದಾಗಿರುತ್ತದೆ. ಹೀಗಿರುವಾಗ ತನ್ನ ಮಗ ಅಥವಾ ಮಗಳು ಏನಾದರೂ ಸಾಧಿಸಿದಾಗ ತಂದೆ ತಾಯಿಯ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಬಹುತೇಕ ತಂದೆ ತಾಯಿ ತನ್ನ ಮಗ ಅಥವಾ ಮಗಳು ಅಧಿಕಾರಿಯಾಗಬೇಕು ಅಥವಾ ದೊಡ್ಡ ಹೆಸರು ಸಂಪಾದಿಸಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಹೀಗೇ ತನ್ನ ಮಗಳ ಬಗ್ಗೆ ಕನಸು ಇಟ್ಟುಕೊಂಡಿದ್ದ ತಂದೆಯೊಬ್ಬರು ಡಿಎಸ್‌ಪಿಯಾಗಿ ಮನೆಗೆ ಬಂದ ಮಗಳನ್ನು ಕಂಡು ಭಾವುಕರಾಗಿದ್ದಾರೆ, ಮಗಳ ಭುಜದ ಮೇಲಿದ್ದ ಸ್ಟಾರ್‌ಗಳನ್ನು ಕಂಡು ಆವುಕರಾದ ತಂದೆ ಅವುಗಳನ್ನು ರೆಪ್ಪೆ ಅಲುಗಾಡಿಸದೆ ನೋಡುತ್ತಾ ನಿಂತಿದ್ದಾರೆ. ಈ ವೇಳೆ ಮಗಳೂ ತಂದೆಯ ಕನಸು ಸಾಕಾರಗೊಳಿಸಿದ ಖುಷಿಯಲ್ಲಿ, ತಂದೆಯ ಕಣ್ಗಳಲ್ಲಿ ಮೂಡಿದ ಖುಷಿಯನ್ನು ನೋಡುತ್ತಾ ನಿಂತಿದ್ದಾಳ. ಸದ್ಯ ಈ ಫೋಟೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಅಷ್ಟಕ್ಕೂ ಈ ಮಹಿಳಾ ಅಧಿಕಾರಿ ಯಾರು? ಇಲ್ಲಿದೆ ವಿವರ

PREV
111
DSP ಆದ ಅಪ್ಪನ 'ರಾಜಕುಮಾರಿ': 'ಕಂದ'ನ ಭುಜದ ಮೇಲಿನ ಸ್ಟಾರ್ ನೋಡ್ತಾನೇ ನಿಂತ್ರು ತಂದೆ!

ತಂದೆ ಮಗಳ ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಸದ್ಯ ಭಾರೀ ವೈರಲ್ ಆಗಿದ್ದು, ಇದು ಅನೇಕರನ್ನು ಭಾವುಕರನ್ನಾಗಿಸಿದೆ. ಈ ಫೋಟೋ ಶೇರ್ ಮಾಡಿರುವ ಅಮಿತ್ ಪಂಚಾಲ್ ಅನ್ವಯ ಇದು ಮಣಿಪುರದ ರಾಜಧಾನಿ ಇಂಫಾಲಾದ ಮಹಿಳಾ ಡಿಎಸ್‌ಪಿ ಅವರದ್ದೆಂದು ಹೇಳಲಾಗಿದೆ. ಫೋಟೋದಲ್ಲಿ ಅವರ ತಂದೆ ಬಹಳ ಹೆಮ್ಮೆಯಿಂದ ಮಗಳು ಧರಿಸಿದ್ದ ಸಮವಸ್ತ್ರದ ಮೇಲಿದ್ದ ಸ್ಆರ್‌ಗಳನ್ನು ನೋಡುತ್ತಿದ್ದಾರೆ.

211

ಮಹಿಳಾ ಪೊಲೀಸ್ ಅಧಿಕಾರಿ ರತ್ತನ್ನಾ ನಾಗಸೆಪ್ಪಂ ಹಾಗೂ ಅವರ ತಂದೆ. ಫೋಟೋದಲ್ಲಿ ರತ್ತನ್ನಾ ಪೊಲೀಸ್ ಯೂನಿಫಾರಂನಲ್ಲಿ ಕಂಡು ಬಂದರೆ, ಅವರ ತಂದೆ ಖುಷಿಯಿಂದ ಮಗಳ ಭುಜವನ್ನು ದಿಟ್ಟಿಸಿ ಸ್ಆರ್‌ಗಖನ್ನು ನೋಡುತ್ತಿದ್ದಾರೆ. ಹೀಗಿರುವಾಗ ಮಗಳು ತಂದೆಯ ಕನಸು ಸಾಕಾರಗೊಳಿಸಿದ ಖುಷಿಯಲ್ಲಿ ತಂದೆಯನ್ನೇ ನೋಡುತ್ತಿದ್ದಾರೆ.

