ಕೊರೋನಾ ಹೆಚ್ಚಾದ ಕಾರಣ 4 ರಾಜ್ಯಗಳಲ್ಲಿ ಹೊಸ ನಿರ್ಬಂಧ, ಮತ್ತೆ ಎದುರಾಯ್ತು ಸಂಕಷ್ಟ!

Published : Mar 06, 2021, 10:05 PM IST

ಭಾರತದಲ್ಲಿ ಕೊರೋನಾ ವೈರಸ್ ಕ್ಷೀಣಿಸುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ಆತಂಕ ಎದುರಾಗಿದೆ. ಒಂದೊಂದೆ ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಈ ನಾಲ್ಕು ರಾಜ್ಯಗಳು ಹೊಸ ನಿರ್ಬಂಧ ಹೇರಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

PREV
17
ಕೊರೋನಾ ಹೆಚ್ಚಾದ ಕಾರಣ 4 ರಾಜ್ಯಗಳಲ್ಲಿ ಹೊಸ ನಿರ್ಬಂಧ, ಮತ್ತೆ ಎದುರಾಯ್ತು ಸಂಕಷ್ಟ!

ಕೊರೋನಾ ಪ್ರಕರಣಗಳು ಎಚ್ಚರಿಕೆ ಕರೆ ಗಂಟೆ ನೀಡುತ್ತಿದೆ. ನೆರೆ ರಾಜ್ಯಗಳಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕದಲ್ಲೂ ಪ್ರಕರಣಗಳು ಹೆಚ್ಚಾಗುತ್ತಿವೆ.  ಇತ್ತೆ ಕೆಲ ರಾಜ್ಯಗಳು ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿದೆ.

27

ದಿಢೀರ್ ಕೊರೋನಾ ಏರಿಕೆಯಾಗಿರುವ ಪಂಜಾಬ್ ಇದೀಗ ರಾತ್ರಿ ಕರ್ಫ್ಯೂ ವಿಧಿಸಿದೆ. ಜಲಂಧರ್, ಶಹೀದ್ ಭಗತ್ ಸಿಂಗ್ ನಗರ, ಕಪುರ್ತಲ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. 

37

ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ವಿಧಿಸಲಾಗಿದೆ. ಸಭೆ ಸಮಾರಂಭಗಳಿಗ ಕೆಲ ನಿರ್ಬಂಧ ವಿಧಿಸಲಾಗುತ್ತಿದೆ. ಶನಿವಾರ ಒಂದಿ ದಿನ ಪಂಜಾಬ್‌ನಲ್ಲಿ 1,179 ಪ್ರಕರಣಗಳು ದಾಖಲಾಗಿದೆ.

47

ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 10,187 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ವ್ಯಾಪಕವಾಗಿ ಹರಡುತ್ತಿರುವ ಕಾರಣ ಈಗಾಗಲೇ ಹಲವು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ, ಕಾರ್ಯಕ್ರಮಗಳಿಗೆ ನಿಷೇಧ, ಶಾಲಾ ಕಾಲೇಜು ಬಂದ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ

57

ಮುಂಬೈ, ನವಿ ಮುಂಬೈ, ಪುಣೆ, ಪಿಂಪ್ರಿ, ಚಿಂಚಿವಾಡ್, ನಾಸಿಕ್, ಔರಂಗಬಾದ್ ಸೇರಿದಂತೆ ಮಹಾರಾಷ್ಟ್ರ ಬಹುತೇಕ ಕಡೆ ನಿರ್ಬಂಧ ಹೇರಲಾಗಿದೆ. ಜನರ ಓಡಾಟ, ಕಾರ್ಯಕ್ರಮ ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

67

ಮಧ್ಯ ಪ್ರದೇಶದ ಬಾಲಘಟ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಭೋಪಾಲ್‌ ನಗರದಿಂದ 450 ಕಿಲೋಮೀಟರ್ ದೂರದಲ್ಲಿರುವ ಬಾಲಘಟ ಜಿಲ್ಲೆಯಲ್ಲಿ ಕೊರೋನ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಮಧ್ಯಪ್ರದೇಶದಲ್ಲಿ ಶುಕ್ರವಾರ 457 ಹೊಸ ಕೊರೋನ ಪ್ರಕರಣ ದಾಖಲಾಗಿದೆ.

77

ಗುಜರಾತ್‌ನ ಅಹಮ್ಮದಾಬಾದ್, ಸೂರತ್, ವಡೋದರ, ರಾಜ್‌ಕೋಟ್‌ನಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಮಾರ್ಚ್ 10ರ ವರೆಗೆ ಹೊಸ ನಿರ್ಬಂಧ ಜಾರಿ ಮಾಡಲಾಗಿದೆ. ಆದರೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ನಿರ್ಬಂಧ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಿದೆ.

click me!

Recommended Stories