ಅಂದು ರೈಲ್ವೆ ನಿಲ್ದಾಣದ ನಿವಾಸಿ ಇಂದು ದೇಶದ ಮಾದರಿ ಡಿಸಿ

First Published May 7, 2020, 7:19 PM IST

ಬಡತನದಲ್ಲಿ ಹುಟ್ಟಿ, ಕಷ್ಟ ಪಟ್ಟು ರೈಲ್ವೇಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಈ ರೋನಾಲ್ಡ್ ರೋಸ್ ಒಂದು ಕಾಲದಲ್ಲಿ ರೈಲ್ವೆ ಸ್ಟೇಷನ್‌ನಲ್ಲಿಯೇ ಮಲಗುತ್ತಿದ್ದರು. ಪ್ರವಾಹ ಪೀಡಿತರ ಸಹಾಯಕ್ಕೆ ಹೋದಾಗ ಜೀವನದಲ್ಲಿ ಮಹತ್ತರವಾದದ್ದನ್ನು ಸಾಧಿಸಿಬೇಕೆಂದುಕೊಂಡು ಐಎಎಸ್ ಪಾಸ್ ಮಾಡಿದವರು. ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರ ನಂತರ ಬುಡಕಟ್ಟು ಜನಾಂಗದ ಪ್ರಗತಿಗೆ ಸಹಕರಿಸಿ, ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಅಮೋಘ. ಇಂಥ ಸಾಧಕನ ಪರಿಚಯವಿದು....

ಬಡತನದಲ್ಲಿ ಹುಟ್ಟುವುದು ತಪ್ಪಲ್ಲ ಆದರೆ ಬಡತನದಲ್ಲೇ ಸಾಯುವುದು ತಪ್ಪು. ಸಾಧಿಸುವ ಛಲವಿದ್ದರೆ, ಸಾಧನೆಯ ಹಾದಿಯಲ್ಲಿ ಸ್ಪಷ್ಟತೆಯಿದ್ದರೆ, ನಮ್ಮ ಗುರಿಯ ಬಗ್ಗೆ ನಮಗೆ ಗೌರವ ಇದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬುದನ್ನು ನಿರೂಪಿಸಿದ್ದಾರೆ ದೇಶ ಕಂಡ ಈ ಅಪರೂಪದ ಡಿಸಿ .
undefined
ಬಡತನದಲ್ಲಿ ಹುಟ್ಟುವುದು ತಪ್ಪಲ್ಲ ಆದರೆ ಬಡತನದಲ್ಲೇ ಸಾಯುವುದು ತಪ್ಪು. ಸಾಧಿಸುವ ಛಲವಿದ್ದರೆ, ಸಾಧನೆಯ ಹಾದಿಯಲ್ಲಿ ಸ್ಪಷ್ಟತೆಯಿದ್ದರೆ, ನಮ್ಮ ಗುರಿಯ ಬಗ್ಗೆ ನಮಗೆ ಗೌರವ ಇದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬುದನ್ನು ನಿರೂಪಿಸಿದ್ದಾರೆ ದೇಶ ಕಂಡ ಈ ಅಪರೂಪದ ಡಿಸಿ .
undefined
ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿದ್ದರೂ ವಾಸವಿರುತ್ತಿದ್ದದ್ದು ಮಾತ್ರ ರೈಲು ನಿಲ್ದಾಣದಲ್ಲಿ, ಅಲ್ಲಿನ ಎಲ್ಲಾ ಸೌಕರ್ಯಗಳನ್ನು ತನ್ನ ಜೀವನಾಧಾರವಾಗಿ ಬಳಸಿಕೊಂಡು ಅವೆಲ್ಲವನ್ನೂ ತನ್ನ ಯಶಸಿನ್ನ ಭಾಗವಾಗಿರಿಸಿಕೊಂಡಿದ್ದಾರೆ.
