ಉಸಿರಾಡೋ ಗಾಳಿಯೇ ವಿಷವಾದಾಗ: ವಿಷಾನಿಲ ಸೇವಿಸಿ ನರಳಾಡಿದ ಜನ!

First Published | May 7, 2020, 1:38 PM IST

ಆಂಧ್ರಪ್ರದೇಶದ ವಿಶಾಖಪಟ್ಟಣಂನ ರಾಸಾಯನಿಕ ಕಾರ್ಖಾನೆ ನಿರ್ಲಕ್ಷಯದಿಂದ ಸೋರಿಕೆಯಾದ ಅನಿಲ, ಉಸಿರಾಡುವ ಗಾಳಿಯನ್ನೇ ವಿಷವನ್ನಾಗಿ ಮಾರ್ಪಾಡು ಮಾಡಿದೆ. ಈ ವಿಷ ಗಾಳಿ ಸೇವಿಸಿದ ಹತ್ತು ಮಂದಿ ಸಾವನ್ನಪ್ಪಿದ್ದು, ಇನ್ನೂರಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಈ ದುರಂತ ಭೋಪಾಲ್‌ ಅನಿಲ ಸೋರಿಕೆ ದುರಂತವನ್ನು ಮತ್ತೆ ನೆನಪಿಸಿದೆ. ಈಗಾಗಲೇ ಪಿಎಂ ಮೋದಿ ಈ ಸಂಬಂಧ ರಾಷ್ಟ್ರೀಯ ವಿಪತ್ತು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಇವೆಲ್ಲದರ ನಡುವೆ ಇತ್ತ ಕಾರ್ಖಾನೆ ಆಸುಪಾಸಿನಲ್ಲಿ ಕರುಣಾಜನಕ ಪರಿಸ್ಥಿತಿ ನಿರ್ಮಾಣವಾಗಿದ್ದು, ನಡೆದುಕೊಂಡು ಹೋಗುತ್ತಿದ್ದ ಜನರು ಅಲ್ಲಲ್ಲೇ ಕುಸಿದು ಬೀಳಲಾರಂಭಿಸಿದ್ದಾರೆ.  
 

ಕಾರ್ಖಾನೆಯೊಂದರ ನಿರ್ಲಕ್ಷ್ಯದಿಂದಾಗಿ ಸೋರಿಕೆಯಾದ ಅನಿಲದಿಂದ ದಿನ ಬೆಳಗಾಗುತ್ತಿದ್ದಂತೆಯೇ ಉಸಿರಾಡುವ ಗಾಳಿಯೂ ವಿಷಚವಾಗಿ ಮಾರ್ಪಾಡಾಗಿದ್ದು, ಇಬ್ಬರು ಮಕ್ಕಳು ಸೇರಿ ಹತ್ತು ಮಂದಿಯನ್ನು ಬಲಿ ಪಡೆದಿದೆ. ಅಲ್ಲದೇ ಇನ್ನೂರಕ್ಕೂ ಅಧಿಕ ಮಂದಿ ಇದರಿಂದ ಅಸ್ವಸ್ಥರಾಗಿದ್ದಾರೆ
undefined
ಹೌದು ವಿಷಾನಿಲ ಸೋರಿಕೆಯಿಂದಾಗಿ ಇಬ್ಬರು ಮಕ್ಕಳು ಸೇರಿ ಒಟ್ಟು ಹತ್ತು ಮಂದಿ ಮೃತಪಟ್ಟಿದ್ದು, ಇನ್ನೂರಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇವರೆಲ್ಲರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
undefined