311

ವೈರಲ್ ಆದ ಫೋಟೋದಲ್ಲಿ ತಂದೆ ಹಾಗೂ ಮಗಳು ಇಬ್ಬರ ಮುಖದಲ್ಲೂ ಹೆಮ್ಮೆ ಇದೆ. ಹೀಗಾಗೇ ಇದು ಅನೇಕರನ್ನು ಆಕರ್ಷಿಸಿದೆ. ಒಂದೆಡೆ ತಂದೆಯ ಕನಸು ಸಾಕಾರಗೊಳಿಸಿದ ಹೆಮ್ಮೆ ಮಗಳದ್ದಾದರೆ, ಮಗಳು ಇಷ್ಟು ದೊಡ್ಡ ಸಾಧನೆ ಮಾಡಿದಳೆಂಬ ಹೆಮ್ಮೆ ತಂದೆಯಲ್ಲಿದೆ. ನಟಿ ರವೀನಾ ಟಂಡನ್ ಹಾಗೂ ಆಥಿಯಾ ಶೆಟ್ಟಿ ಸೇರಿ ಅನೇಕ ಮಂದಿ ಈ ಫೊಟೋ ರೀಟ್ವೀಟ್ ಮಾಡಿದ್ದಾರೆ. 

411

ಗುರುವಾರ ಅಮಿತ್ ಪಂಚಾಲ್ ಈ ಪೋಟೋ ಟ್ವೀಟ್ ಮಾಡಿದ್ದು, ಇದು ಕ್ಷಣಾರ್ಧದಲ್ಲಿ ವೈರಲ್ ಆಯ್ತು. 

511

ಟ್ವಿಟರ್‌ನಲ್ಲಿ ಸಿಗ್ತಿದೆ ಲೈಕ್ಸ್: ವೈರಲ್ ಆದ ಫೋಟೋ  ಬಾರೀ ಜನ ಮನ್ನಣೆ ಗಳಿಸಿದ್ದು, ಜನರು ಲೈಕ್ ಮಾಡಲಾರಂಭಿಸಿದ್ದಾರೆ.

611

ಅನೇಕ ಮಂದಿ ರತ್ತನ್ನಾ ಬಹಳ ಸುಂದರವಾಗಿದ್ದಾರೆ ಎಂದರೆ, ಇನ್ನು ಅನೇಕ ಮಗಳ ಸಾಧನೆಗೆ ತಂದೆಗೆ ಶುಭಾಶಯ ಕೋರಿದ್ದಾರೆ. ನೆಟ್ಟಿಗನೊಬ್ಬ ಗೌರವಾನ್ವಿತ ತಂದೆಯ, ಗೌರವಾನ್ವಿತ ಮಗಳು ಎಂದು ಕಮೆಂಟ್ ಮಾಡಿದ್ದಾರೆ. 

711

ಮತ್ತೊಬ್ಬ ಟ್ವಿಟರ್ ಬಳಕೆದಾರ ಇದು ಮಹಿಳಾ ಸಬಲೀಕರದ ಅಸಲಿ ಮುಖ ಎಂದಿದ್ದಾರೆ.

811

ಇದಕ್ಕೂ ಮೊದಲು ಪೊಲೀಸ್ ಅಧಿಕಾರಿ ರತ್ತನ್ನಾ ಕುರಿತು ಜನರಿಗೆ ತಿಳಿದಿತ್ತೋ ಇಲ್ಲವೋ, ಆದರೆ ಇವತ್ತು ಅವರು ದೇಶಾದ್ಯಂತ ಫೇಮಸ್ ಆಗಿದ್ದಾರೆ.

911

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರತ್ತನ್ನಾ ಫೇಸ್‌ಬುಕ್‌ನಲ್ಲಿ ತಮ್ಮ ಫೋಟೋ ಶೇರ್ ಮಾಡುತ್ತಿರುತ್ತಾರೆ. ಇಲ್ಲಿ ಬಹುತೇಕ ಫೋಟೋ ಹಾಗೂ ವಿಡಿಯೋಗಳಲ್ಲಿ ಅವರು ತಮ್ಮ ತಂದೆಯೊಂದಿಗಿರುವುದನ್ನು ನೋಡಬಹುದಾಗಿದೆ. ತಂದೆಯ ಮುದ್ದಿನ ಮಗಳಾಗಿರುವ ರತ್ತನ್ನಾ, ಅವರೊಂದಿಗೆ ಪೂಜೆ ಮಾಡುವ, ಡ್ರೈವಿಂಗ್ ಕಲಿಯುವ ಹೀಗೆ ಅನೇಕ ವಿಡಿಯೋಗಳಲ್ಲಿ ಕಂಡು ಬಂದಿದ್ದಾರೆ.

1011

ಫೇಸ್‌ಬುಕ್‌ನಲ್ಲಿ ಅವರು ತಮ್ಮ ಕೆಲಸದ ಸಂಬಂಧಿತ ಮಾಹಿತಿಯನ್ನೂ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಡಿಎಸ್‌ಪಿ ಆಗಿರುವ ಅವರು ಸದ್ಯ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

1111

ದೆಹಲಿ ವಿಶ್ವವಿದ್ಯಾನಿಲಯ ಹಾಗೂ ಜೆಎನ್‌ಯುನಲ್ಲಿ ವಿದ್ಯಾಭ್ಯಾಸ ಪಡೆದಿರುವ ಅವರು ಇಂಫಾಲಾದಲ್ಲೇ ಉಳಿದುಕೊಂಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಸ್ಟಾರ್ ಆಗಿರುವ ರತ್ತನ್ನಾರವರ ಎಲ್ಲಾ ಫೋಟೋಗಳನ್ನು ಅವರ ಸೋಶಿಯಲ್ ಮೀಡಿಯಾದಿಂದಲೇ ತೆಗೆದುಕೊಳ್ಳಲಾಗಿದೆ.

click me!

Recommended Stories