undefined
ಅದೊಂದು ದಿನ ಪ್ರವಾಹ ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾಗ, ಆದ ಅನುಭವಗಳೇ ಐಎಎಸ್ ಅಧಿಕಾರಿಯಾಗಲೇಬೇಕೆಂಬ ಛಲಕ್ಕೆ ಪ್ರೇರಣೆಯಾದವು. ಇದೀಗ ಪರಿಶ್ರಮ ಮತ್ತು ನಂಬಿಕೆಯ ಹಳಿ ಮೇಲೆ ಸಾಧನೆಯ ರೈಲು ಹತ್ತಿ ಯಶಸ್ಸಿನ ಹೊಸತೊಂದು ನಿಲ್ದಾಣ ತಲುಪಿರುವ ಈ ಅಪರೂಪದ ಸಾಧಕನ ಹೆಸರೇ ರೊನಾಲ್ಡ್ ರೋಸ್ .
undefined
ತೆಲಂಗಾಣ ರಾಜ್ಯದ ಮೆಹಬೂಬಾ ನಗರ್ ಜಿಲ್ಲೆಯ ಈಗಿನ ಜಿಲ್ಲಾಧಿಕಾರಿ ರೊನಾಲ್ಡ್ . ಇವರು ಡಿಸಿಯಾಗಿ ಅಧಿಕಾರವಹಿಸಿಕೊಂಡ ನಂತರ ಆ ಭಾಗದಲ್ಲಾಗಿರುವ ಅಭಿವೃದ್ಧಿ, ಬದಲಾವಣೆ , ಅಲ್ಲಿನ ಜನರು ಇವರ ನಿರ್ಧಾರಗಳಿಗೆ ಸ್ಪಂದಿಸುತ್ತಿರುವ ರೀತಿ ನಿಜಕ್ಕೂ ಶ್ಲಾಘನೀಯ ಮತ್ತು ಅವು ದೇಶದ ಗಮನ ಸೆಳೆದಿರುವುದು ಸುಳ್ಳಲ್ಲ.
undefined
ಪ್ರತೀ ಮನೆಗಳಲ್ಲೂ ಮಳೆ ನೀರಿಂಗಲು ಇಂಗುಗುಂಡಿ ತೋಡಿರುವುದರಿಂದ ಬರಗಾಲ ಮಾಯವಾಗಿ ನೀರಿನ ತೊಂದರೆಯೇ ಇಲ್ಲದಂತಾಗಿದೆ . ಹಸಿರು ಜಿಲ್ಲೆಯ ನಿರ್ಮಾಣಕ್ಕಾಗಿ ‘ಹರಿತ ಹಾರಂ' ಕಾರ್ಯಕ್ರಮದನ್ವಯ ಪ್ರತಿ ತಾಲೂಕಿಗೆ 40 ಸಾವಿರದಂತೆ 3.4 ಕೋಟಿ ಗಿಡಗಳನ್ನು ಬೆಳೆಸಿ ನಿಲ್ಲಿಸಲಾಗಿದೆ.
undefined
ತೆಲಂಗಾಣ ಕೇಡರ್‌ನ 2006ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ರೊನಾಲ್ಡ್ ರೋಸ್ ಮೊದಲು ತನ್ನ ಸೇವೆ ಆರಂಭಿಸಿದ್ದು ಗುಡ್ಡಗಾಡು ಹಾಗೂ ಬುಡಕಟ್ಟು ಜನರ ಅಭಿವೃದ್ಧಿಯ ವಿಭಾಗದಲ್ಲಿ. ರೊನಾಲ್ಡ್ ಬುಡಕಟ್ಟು ಜನರ ಸಮಸ್ಯೆಗಳನ್ನು ಗುರುತಿಸಿ, ಅವಕ್ಕೆ ಪರಿಹಾರ ಕಲ್ಪಿಸಿಕೊಡುವ ಮೂಲಕ ಆಶಾಕಿರಣವೆನಿಸಿದರು. ಅಲ್ಲಿಂದ ಅವರು ನಿಯೋಜಿತಗೊಂಡಿದ್ದು ಗ್ರೇಟರ್ ಹೈದರಾಬಾದ್‌ನ ಮಹಾನಗರ ಪಾಲಿಕೆಗೆ ಆಯುಕ್ತರಾಗಿ. ನಂತರ ನಿಜಾಮುದ್ದಿನ್ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು .
undefined
ರೊನಾಲ್ಡ್ ಅವರಿಗೆ ಜೀವನದಲ್ಲಿ ಕಷ್ಟಗಳು ಹೊಸತೇನಲ್ಲ ಎಲ್ಲ ರೀತಿಯ ಸಮಸ್ಯೆಗಳನ್ನು ಬಲ್ಲವರಾಗಿದ್ದ ಇವರು ಅವುಗಳ ಮಧ್ಯೆಯೇ ಅರಳಿ ನಿಂತವರು. ಜನರ ಪ್ರತಿಯೊಂದು ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ , ಅದಕ್ಕೊಂದು ಸೂಕ್ತವಾದ ಪರಿಹಾರ ದಕ್ಕಿಸಿವಲ್ಲಿ ಯಶಸ್ವಿಯಾಗಿದ್ದಾರೆ ಜೊತೆಗೆ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.
undefined
ಗ್ರಾಮೀಣ ಭಾಗದ ಜನರ ಸಂಕಷ್ಟಗಳನ್ನೂ ಪರಿಹರಿಸುವುದೇ ಮೊದಲ ಆದ್ಯತೆಯಾಗಿರಿಸಿಕೊಂಡಿದ್ದ ರೊನಾಲ್ಡ್ ಅವರು ಅಲ್ಲಿನವರ ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣವೇ ಅಭಿವೃದ್ಧಿಯ ಮೂಲ ಅಡಿಪಾಯವಾಗಿರಿಸಿಕೊಂಡಿದ್ದರು ಅವಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು. ಇವರ ಆಶಯಗಳಿಗೆ ಜನರು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದದ್ದು ಇಲ್ಲಿ ಮೆಚ್ಚಬೇಕಾದ ವಿಷಯ .
undefined
ಡಿಸಿಯಾಗಿ ಇಷ್ಟೊಳ್ಳೆ ಯೋಜನೆಗಳನ್ನು ಸಾಕಾರಗೊಳಿಸಲು ಪ್ರೇರಣೆ ನೀಡಿದ್ದು ಮಾತ್ರ ಒಡಿಶಾದಲ್ಲಿ ಸಂಭವಿಸಿದ ಭೀಕರ ಚಂಡಮಾರುತ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಮಯದಲ್ಲಿ ನಾವೇಕೆ ಅಲ್ಲಿನ ಜನರ ಸೇವೆ ಮಾಡಬಾರದೆಂದು ಯೋಚಿಸಿ ಸಿದ್ದರಾಗಿ ಹೊರಟು ಅಲ್ಲಿನ ಎಲ್ಲಾ ವಯೋಮಾನದ ಜನರ ಸ್ಥಿತಿಯನ್ನು ಅವಲೋಕಿಸಿ ಎಲ್ಲಾ ರೀತಿಯ ಸಹಾಯವನ್ನು ಸೇವೆಯ ರೂಪದಲ್ಲಿ ಮಾಡುತ್ತಿರುವಾಗ, ಇವರಿಗೆ ಹೊಸ ಹೊಸ ಆಲೋಚನೆಗಳು ಮೂಡಿ ಐಎಎಸ್ ಅಧಿಕಾರಿಯಾಗುವ ಆಸೆ ಮೂಡುತ್ತದೆ ಎನ್ನುತ್ತಾರೆ ರೊನಾಲ್ಡೊ .
undefined
ಜಿಲ್ಲಾಧಿಕಾರಿಯಾಗಿ ಈಗಲೂ ಅದೇ ಕಠಿಣ ಪರಿಶ್ರಮದ ಬದುಕನ್ನು ಮುಂದುವರಿಸಿದ್ದಾರೆ. ಎಲ್ಲ ಸೌಲಭ್ಯಗಳಿದ್ದರೂ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಸರಳವಾಗಿಯೇ ಬದುಕುತ್ತಿದ್ದಾರೆ. ಇವರ ಈಗ ಗುರಿ ಸಮಾಜದ ಕೆಳವರ್ಗದವರಿಗೆ, ದುರ್ಬಲರಿಗೆ, ಗ್ರಾಮೀಣ ಮುಗ್ಧ ಜನರಿಗೆ ಸೌಲಭ್ಯ ದೊರಕಿಸಿಕೊಡುವುದು. ಈ ಮೂಲಕ ಉಳಿದೆಲ್ಲರಿಗೂ ಮಾದರಿಯಾಗಿದ್ದಾರೆ.
undefined
ಇಂಥವರ ಸಂತತಿ ಮತ್ತಷ್ಟು ಹೆಚ್ಚಲಿ ಎನ್ನುವುದೇ ನಮ್ಮೆಲ್ಲರ ಆಶಯ.
undefined
click me!