Latest Videos


ವಿಶಾಖಪಟ್ಟಣಂನ ಆರ್​ಆರ್​ ವೆಂಕಟಾಪುರಂ ಗ್ರಾಮದ ಬಳಿ ಇಂದು ಬೆಳಗ್ಗೆ 3 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದೆ. ಇಲ್ಲಿನ ಎಲ್​ಜಿ ಪಾಲಿಮರ್ಸ್ ಇಂಡಸ್ಟ್ರಿ ರಾಸಾಯನಿಕ ಕಾರ್ಖಾನೆಯಲ್ಲಿ ಗ್ಯಾಸ್​ ಸೋರಿಕೆಯಾದ ಪರಿಣಾಮ ಆಸುಪಾಸಿನ ಪ್ರದೇಶಕ್ಕೆ ವಿಷಾನಿಲ ಹರಡಿದೆ.
undefined
ಈ ವಿಚಾರ ತಿಳಿಯದೆ ಮುಂಜಾನೆ ವಾಕಿಂಗ್​ಗೆ ಹೊರಗೆ ಬಂದಿದ್ದ ಅನೇಕ ಮಂದಿರು ಅಸ್ವಸ್ಥರಾಗಿ ರಸ್ತೆಯಲ್ಲೇ ಬಿದ್ದಿದ್ದಾರೆ.
undefined
ಈ ವಿಷಾನಿಯಲ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಗೆ ಹರಡಿರಬಹುದು ಎಂದು ಅಂದಾಜಿಸಲಾಗಿದೆ.
undefined
ಇನ್ನು ಅನೇಕ ಮಂದಿ ತಮ್ಮ ಸುತ್ತಲೂ ಏನಾಗುತ್ತಿದೆ ಎಂದು ತಿಳಿಯದೆ, ಪರಿಸ್ಥಿತಿ ಕಂಡು ಭಯಭೀತರಾಗಿ ಓಡಿ ಹೋಗಿದ್ದಾರೆ.
undefined
ಅಘಟನಾ ಸ್ಥಳಕ್ಕೆ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ. ವಿನಯ್ ಚಾಂದ್ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಬೇಕಾದ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ.
undefined
ಇನ್ನು ಸ್ಥಳಕ್ಕೆ ಆಂಧ್ರ ಪ್ರದೇಶದ ಮುಖ್ಯಮಮತ್ರಿ ಜಗನ್‌ ಭೇಟಿ ನೀಡಲಿದ್ದಾರೆ.
undefined
ಇತ್ತ ಪ್ರಧಾನಿ ನರೇಂದ್ರ ಮೋದಿ ಕೂಡಾ ರಾಷ್ಟ್ರೀಯ ವಿಪತ್ತು ಪ್ರಾಧಿಕಾರ ಅಧಿಕಾರಿಗಳ ತುರ್ತು ಸಭೆ ಕರೆದು ಮಾಹಿತಿ ಪಡೆದಿದ್ದಾರೆ.
undefined
ಆಂಧ್ರಪ್ರದೇಶದ ಈ ವಿಷಾನಿಲ ಸೋರಿಕೆ ಪ್ರಕರಣ 1984ರ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ಭೋಪಾಲ್‌ನ ರಾಸಾಯನಿಕ ಕಾರ್ಖಾನೆಯಲ್ಲಿ ನಡೆದಿದ್ದ ಗ್ಯಾಸ್ ಸೋರಿಕೆಯ ಕರಾಳ ಘಟನೆಯನ್ನು ನೆನಪಿಸಿದೆ.
undefined
ವಿಶ್ವದ ಅತ್ಯಂತ ಘೋರ ವಿಷಾನಿಲ ದುರಂತ ಎನ್ನಲಾಗುವ ಭೋಪಾಲ್ ಗ್ಯಾಸ್ ಟ್ರಾಜಿಡಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ಇದರಿಂದ ಸಮಸ್ಯೆಗೀಡಾಗಿದ್ದರು.
undefined
ವೃದ್ಧರು, ಹಿರಿಯರು, ಮಕ್ಕಳು ಹೀಗೆ ಎಲ್ಲರನ್ನೂ ಈ ವಿಷಾನಿಲ ಸೇವಿಸಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ.
undefined
ಮನುಷ್ಯರು ಮಾತ್ರವಲ್ಲದೇ ಮೂಕ ಪ್ರಾಣಿಗಳನ್ನೂ ಈ ವಿಪ ಅನಿಲ ಬಲಿ ಪಡೆದುಕೊಂಡಿದೆ.
undefined
ಮುದ್ದಿನ ನಾಯಿಯನ್ನೂ ಈ ವಿಷಾನಿಲ ಕಾಡಿದ್ದು, ಅದನ್ನುಳಿಸಲು ಮಾಲೀಕ ಹೊತ್ತುಕೊಂಡು ಸಾಗುತ್ತಿರುವ ಮಾಲೀಕ
undefined
ನಿಂತಲ್ಲೇ ಶವವಾದ ಜನ: ವಿಷಾನಿಲ ಏಹ ಸೇರುತ್ತಿದ್ದಂತೆ ಜನರು ನಿಂತ ನಿಂತಲ್ಲೇ ಶವವಾಗಿದ್ದಾರೆ. ವಿಶಾಖಪಟ್ಟಣಂನಲ್ಲಿ ಚರಂಡಿಯಲ್ಲಿ ಬಿದ್ದಿರುವ ಜನ.
undefined
ಹೇಗಾದರೂ ಮಾಡಿ ತಮ್ಮವರ ಪ್ರಾಣ ಉಳಿಸಿಕೊಳ್ಳಲು ಜನರ ಪರದಾಟ
undefined
click me!